ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಶನ್‌ನ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ʻಕರಟಕ ದಮನಕʼ (Karataka Damanaka)ಸಿನಿಮಾದ ಕ್ಯಾರೆಕ್ಟರ್ ಟೀಸರ್ ಫೆ.28ರಂದು ಸುದೀಪ್ ಬಿಡುಗಡೆ ಮಾಡಿದರು. ಸುದೀಪ್ ಅವರು ಶಿವಣ್ಣ ಅವರ ಅದೆಷ್ಟೋ ಸಿನಿಮಾ ಕಾರ್ಯಕ್ರಮಗಳಿಗೆ ಅಥಿಯಾಗಿ ಭಾಗಿಯಾಗಿದ್ದಾರೆ. ಜತಗೆ ಶಿವಣ್ಣ ಅವರಿಗೆ ಸಾಥ್ ಕೂಡ ಕೊಟ್ಟಿದ್ದಾರೆ. ಇದೀಗ ಸುದೀಪ್ ಅವರು ಪ್ರಭುದೇವ ಮತ್ತು ಶಿವಣ್ಣ ಕಾಂಬಿನೇಷನ್ ಹಾಗೂ ‘ಜೋಗಿ’ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಸುದೀಪ್ ಮಾತನಾಡಿ ʻʻನಮ್ಮಿಬ್ಬರ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಈಗಲೂ ಅನಿಸುತ್ತದೆ. ಆ ಕೊರತೆ ಈಗಲೂ ಇದೆʼʼಎಂದು ಹೇಳಿಕೊಂಡರು.
ಸುದೀಪ್ ಅವರು ಹಲವಾರು ವಿಚಾರಗಳನ್ನು ಮಾತನಾಡಿದರು. ಸುದೀಪ್ ಮಾತನಾಡಿ ʻʻಕಟರಟಕ ದಮನಕ ಸಿನಿಮಾ ಬರುತ್ತಿರುವುದು ಖುಷಿಯ ವಿಚಾರ. ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಬಂದು ಡ್ಯಾನ್ಸ್ ಮಾಡೋದನ್ನು ನೋಡೋದೇ ಅದ್ಭುತ. ಒಬ್ಬರು ಪರ್ಫೆಕ್ಷನಿಸ್ಟ್ ಆದರೆ, ಇನ್ನೊಬ್ಬರು ಎನರ್ಜಿಯಲ್ಲಿ ಅನ್ಲಿಮಿಟೆಡ್ ಪ್ಯಾಕೇಜ್. ಇಬ್ಬರೂ ಒಳ್ಳೆಯ ಡ್ಯಾನ್ಸರ್ಸ್. ಈ ಜೋಡಿ ಮೊದಲೇ ತೆರೆ ಮೇಲೆ ಒಟ್ಟಿಗೆ ಬರಬೇಕಿತ್ತು. ಲೇಟ್ ಆಯ್ತು ಎಂದೆನಿಸುತ್ತಿದೆ. ನಾವೆಲ್ಲ ಶಾಲಾ ದಿನಗಳಲ್ಲಿಯೇ ಶಿವಣ್ಣ ಅವರ ಫ್ಯಾನ್ಸ್ ಆಗಿದ್ದೇವು. ಅವರ ನಟನೆಯ ʻಓಂʼ ಸಿನಿಮಾ ನೋಡಿ ಫ್ಯಾನ್ ಆದೆ. ಆ ಚಿತ್ರವನ್ನು ಥಿಯೇಟರ್ನಲ್ಲೇ 10-12 ಬಾರಿ ನೋಡಿದ್ದೇನೆ. ನನ್ನ ʻಸ್ಪರ್ಷʼ ಸಿನಿಮಾದ ಆಡಿಯೋ ಲಾಂಚ್ ಶಿವಣ್ಣ ಲಾಂಚ್ ಮಾಡಿಕೊಟ್ಟರುʼʼಎಂದರು.
ಇದನ್ನೂ ಓದಿ: Karataka Damanaka: ‘ಕರಟಕ ದಮನಕ’ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್!
ಆ ಕೊರತೆ ಈಗಲೂ ಇದೆ
ಸುದೀಪ್ ‘ಜೋಗಿ’ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಬಗ್ಗೆ ಮಾತನಾಡಿ ʻʻʻಇನ್ನು ನನಗೆ ಹಾಗೂ ಶಿವಣ್ಣ ಅವರಿಗೆ ʻವಿಲನ್ʼ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ರೇರ್ ಕಾಂಬಿನೇಷನ್ ಆಗಿತ್ತು. ನಮ್ಮಿಬ್ಬರ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಈಗಲೂ ಅನಿಸುತ್ತದೆ. ಆ ಕೊರತೆ ಈಗಲೂ ಇದೆ. ಆದರೂ ನನ್ನ ಕರಿಯರ್‌ನಲ್ಲಿ ಆ ಸಿನಿಮಾ ಆಯ್ತು. ಇನ್ನು ಶಿವಣ್ಣ ಅವರು ಗೌರವ ಸಂಪಾದಿಸಿದ್ದಾರೆ”ಎಂದರು.
ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ
ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬರಲಿದೆ.. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ.
ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.