Site icon Vistara News

Suhana Khan : ಕೃಷಿ ಜಮೀನು ಖರೀದಿಸಿದ ಶಾರುಖ್‌ ಪುತ್ರಿ ಸುಹಾನಾ; ಇದರ ಮೌಲ್ಯ ಎಷ್ಟು ನೋಡಿ!

Suhana Khan

#image_title

ಮುಂಬೈ: ಇತ್ತೀಚೆಗೆ ಅನೇಕ ನಟ ನಟಿಯರು ಹೊಸ ಹೊಸ ಬಂಗಲೆಗಳನ್ನು ಕೋಟ್ಯಂತರ ರೂಪಾಯಿ ಕೊಟ್ಟು ಖರೀದಿಸಿರುವ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಶಾರುಖ್‌ ಖಾನ್‌ರ 23 ವರ್ಷದ ಮಗಳು ಸುಹಾನಾ ಖಾನ್‌ (Suhana Khan) ಕೂಡ ಆಸ್ತಿ ಖರೀದಿ ಮಾಡಿದ್ದಾರೆ. ಆಲಿಬಾಗ್‌ನಲ್ಲಿ 1.5 ಎಕರೆ ಕೃಷಿ ಜಮೀನನ್ನು ಸುಹಾನಾ ಬರೋಬ್ಬರಿ 12.91 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಸುಹಾನಾ ಅವರು ಆಸ್ತಿ ಖರೀದಿಸಿರುವ ಬಗ್ಗೆ ಜೂನ್‌ 1ರಂದು ನೋಂದಣಿಯಾಗಿದೆ. ನೋಂದಣಿಗೆಂದು ಸುಹಾನಾ 77.46 ಲಕ್ಷ ರೂ. ಪಾವತಿಸಿದ್ದಾರೆ. ಅಂದ ಹಾಗೆ ಈ ನೋಂದಣಿ ಪತ್ರಗಳಲ್ಲಿ ಸುಹಾನಾ ಅವರನ್ನು ಒಬ್ಬ “ಕೃಷಿಕ” ಎಂದು ನಮೂದಿಸಲಾಗಿದೆಯಂತೆ. ಅಂಜಲಿ, ರೇಖಾ ಮತ್ತು ಪ್ರಿಯಾ ಖೋಟ್‌ ಹೆಸರಿನ ಸಹೋದರಿಯರು ಈ ಆಸ್ತಿಯನ್ನು ಸುಹಾನಾ ಅವರಿಗೆ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: Road Accident: ವಿಜಯನಗರ, ಕುಶಾಲನಗರದಲ್ಲಿ ಪ್ರತ್ಯೇಕ ಅಪಘಾತ, ನಾಲ್ಕು ಮಂದಿಯ ಸಾವು
ಆಲಿಬಾಗ್‌ನ ಸಮೀಪದ ಥಾಲ್‌ ಹೆಸರಿನ ಗ್ರಾಮದಲ್ಲಿರುವ ಜಮೀನನ್ನು ಸುಹಾನಾ ಖರೀಸಿದ್ದಾರೆ. ಅದರಲ್ಲಿ 2,218 ಚದರ ಅಡಿಯ ಮೂರು ಮನೆಗಳು ಇರುವುದಾಗಿಯೂ ಹೇಳಲಾಗಿದೆ. ಈ ಆಸ್ತಿಯ ಪಕ್ಕದಲ್ಲೇ ಶಾರುಖ್‌ ಖಾನ್‌ ಅವರ ಆಸ್ತಿಯಿದ್ದು, ಅಲ್ಲಿ ದೊಡ್ಡದೊಂದು ಬಂಗಲೆ, ಹೆಲಿಪ್ಯಾಡ್‌, ದೊಡ್ಡ ಸ್ವಿಮ್ಮಿಂಗ್‌ ಪೂಲ್‌ ಇದೆ. ಶಾರುಖ್‌ ಅವರು ತಮ್ಮ 57ನೇ ಜನ್ಮ ದಿನಾಚರಣೆಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು.

ಸುಹಾನಾ ಅವರು ಏಪ್ರಿಲ್‌ನಲ್ಲಿ ಕಾಸ್ಮೆಟಿಕ್‌ ಬ್ರ್ಯಾಂಡ್‌ ಆದ ನೈಕಾಕ್ಕೆ ರಾಯಭಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಾಗೆಯೇ ಅವರು ಜೋಯಾ ಅಖ್ತರ್‌ ಅವರ ನಿರ್ದೇಶನದ ದಿ ಆರ್ಚೀಸ್‌ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಬ್ರಿಟನ್‌ನ ಆರ್ಡಿಂಗ್ಲಿ ಕಾಲೇಜ್‌ನಲ್ಲಿ ಪದವಿ ಪಡೆದಿರುವ ಸುಹಾನಾ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಟಿಸ್ಚ್‌ ಸ್ಕೂಲ್‌ ಆಫ್‌ ಆರ್ಟ್ಸ್‌ನಿಂದ ನಟನೆಯ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Zim Afro T10 : ಜಿಂಬಾಬ್ವೆ ಕ್ರಿಕೆಟ್​ ಲೀಗ್​ನಲ್ಲಿ ಫ್ರಾಂಚೈಸಿ ಖರೀದಿಸಿದ ಕೆಜಿಎಫ್​ ಸಿನಿಮಾದ ಅಧೀರ!
ಆಲಿಬಾಗ್‌ನಲ್ಲಿ ಶಾರುಖ್‌, ಸುಹಾನಾ ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳು ಆಸ್ತಿ ಹೊಂದಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಅನುಷ್ಕಾ ಶರ್ಮಾ, ವಿರಾಟ್‌ ಕೊಹ್ಲಿ, ಗೌತಮ್‌ ಸಿಂಘಾನಿಯಾ ಸೇರಿದಂತೆ ಹಲವರಿಗೆ ಆಲಿಬಾಗ್‌ನಲ್ಲಿ ಆಸ್ತಿಯಿದೆ.

Exit mobile version