Site icon Vistara News

Suhana Khan: ಶಾರುಖ್‌ ಪುತ್ರಿ ಸುಹಾನಾಗೆ ಕಿಸ್‌ ಕೊಟ್ಟ ಅಗಸ್ತ್ಯ; ಅಮಿತಾಭ್ ಮನೆಗೆ ಸೊಸೆ ಇವರೇ ಎಂದ ನೆಟ್ಟಿಗರು!

Suhana Gets a Kiss From Agastya

ಮುಂಬೈ: ಅಗಸ್ತ್ಯ ನಂದಾ ಮತ್ತು ಸುಹಾನಾ ಖಾನ್ (Suhana Khan) ಹೊಸ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಡೇಟಿಂಗ್ ವದಂತಿಗಳಿಗೆ ಪುಷ್ಟಿ ನೀಡುವಂತಿದೆ. ವೈರಲ್‌ ಆಗಿರುವ ವಿಡಿಯೊದಲ್ಲಿ ಅಗಸ್ತ್ಯ ಅವರು ಸುಹಾನಾರನ್ನು ಕಾರಿನವರೆಗೆ ಕರೆದುಕೊಂಡು ಹೋಗಿ ಫ್ಲೈ ಕಿಸ್‌ ನೀಡಿದ್ದಾರೆ. ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ತಮ್ಮ ಚೊಚ್ಚಲ ಸಿನಿಮಾವಾದ ʻದಿ ಆರ್ಚೀಸ್ʼ ಸಿನಿಮಾ ಚಿತ್ರೀಕರಣದ ನಂತರ ಒಬ್ಬರಿಗೊಬ್ಬರು ಹತ್ತಿರವಾದ ಬಳಿಕ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅನೇಕ ಸಮಾರಂಭಗಳಿಗೆ ಅಗಸ್ತ್ಯ ನಂದಾ ಮತ್ತು ಸುಹಾನಾ ಖಾನ್ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಸುಹಾನಾ ಮತ್ತು ಅಗಸ್ತ್ಯ ಅವರು ಟೀನಾ ಶ್ರಾಫ್ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕಾರಿನಲ್ಲಿ ಮರಳಿ ಹೋಗುವಾಗ, ಅಗಸ್ತ್ಯ ಅವರು ಸುಹಾನಾರನ್ನು ಸುರಕ್ಷಿತವಾಗಿ ಕರೆದೊಯ್ದು, ಫ್ಲೈ ಕಿಸ್‌ ನೀಡಿದ್ದಾರೆ. ಇದೀಗ ಈ ವಿಡಿಯೊ ನೋಡಿ ನೆಟ್ಟಿಗರು ಅಮಿತಾಭ್‌ ಮನೆಗೆ ಸುಹಾನಾ ಅವರೇ ಸೊಸೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ, ಅಗಸ್ತ್ಯ ಮತ್ತು ಸುಹಾನಾ ಡೇಟಿಂಗ್ ಮಾಡುತ್ತಿದ್ದು, ಈಗಾಗಲೇ ಅಗಸ್ತ್ಯ ತಾಯಿ ಶ್ವೇತಾ ಬಚ್ಚನ್ ಅವರಿಂದ ಮದುವೆಗೆ ಅನುಮತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಹಿಂದೂಸ್ತಾನ್ ಟೈಮ್ಸ್‌ ವರದಿಯಂತೆ ʻʻಈಗಾಗಲೇ ಸುಹಾನಾ ಹಾಗೂ ಅಗಸ್ತ್ಯ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ತಮ್ಮ ರಿಲೇಶನ್‌ಶಿಪ್‌ ಮರೆಮಾಡಲು ಸಹ ಪ್ರಯತ್ನಿಸುತ್ತಿರಲಿಲ್ಲ. ಅಧಿಕೃತಗೊಳಿಸಲು ಯೋಜಿಸದಿದ್ದರೂ, ಪ್ರೊಡಕ್ಷನ್ ಹೌಸ್‌ನಲ್ಲಿರುವ ಹೆಚ್ಚಿನ ಜನರಿಗೆ ತಿಳಿದಿತ್ತು. ಶ್ವೇತಾ ಬಚ್ಚನ್ ಕೂಡ ಸುಹಾನಾ ಅವರನ್ನು ಪ್ರೀತಿಸುತ್ತಾರೆ. ಹಾಗೇ ಈ ಬಗ್ಗೆ ತಮ್ಮ ಒಪ್ಪಿಗೆಯನ್ನೂ ಸೂಚಿಸಿದ್ದಾರೆʼʼಎಂದು ವರದಿ ಮಾಡಿದೆ.

ವೈರಲ್‌ ವಿಡಿಯೊ

ಇದನ್ನೂ ಓದಿ; Suhana Khan | ಶಾರುಕ್ ಪುತ್ರಿ ಸುಹಾನಾ-ಅಗಸ್ತ್ಯ ಪ್ರೀತಿಗೆ ಶ್ವೇತಾ ಬಚ್ಚನ್‌ ಗ್ರೀನ್‌ ಸಿಗ್ನಲ್?‌ ಇಲ್ಲಿದೆ ನೋಡಿ ಅಸಲಿಯತ್ತು

ಕಪೂರ್ ಫ್ಯಾಮಿಲಿ ಕ್ರಿಸ್‌ಮಸ್ ಬ್ರಂಚ್‌ನಲ್ಲಿ ಅಗಸ್ತ್ಯ ಅವರು ತಮ್ಮ ಕುಟುಂಬ ಸದಸ್ಯರಿಗೆ ಸುಹಾನಾ ಅವರನ್ನು ತಮ್ಮ ಸಂಗಾತಿ ಎಂದೇ ಪರಿಚಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ದಿ ಆರ್ಚೀಸ್‌ನಲ್ಲಿ ಸುಹಾನಾ ಮತ್ತು ಅಗಸ್ತ್ಯರಲ್ಲದೆ, ಚಿತ್ರದಲ್ಲಿ ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ. ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ.

Exit mobile version