ಬೆಂಗಳೂರು: ಶಾರುಖ್ ಖಾನ್ ಪುತ್ರಿ ಪುತ್ರಿ ಸುಹಾನಾ ಖಾನ್ (Suhana Khan) ಶೀಘ್ರದಲ್ಲೇ ʻದಿ ಆರ್ಚೀಸ್ʼ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಮೂಲಕ ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ಕೆಂಪು ಸೀರೆಯಲ್ಲಿ ಸುಹಾನಾ ಖಾನ್ ಮಿಂಚಿದಲ್ಲದೇ ಹಣೆಗೆ ಬಿಂದಿ ಇಟ್ಟುಕೊಂಡು ಪೋಸ್ ನೀಡಿದ್ದಾರೆ.
ಸುಹಾನಾ ಖಾನ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪೋಟೊ ಶೇರ್ ಮಾಡಿಕೊಂಡಿದ್ದಾರೆ. ಸುಹಾನಾ ಖಾನ್ ಅವರು ಕೆಂಪು ಸೀರೆ ಧರಿಸಿದ್ದಾರೆ. ಅದಕ್ಕೆ ಒಪ್ಪುವ ರೀತಿಯಲ್ಲಿ ಕೆಂಪು ಬಿಂದಿ ಇಟ್ಟುಕೊಂಡಿದ್ದಾರೆ. ಸೋದರ ಸಂಬಂಧಿ ಹಾಗೂ ಗೆಳೆತಿಯ ಜತೆ ಸೇರಿ ಅವರು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ಖಾತೆಗಳಲ್ಲಿ ಈ ಫೋಟೋವನ್ನು ಹಂಚಿಕೊಂಡು ಖುಷಿಪಡುತ್ತಿದ್ದಾರೆ.
ಇದನ್ನೂ ಓದಿ: Suhana Khan : ಕೃಷಿ ಜಮೀನು ಖರೀದಿಸಿದ ಶಾರುಖ್ ಪುತ್ರಿ ಸುಹಾನಾ; ಇದರ ಮೌಲ್ಯ ಎಷ್ಟು ನೋಡಿ!
ಸುಹಾನಾ ಅವರು ಏಪ್ರಿಲ್ನಲ್ಲಿ ಕಾಸ್ಮೆಟಿಕ್ ಬ್ರ್ಯಾಂಡ್ ಆದ ನೈಕಾಕ್ಕೆ ರಾಯಭಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಾಗೆಯೇ ಅವರು ಜೋಯಾ ಅಖ್ತರ್ ಅವರ ನಿರ್ದೇಶನದ ದಿ ಆರ್ಚೀಸ್ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಬ್ರಿಟನ್ನ ಆರ್ಡಿಂಗ್ಲಿ ಕಾಲೇಜ್ನಲ್ಲಿ ಪದವಿ ಪಡೆದಿರುವ ಸುಹಾನಾ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಸ್ಚ್ ಸ್ಕೂಲ್ ಆಫ್ ಆರ್ಟ್ಸ್ನಿಂದ ನಟನೆಯ ಪದವಿಯನ್ನೂ ಪಡೆದುಕೊಂಡಿದ್ದಾರೆ. ಅಚ್ಚುಕಟ್ಟಾಗಿ ಡ್ರೆಸ್ ಮಾಡಿಕೊಂಡ ಕಾರಣಕ್ಕೆ ಸುಹಾನಾ ಖಾನ್ ಅವರು ಈ ಮೊದಲು ಕೂಡ ಮೆಚ್ಚುಗೆ ಪಾತ್ರವಾಗಿದ್ದರು.