ಮುಂಬೈ: 200 ಕೋಟಿ ರೂ. ವಂಚನೆ ಆರೋಪದಲ್ಲಿ ಜೈಲು ಸೇರಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar) ನಟಿ ನೋರಾ ಫತೇಹಿ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ಬಿಚ್ಚಿದ್ದಾನೆ. “ನನ್ನ ಗರ್ಲ್‌ಫ್ರೆಂಡ್ ಆಗಿರು, ನಿನಗೆ ಮನೆ ಕೊಡುತ್ತೇನೆ” ಎಂದು ಸುಕೇಶ್ ಆಸೆ ಹುಟ್ಟಿಸಿದ್ದ ಎಂದು ಹೇಳಿದ್ದ ನಟಿಗೆ ಸುಕೇಶ್ ತಿರುಗೇಟು ನೀಡಿದ್ದಾರೆ. “ನಾನು ಮನೆ ಕೊಡುತ್ತೇನೆ ಎಂದಿರಲಿಲ್ಲ. ಅವಳೇ ಮನೆಗಾಗಿ ನನ್ನ ಹಿಂದೆ ಬಿದ್ದಿದ್ದಳು” ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: Nora Fatehi: ನಾನು ಜಾಕ್ವೆಲಿನ್ ಜತೆ ಇದ್ದಾಗ ನೋರಾ ಫತೇಹಿ ದಿನಕ್ಕೆ 10 ಸಲ ಕಾಲ್ ಮಾಡುತ್ತಿದ್ದಳು, ವಂಚಕ ಸುಕೇಶ್ ಹೇಳಿಕೆ
“ನಾನು ಅವಳಿಗೆ ಮನೆ ಕೊಡುತ್ತೇನೆ ಎಂದು ಮಾತುಕೊಟ್ಟಿದ್ದೆ ಎಂದು ಆಕೆ ಈಗ ಹೇಳುತ್ತಿದ್ದಾಳೆ. ಆದರೆ ಮೊರಾಕೊದಲ್ಲಿ ಮನೆ ಮಾಡಲಿಕ್ಕೆಂದು ಆಕೆ ನನ್ನಿಂದ ಸಾಕಷ್ಟು ಹಣವನ್ನು ಕೇಳಿ ಪಡೆದಿದ್ದಳು. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಬೇಕೆಂದು ಬೇರೆ ಬೇರೆ ಕಥೆ ಹೇಳಲಾರಂಭಿಸಿದ್ದಾಳೆ” ಎಂದು ಆತ ನಟಿ ನೋರಾ ಬಗ್ಗೆ ಹೇಳಿದ್ದಾನೆ.
ಇದರ ಬಗ್ಗೆ ಇನ್ನಷ್ಟು ಮಾತನಾಡಿರುವ ಸುಕೇಶ್, “ನೋರಾ ಈಗ ನನಗೇನು ಕಾರು ಬೇಕಾಗಿರಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ತನ್ನ ಕಾರು ಹಳೆಯದಾಗಿದೆ, ಹೊಸ ಕಾರು ಬೇಕು ಎಂದು ಆಕೆಯೇ ನನ್ನ ಬೆನ್ನ ಹಿಂದೆ ಬಿದ್ದಿದ್ದು. ನಾನು ಅವಳಿಗೆ ರೇಂಜ್ ರೋವರ್ ಕಾರನ್ನು ಕೊಡಿಸಬೇಕೆಂದಿದ್ದೆ. ಆದರೆ ಅದು ಆಗ ಲಭ್ಯವಿರಲಿಲ್ಲ. ನೋರಾಗಿ ತುರ್ತಾಗಿ ಕಾರು ಬೇಕಾಗಿದ್ದರಿಂದ ಬಿಎಂಡಬ್ಲ್ಯೂ ಎಸ್ ಸೀರಿಸ್‌ನ ಕಾರನ್ನು ಕೊಡಿಸಿದೆ. ಅವಳಿಗೆ ಭಾರತೀಯ ನಾಗರಿಕತೆ ಇಲ್ಲವಾದ್ದರಿಂದ ಆಕೆಯ ಸ್ನೇಹಿತೆಯ ಪತಿಯ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಿಸಲಾಯಿತು” ಎಂದು ಹೇಳಿದ್ದಾನೆ.
ಇದನ್ನೂ ಓದಿ: Nora Fatehi | 30ರ ನಟಿ ನೋರಾ ಫತೇಹಿ ಜತೆ 25ರ ಆರ್ಯನ್ ಖಾನ್ ಡೇಟಿಂಗ್? ಫೋಟೊ ವೈರಲ್!
ಅದಷ್ಟೇ ಅಲ್ಲದೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜತೆಗೆ ತಾನು ಪ್ರೀತಿಯಲ್ಲಿದ್ದು, ಅದನ್ನು ನೋರಾ ಸಹಿಸುತ್ತಿರಲಿಲ್ಲ. ನಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿದ್ದಳು ಎಂದೂ ಸಹ ಸುಕೇಶ್ ಹೇಳಿಕೊಂಡಿದ್ದಾನೆ.
ನಟಿ ತಮ್ಮಿಬ್ಬರ ಮಧ್ಯೆ ವೃತ್ತಿಪರ ವ್ಯವಹಾರ ಮಾತ್ರವೇ ಇದ್ದಿದ್ದು ಎಂದಿದ್ದರ ಬಗ್ಗೆಯೂ ಮಾತನಾಡಿರುವ ಸುಕೇಶ್, “ನಮ್ಮಿಬ್ಬರ ನಡುವೆ ವೃತ್ತಿಪರ ವ್ಯವಹಾರ ಇತ್ತು ಎನ್ನುವುದು ಶುದ್ಧ ಸುಳ್ಳು. ಒಮ್ಮೆ ನನಗೆ ಸಂಬಂಧಿಸಿದ ಸಂಸ್ಥೆ ಒಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನೋರಾರನ್ನು ಕರೆಸಿದ್ದೆವು. ಅದಕ್ಕೆ ಮಾತ್ರ ಆಕೆಗೆ ಅಧಿಕೃತವಾಗಿ ಗೌರವ ಧನ ನೀಡಲಾಗಿತ್ತು. ಅದನ್ನು ಹೊರೆತುಪಡಿಸಿದರೆ ನಮ್ಮಿಬ್ಬರ ಮಧ್ಯೆ ಇದ್ದದ್ದು ಪೂರ್ತಿಯಾಗಿ ಖಾಸಗಿ ವ್ಯವಹಾರವೇ” ಎಂದು ತಿಳಿಸಿದ್ದಾನೆ.