Site icon Vistara News

Jacqueline Fernandez: ಜಾಕ್ವೆಲಿನ್‌ಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ವಂಚಕ ಸುಕೇಶ್‌ ಚಂದ್ರಶೇಖರ್! 

Jacqueline Fernandez Sukesh Chandrashekar wishes Valentine’s Day

ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಪ್ರೇಮಿಗಳ ದಿನದಂದು ಗೆಳತಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ (Jacqueline Fernandez) ಶುಭಾಶಯ ತಿಳಿಸಿದ್ದಾನೆ. ನ್ಯಾಯಾಲಯದಿಂದ ಹೊರಗೆ ಹೋಗುತ್ತಿರುವಾಗ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ಕೋರಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅವರು ಮಾಡಿದ ಎಲ್ಲಾ ಆರೋಪಗಳು ನಿಜ ಎಂದೂ ಹೇಳಿದ್ದಾರೆ.

ಫರ್ನಾಂಡಿಸ್ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಚಂದ್ರಶೇಖರ್ ಅವರು ವರದಿಗಾರರೊಂದಿಗೆ ಮಾತನಾಡುತ್ತಾ, “ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಹೇಳಿದರು.‘ನನ್ನನ್ನು ಸುಕೇಶ್ ಬಳಸಿಕೊಂಡ ಎಂಬುದು ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಆರೋಪ. ಇದಕ್ಕೆ ಏನು ಹೇಳುತ್ತೀರಾ?’ ಎಂಬುದಾಗಿ ಸುಕೇಶ್​ಗೆ ಕೇಳಲಾಯಿತು. ‘ನಾನು ಈ ಬಗ್ಗೆ ಏನನ್ನೂ ಹೇಳಲ್ಲ. ಹೀಗೆ ಹೇಳಲು ಜಾಕ್ವೆಲಿನ್​ಗೆ ಅವರದ್ದೇ ಆದ ಕಾರಣಗಳಿವೆ’ ಎಂದಿದ್ದಾರೆ ಸುಕೇಶ್. ನೋರಾ ಫತೇಹಿ ಬಗ್ಗೆಯೂ ಉತ್ತರಿಸಿದ ಸುಕೇಶ್, ‘ಹಣಕ್ಕಾಗಿ ಸಂಬಂಧ ಬೆಳೆಸುವವರ ಬಗ್ಗೆ ಮಾತನಾಡಲ್ಲ’ ಎಂದಿದ್ದಾರೆ ಸುಕೇಶ್.

ಇದನ್ನೂ ಓದಿ: Jacqueline Fernandez: ಇಲ್ಲಿವೆ ಜಾಕ್ವೆಲಿನ್ ಫರ್ನಾಂಡಿಸ್ ಲೇಟೆಸ್ಟ್‌ ಫೋಟೊ

ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ವಂಚಕ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜತೆ ಅದ್ಧೂರಿ, ಐಷಾರಾಮಿ ಸಮಯವನ್ನು ಕಳೆದಿದ್ದ. ಲಿಮಿಟಿಡ್ ಎಡಿಷನ್ ಪರ್ಫ್ಯೂಮ್ಸ್, ಡಿಸೈನರ್ ಬ್ಯಾಗ್ಸ್, ಬಟ್ಟೆಗಳು, ಪ್ರೈವೆಟ್ ಜೆಟ್ಸ್ ಇತ್ಯಾದಿ ಅದ್ದೂರಿ ಜೀವನಕ್ಕೆ ಏನೂ ಭರವಿರಲಿಲ್ಲ. ಹಾಗಾಗಿ, ಜಾಕ್ವೆಲಿನ್ ಸಂಪೂರ್ಣವಾಗಿ ಸುಕೇಶ್ ಹಿಡಿತದಲ್ಲಿದ್ದಳು. ಅಲ್ಲದೇ, ತನ್ನ ಕನಸಿನ ಗಂಡು ಸಿಕ್ಕಿದ್ದಾನೆ, ನಾನು ಮದುವೆಯಾಗಲಿದ್ದೇನೆ ಎಂದು ಜಾಕ್ವೆಲಿನ್ ತನ್ನ ಸ್ನೇಹಿತೆಯರ ಮುಂದೆ ಹೇಳಿಕೊಂಡಿದ್ದಳು.

ಇತ್ತೀಚೆಗೆ ಕೋರ್ಟ್​ಗೆ ಮಾಹಿತಿ ನೀಡಿದ್ದ ಜಾಕ್ವೆಲಿನ್​, ‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸುಕೇಶ್‌ ಚಂದ್ರಶೇಖರ್‌ ನನಗೆ ಸುಳ್ಳು ಹೇಳಿದ. ನನ್ನನ್ನು ಮೂರ್ಖಳನ್ನಾಗಿ ಮಾಡಿದ. ಇದರಿಂದ ನನ್ನ ವೃತ್ತಿಜೀವನ, ನನ್ನ ಜೀವನ ಹಾಳಾಯಿತು. ಆತ ನನ್ನ ಬದುಕನ್ನೇ ನರಕ ಮಾಡಿದ. ಹಾಗೆಯೇ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಂಬಂಧಿ ಎಂದು, ಸನ್‌ ಟಿವಿಯ ಮಾಲೀಕ ಎಂದು ಹೇಳಿದ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕು ಎಂದು ಸಲಹೆ ನೀಡಿದ್ದ. ಎಲ್ಲವನ್ನು ನಂಬಿದ ನಾನು ಮೋಸ ಹೋದೆ’ ಎಂದು ಜಾಕ್ವೆಲಿನ್ ಹೇಳಿದ್ದರು.

ಇದನ್ನೂ ಓದಿ: Jacqueline Fernandez | ‘ವಂಚಕ ಸುಕೇಶ್‌ ನನ್ನ ಜೀವನವನ್ನು ನರಕವಾಗಿಸಿದ್ದಾನೆ’ ಕೋರ್ಟ್‌ಗೆ ರಕ್ಕಮ್ಮ ಜಾಕ್ವೆಲಿನ್‌ ಮಾಹಿತಿ

Exit mobile version