Site icon Vistara News

Sukesh Chandrashekhar: ಜಾಕ್ವೆಲಿನ್‌ ಹುಟ್ಟುಹಬ್ಬಕ್ಕೆ ಸೂಪರ್ ಸರ್ಪ್ರೈಸ್ ನೀಡಲಿದ್ದಾನಂತೆ ವಂಚಕ ಸುಕೇಶ್‌; ಪತ್ರದಲ್ಲಿ ಏನಿದೆ?

Sukesh Chandrashekhar and Jacqueline Fernandez

Conman Texted Many Promises To Jacqueline Fernandez, Made A Dress Request

ಬೆಂಗಳೂರು: 200 ಕೋಟಿ ರೂ. ವಂಚನೆ ಪ್ರಕರಣದ ಆರೋಪದಲ್ಲಿ ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekhar) ಬಾಲಿವುಡ್‌ ನಟಿ ಜಾಕ್ವೆಲಿನ್‌ಗೆ ಹೊಸ ಪತ್ರವನ್ನು ಬರೆದಿದ್ದಾನೆ. ಇತ್ತೀಚಿನ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ನಟಿಯ ಪ್ರದರ್ಶನವನ್ನು ಶ್ಲಾಘಿಸಿದಲ್ಲದೇ, ಆಗಸ್ಟ್ 11ರಂದು ನಟಿಯ ಹುಟ್ಟುಹಬ್ಬಕ್ಕೆ “ಸೂಪರ್ ಸರ್ಪ್ರೈಸ್” ನೀಡುವುದಾಗಿ ಭರವಸೆ ನೀಡಿದ್ದಾನೆ.

ಹಲವಾರು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಚಂದ್ರಶೇಖರ್ ತಮ್ಮ ವಕೀಲ ಅನಂತ್ ಮಲಿಕ್ ಮೂಲಕ ಪತ್ರವನ್ನು ಬಿಡುಗಡೆ ಮಾಡಿದ್ದಾನೆ. ಜಾಕ್ವೆಲಿನ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಪತ್ರದಲ್ಲಿ ಏನಿದೆ?

ಪತ್ರದಲ್ಲಿ ʻ”ನನ್ನ ಪ್ರೀತಿಯ, ನನ್ನ ಬೇಬಿ, ಜಾಕ್ವೆಲಿನ್, ನಾನು ಏಪ್ರಿಲ್ 28ರಂದು ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮ ನೋಡಿದೆ. ಪ್ರದರ್ಶನವನ್ನು ಕಂಡು ಸಂತೋಷಗೊಂಡೆ. ನೀನು ತುಂಬ ಕ್ಲಾಸಿ, ಸೂಪರ್-ಹಾಟ್ ಮತ್ತು ನೀನು ನನ್ನನ್ನು ಮತ್ತೆ ನಿನ್ನೊಂದಿಗೆ ಇನ್ನಷ್ಟು ಕ್ರೇಜಿಯರ್ ಆಗಿ ಪ್ರೀತಿಸುವಂತೆ ಮಾಡಿದ್ದಿ. ನನಗೆ ನಿನ್ನ ಬಗ್ಗೆ ಹೇಳಲು ಪದಗಳಿಲ್ಲ, ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್” ಎಂದು ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾರೆ.

ಅಷ್ಟೇ ಅಲ್ಲದೇ ʻʻನನ್ನ ಜೀವನದಲ್ಲಿ ನಿನ್ನನ್ನು ಪಡೆದದ್ದು ನನ್ನ ಪುಣ್ಯ. ನನ್ನ ರಾಣಿ, ಬೊಟ್ಟಾ ಬೊಮ್ಮ, ನಾನು ನಿನ್ನನ್ನು ಪ್ರೀತಿಸುತ್ತೇನೆ. ಪ್ರತಿ ಸೆಕೆಂಡ್ ಬದುಕಿರುವುದು ನಿನಗೋಸ್ಕರ ಮಾತ್ರ, ನಾನು ನಿನ್ನನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತೇನೆ. ನೀನು ನನ್ನನ್ನು ಎಷ್ಟು ಹುಚ್ಚುತನದಿಂದ ಪ್ರೀತಿಸುತ್ತೀಯಾ ಎಂದು ನಿನಗೆ ತಿಳಿದಿದೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜನ್ಮದಿನದಂದು ನಾನು ನಿನಗೆ ಸೂಪರ್ ಸರ್ಪ್ರೈಸ್ ಕೊಡಲಿದ್ದೇನೆ. ನೀನು ಅದನ್ನು ಖಂಡಿತವಾಗಿಯೂ ಪ್ರೀತಿಸುತ್ತೀ. ಆ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇನೆ! ಇನ್ನು ಕಾಯಲು ಸಾಧ್ಯವಿಲ್ಲ! ಬೇಬಿ ನೀನು ಯಾವಾಗಲೂ ನಗುತ್ತಿರಬೇಕು. ಚಿಂತಿಸಬೇಡʼʼ ಎಂದು ಬರೆದಿದ್ದಾನೆ.

ಇದನ್ನೂ ಓದಿ: Sukesh Chandrasekhar: ಜೈಲಿನ ಕೋಣೆ ಮೇಲೆ ದಾಳಿ, ಐಷಾರಾಮಿ ವಸ್ತುಗಳು ಪತ್ತೆ: ವಂಚಕ ಸುಕೇಶ್ ಗಳಗಳನೆ ಅತ್ತ ವಿಡಿಯೊ ವೈರಲ್‌

ಕಳೆದ ತಿಂಗಳು ಪತ್ರದ ಮೂಲಕ, ಸುಕೇಶ್‌ ನಟಿ ಜಾಕ್ವೆಲಿನ್‌ಗೆ ಈಸ್ಟರ್ ಶುಭಾಶಯಗಳನ್ನು ಕಳುಹಿಸಿದ್ದ. ಸುಕೇಶ್‌ ಈ ಹಿಂದೆ ಪ್ರೇಮಿಗಳ ದಿನದಂದು ಕೂಡ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದು, ಶುಭ ಹಾರೈಸಿದ್ದ. ಸುಕೇಶ್‌ ಪ್ರಕರಣದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತು ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ.

Exit mobile version