ಮುಂಬೈ: ಬಾಲಿವುಡ್‌ನಲ್ಲಿ ಅನೇಕ ನಟ, ನಟಿಯರು ಇನ್ನೂ ವಿವಾಹ ಜೀವನಕ್ಕೆ ಕಾಲಿಡದೆ ಒಬ್ಬಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ ಅನೇಕರಿಗೆ ತಮಗೆ ಸರಿಹೊಂದುವಂತಹ ಜೀವನ ಸಂಗಾತಿ ಸಿಕ್ಕಿಲ್ಲವಾದರೆ ಇನ್ನು ಕೆಲವರಿಗೆ ಜೀವನದಲ್ಲಿ ಸಂಗಾತಿಯ ಅವಶ್ಯಕತೆಯೇ ಕಾಣಿಸಿಕೊಂಡಿಲ್ಲ. ಮದುವೆಯಾಗದೆ ಒಂಟಿಯಾಗಿ ಜೀವನ ಕಳೆಯುತ್ತಿರುವವರಲ್ಲಿ ಹಿರಿಯ ನಟಿ ಸುಲಕ್ಷಣ ಪಂಡಿತ್ ಕೂಡ ಒಬ್ಬರು. ಅವರ ಒನ್‌ಸೈಡೆಡ್ ಲವ್‌ನಿಂದಾಗಿ ಅವರು ದಾಂಪತ್ಯಕ್ಕೆ ಕಾಲಿಟ್ಟಿಲ್ಲ. ಅದರ ವಿವರ ಇಲ್ಲಿದೆ (Bollywood News) ನೋಡಿ.
ಸುಲಕ್ಷಣ ಪಂಡಿತ್ ಅವರು ಒಂದು ಕಾಲದಲ್ಲಿ ಬಾಲಿವುಡ್‌ನ ಎಲ್ಲ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ. ಜೀತೇಂದ್ರ, ವಿನೋದ್ ಖನ್ಹಾ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ, ಶಶಿ ಕಪೂರ್ ಮತ್ತು ಅಮಿತಾಭ್ ಬಚ್ಚನ್‌ರಂತಹ ಮೇರು ನಟರೊಂದಿಗೆ ಅವರು ನಟಿಸಿದ್ದರು. ಆದರೂ ಅವರನ್ನು ಬಾಲಿವುಡ್ ನತದೃಷ್ಟ ನಟಿ ಎಂದೇ ಕರೆಯಲಾಗುತ್ತಿತ್ತು.
ಇದನ್ನೂ ಓದಿ: Viral Video: ಕಾಲರ್ ಪಟ್ಟಿ ಹಿಡಿದು ಶಿಖರ್ ಧವನ್ಗೆ ವಾರ್ನಿಂಗ್ ನೀಡಿದ ತಂದೆ
ಅಂದ ಹಾಗೆ ಈ ಸುಲಕ್ಷಣ ಪಂಡಿತ್ ನಟ ಸಂಜೀವ್ ಕುಮಾರ್ ಅವರನ್ನು ಪ್ರೀತಿ ಮಾಡುತ್ತಿದ್ದರು. ಇಬ್ಬರು ಒಟ್ಟಾಗಿ ʼಉಜ್ಹಾನ್ʼ ಸಿನಿಮಾದಲ್ಲಿ ನಟಿಸಿದ್ದರು. ಅವರೊಂದಿಗೆ ನಟಿಸುತ್ತಲೇ ಸುಲಕ್ಷಣ ಅವರು ಪ್ರೀತಿಯಲ್ಲಿ ಬಿದ್ದಿದ್ದರು. ಆ ವಿಚಾರವನ್ನು ಸಂಜೀವ್ ಅವರಿಗೆ ಹೇಳಿದ್ದರು ಕೂಡ. ಆದರೆ ಸಂಜೀವ್ ಅವರು ಬೇರೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರಾದ್ದರಿಂದ ಸುಕಲಕ್ಷಣ ಅವರ ಪ್ರೀತಿಗೆ ನೋ ಎಂದಿದ್ದರು. ಹಾಗೆಯೇ ತಮ್ಮ ಪ್ರೀತಿಯ ನಟಿಗೆ ಮದುವೆ ಪ್ರೊಪೋಸಲ್ ಅನ್ನೂ ಮಾಡಿದ್ದರು. ಆದರೆ ಆ ನಟಿ ಸಂಜೀವ್ ಅವರಿಗೆ ನೋ ಎಂದಿದ್ದರು. ಎರಡು ಬಾರಿ ಪ್ರೇಮ ನಿವೇದನೆ ಮಾಡಿಕೊಂಡಾಗಲೂ ಅವರಿಗೆ ನೋ ಎನ್ನುವ ಉತ್ತರವೇ ಬಂದಿತ್ತು.
ತಾವು ಪ್ರೀತಿಸಿದ ಹುಡುಗಿ ತಮಗೆ ಸಿಗದ ಕಾರಣ ಸಂಜೀವ್ ಕುಮಾರ್ ಅವರು ಮದುವೆಯಾಗದೆ ಒಬ್ಬಂಟಿ ಜೀವನ ನಡೆಸಲು ನಿರ್ಧರಿಸಿದರು. ಅದೇ ಕಾರಣಕ್ಕೆ ಅವರು ಮಾನಸಿಕ ಖಿನ್ನತೆಗೂ ಒಳಗಾದರು. 1985ರಲ್ಲಿ 45 ವರ್ಷದವರಾಗಿದ್ದ ಸಂಜೀವ್ ಕುಮಾರ್ ಅವರು ಹೃದಯಾಘಾತಕ್ಕೆ ಬಲಿಯಾದರು. ಇದು ಸುಲಕ್ಷಣ ಅವರಿಗೆ ದೊಡ್ಡ ಆಘಾತವಾಗಿತ್ತು. ಸಂಜೀವ್ ಅವರ ಸಾವಿನ ನಂತರ ಸುಲಕ್ಷಣ ಅವರೂ ಮಾನಸಿಕ ಖಿನ್ನತೆಗೆ ಒಳಗಾದರು.
ಇದನ್ನೂ ಓದಿ: Viral Video: ಮೊಬೈಲ್‌ನಲ್ಲಿ ಮಾತಾಡುತ್ತ ಬೈಕ್ ಓಡಿಸುತ್ತಿದ್ದವನಿಗೆ ಗುದ್ದಿದ ಲಾರಿ; ವಿಡಿಯೊ ನೋಡಿದರೆ ನೀವೆಂದೂ ಮೊಬೈಲ್ ಮುಟ್ಟಲ್ಲ
ಸುಲಕ್ಷಣ ಅವರ ಸಹೋದರಿ ವಿಜೇತ ಪಂಡಿತ್ ಅವರು ತಮ್ಮ ಸಹೋದರಿ ಮಾನಸಿಕ ಖಿನ್ನತೆಗೆ ಒಳಗಾದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದರು. ಸಂಜೀವ್ ಕುಮಾರ್ ಸಾವಿನಿಂದಾಗಿ ಈ ರೀತಿ ಆಗಿದ್ದಾಗಿಯೂ ತಿಳಿಸಿದ್ದರು. ವಿಜೇತಾ ಅವರು 2006ರಲ್ಲಿ ಸುಲಕ್ಷಣ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡರು. ಆದರೆ ಸುಲಕ್ಷಣ ಅವರು ಮನೆಯ ಕೋಣೆಯೊಳಗೆ ತಮ್ಮನ್ನು ತಾವು ಒಬ್ಬಂಟಿಯಾಗಿಸಿಕೊಂಡರು. ಮುಂದೆ ಸುಲಕ್ಷಣ ಅವರು ಬಚ್ಚಲ ಮನೆಯಲ್ಲಿ ಬಿದ್ದು, ಸೊಂಟದ ಮೂಳೆ ಮುರಿದುಕೊಂಡರು. ಅದರಿಂದಾಗಿ ಒಟ್ಟು ನಾಲ್ಕು ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. ಆದರೆ ಈಗಲೂ ಅವರು ಸರಿಯಾಗಿ ನಡೆಯಲಾರದ ಸ್ಥಿತಿಯಲ್ಲಿದ್ದಾರೆ.