ಬೆಂಗಳೂರು: ಬಹುಭಾಷಾ ನಟಿ ಸುಮನ್ ರಂಗನಾಥನ್ (Suman Ranganathan) ಅವರ ತಾಯಿ ಜ್ಯೋತಿ (81) ಅವರು ಗುರುವಾರ ಫೆ.9ರಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತಿದ್ದ ಜ್ಯೋತಿ ಅವರು ಜನವರಿ 29ರಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಒಂದು ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದ ಜ್ಯೋತಿ ಅವರು ಬೆಳಗ್ಗೆ 7.50ಕ್ಕೆ ಕಡಿಮೆ ರಕ್ತದೊತ್ತಡ ಹಾಗೂ ಉಸಿರಾಟದ ತೊಂದರೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ.
19 ಏಪ್ರಿಲ್ 1970ರಲ್ಲಿ ರಂಗನಾಥನ್ ಅವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟಿದ್ದರು. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಜ್ಯೋತಿ ಅವರು ಕೆಲಸ ಮಾಡುತ್ತಿದ್ದರು. 1994ರಲ್ಲಿ ನಿವೃತ್ತಿ ಹೊಂದಿದ್ದರು. ಲಯನ್ಸ್ ಆರ್ಗನೈಜೇಷನ್, ಲೇಡಿಸ್ ವಿಂಗ್ಸ್ ಲಯನ್ಸ್ ಕ್ಲಬ್ ನಲ್ಲಿ ಪ್ರೆಸಿಡೆಂಟ್ ಆಗಿದ್ದರು ಜ್ಯೋತಿ.
ಇದನ್ನೂ ಓದಿ: Vani Jayaram passes away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ
ಇದನ್ನೂ ಓದಿ: BKS Varma Death: ಜ್ಯೇಷ್ಠ ಕಲಾವಿದ, ವಿದ್ವಾಂಸ ಬಿ.ಕೆ.ಎಸ್. ವರ್ಮಾ ನಿಧನದ ಸುದ್ದಿ ಅತೀವ ದುಃಖ ತಂದಿದೆ: ವಿ. ನಾಗರಾಜ್
ಸುಮನ್ ರಂಗನಾಥನ್ 1989ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.ಈವರೆಗೆ ಕನ್ನಡ, ತಮಿಳು, ತೆಲುಗು, ಬೆಂಗಾಳಿ, ಭೋಜ್ಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡದ ಹೆಸರಾಂತ ನಟರಾದ ಶಂಕರ್ ನಾಗ್, ವಿಷ್ಣುವರ್ಧನ್ ಅವರ ಜತೆಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.