ಬೆಂಗಳೂರು: ನಟ ಸುನೀಲ್ ಶೆಟ್ಟಿ ಅವರು ತಮ್ಮ ಮಗಳು-ನಟ ಅಥಿಯಾ ಶೆಟ್ಟಿ (Athiya Shetty-KL Rahul Wedding), ಕೆಎಲ್ ರಾಹುಲ್ ಅವರ ವಿವಾಹ ಸಮಾರಂಭದ (Athiya kl rahul marriage,) ಸಂಭ್ರಮದ ಕ್ಷಣಗಳ ಫೋಟೊಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನವ ದಂಪತಿಗೆ ಸುನೀಲ್ ಶೆಟ್ಟಿ ಕುಟುಂಬ ಹಾಗೂ ಕೆಎಲ್ ರಾಹುಲ್ ತಂದೆ ತಾಯಿ ಆಶೀರ್ವದಿಸಿರುವ ಫೋಟೊ ಹಂಚಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಅವರು ಪತ್ನಿ ಮಾನಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಪೋಷಕರೊಂದಿಗೆ ಜೋಡಿಗೆ ಆಶೀರ್ವದಿಸಿದ್ದಾರೆ. ಮೊದಲ ಫೋಟೊದಲ್ಲಿ -ಕ್ರಿಕೆಟರ್ ಕೆಎಲ್ ರಾಹುಲ್ (Athiya Shetty and kl Rahul) ಅವರ ತಂದೆ ತಾಯಿ ಡಾ ಕೆಎನ್ ಲೋಕೇಶ್ ಮತ್ತು ರಾಜೇಶ್ವರಿ ಲೋಕೇಶ್ ದಂಪತಿ ನವದಂಪತಿಯನ್ನು ಆಶೀರ್ವದಿಸಿದರು. ಅಥಿಯಾ ಮತ್ತು ಕೆಎಲ್ ರಾಹುಲ್ ಮಂಟಪದಲ್ಲಿ ಕುಳಿತು ನಗುತ್ತಾ ಒಬ್ಬರನ್ನೊಬ್ಬರು ನೋಡುತ್ತಿರುವ ಫೋಟೊ ಇದಾಗಿದೆ. ದಂಪತಿಯ ತಂದೆ ತಾಯಿ ಮಕ್ಕಳಿಗೆ ಹೂ ಚೆಲ್ಲಿದ್ದಾರೆ. ಎರಡನೇ ಚಿತ್ರದಲ್ಲಿ ಸುನೀಲ್ ಮತ್ತು ಮಾನಾ ಶೆಟ್ಟಿ ಅವರು ಮಗಳು ಆಥಿಯಾ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಸುನೀಲ್ ತನ್ನ ಮಗಳ ಕೆನ್ನೆಯ ಮೇಲೆ ಮುತ್ತಿಟ್ಟಿದ್ದಾರೆ.
ಚಿತ್ರಗಳಿಗೆ ಟೈಗರ್ ಶ್ರಾಫ್ ಸೇರಿದಂತೆ ಅನೇಕ ಕ್ರಿಕೇಟಿಗರು, ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಸುರೇಶ್ ರೈನಾ, “ಅಭಿನಂದನೆಗಳು ಸುನೀಲ್ ಅಣ್ಣ. ಇಡೀ ಕುಟುಂಬಕ್ಕೆ ಶುಭ ಹಾರೈಸುತ್ತೇನೆ” ಎಂದು ಬರೆದಿದ್ದಾರೆ. ಅಭಿನಂದನೆಗಳು ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: KL Rahul Athiya Shetty: ರಾಹುಲ್-ಅಥಿಯಾ ಜೋಡಿಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು? ಆಡಿ ಕಾರು ಕೊಟ್ಟಿದ್ಯಾರು?
ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ (kl rahul athiya Shetty marriage venue) ನಟ ಸುನೀಲ್ ಶೆಟ್ಟಿ(suniel Shetty) ಅವರ ಫಾರ್ಮ್ ಹೌಸನಲ್ಲಿ ಈ ಇಬ್ಬರ ಮದುವೆ(athiya Shetty photos) ಅದ್ಧೂರಿಯಾಗಿ ನಡೆದಿದೆ. ಖಾಸಗಿ ಸಮಾರಂಭದಲ್ಲಿ ನಡೆದ ಈ ಜೋಡಿಯ ವಿವಾಹ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಯಾವುದೇ ಟೀಮ್ ಇಂಡಿಯಾ ಆಟಗಾರರು ಭಾಗಿಯಾರಲಿಲ್ಲ. ಇನ್ನೊಂದೆಡೆ ಮಗಳು ಅಥಿಯಾ ಮತ್ತು ಅಳಿಯ ರಾಹುಲ್‌ಗೆ ಸುನೀಲ್ ಶೆಟ್ಟಿ ಮುಂಬೈಯಲ್ಲಿ 50 ಕೋಟಿ ರೂ. ಮೌಲ್ಯದ ಐಶಾರಾಮಿ ಅಪಾರ್ಟ್‌ಮೆಂಟ್ ಗಿಫ್ಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: KL Rahul- Athiya Shetty Wedding: ಹಸೆಮಣೆ ಏರಲಿರುವ ಅಥಿಯಾ-ಕೆಎಲ್ ರಾಹುಲ್ ಜೋಡಿಗೆ ಶುಭ ಹಾರೈಸಿದ ಅಜಯ್ ದೇವಗನ್!
ವರದಿಗಳ ಪ್ರಕಾರ ಕೊಹ್ಲಿ ಅವರು ರಾಹುಲ್ ಮತ್ತು ಅಥಿಯಾ ಜೋಡಿಗೆ 2.17 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ರಾಹುಲ್‌ಗೆ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬೈಕ್‌ನ ಮಾರುಕಟ್ಟೆ ಬೆಲೆ ಸುಮಾರು 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.