ಬೆಂಗಳೂರು: ಹೆಚ್ಚುತ್ತಿರುವ ಟೊಮೆಟೊ ಬೆಲೆ ಸಾಮಾನ್ಯ ಜನರ ಮೇಲೆ ಮಾತ್ರವಲ್ಲ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರ ಮೇಲೂ ಪರಿಣಾಮ ಬೀರಿದೆ ಎಂದರೆ ನೀವು ನಂಬಲೇ ಬೇಕು! ಹೊಸ ಸಂದರ್ಶನವೊಂದರಲ್ಲಿ ಅವರು, ʻʻಏರುತ್ತಿರುವ ಬೆಲೆಗಳಿಂದಾಗಿ ನಾನು ಟೊಮೆಟೊಗಳನ್ನು ತಿನ್ನುವುದೇ ಕಡಿಮೆ ಮಾಡಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ರಾಕಿ ನಟಿ ರಾಖಿ ಸಾವಂತ್ ತಮ್ಮ ಮನೆಯಲ್ಲೇ ಟೊಮೆಟೊ ಬೆಳೆಯುವುದು ಹೇಗೆ ಎನ್ನುವುದನ್ನು ಹೇಳಿದ್ದರು. ಆ ವಿಡಿಯೊವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಸುನೀಲ್ ಶೆಟ್ಟಿ ಅವರ ಈ ಮಾತು ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ಸಂದರ್ಶನದಲ್ಲಿ ಸುನೀಲ್ ಅವರು ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ತಾವು ಬೆಳೆಯುವ ವಿವಿಧ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಮಾತನಾಡಿದರು. “ನನ್ನ ಹೆಂಡತಿ ಮನೆಗೆ ಕೇವಲ ಒಂದು ಅಥವಾ ಎರಡು ದಿನ ತರಕಾರಿಗಳನ್ನು ಮಾತ್ರ ಖರೀದಿಸುತ್ತಾಳೆ. ಅಂದರೆ ತಾಜಾ ತರಕಾರಿಗಳನ್ನು ತಿನ್ನುವುದು ನಮಗೆ ರೂಢಿ. ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆಗಳು ಗಗನಕ್ಕೇರುತ್ತಿವೆ. ಇದು ನಮ್ಮ ಅಡುಗೆಮನೆಯ ಮೇಲೂ ಪರಿಣಾಮ ಬೀರಿದೆ. ಈ ದಿನಗಳಲ್ಲಿ ನಾನು ಕಡಿಮೆ ಟೊಮೆಟೊಗಳನ್ನು ತಿನ್ನುತ್ತೇನೆ. ನಾನು ಸೂಪರ್‌ಸ್ಟಾರ್ ಆಗಿರುವುದರಿಂದ ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜನರು ಭಾವಿಸಬಹುದು. ಆದರೆ ಇದು ನಿಜವಲ್ಲ, ನಾವು ಅಂತಹ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿದೆʼʼ ಎಂದರು.
ಆ್ಯಪ್‌ಗಳ ಕುರಿತು ಅವರು ಮಾತನಾಡಿ ʻʻನೀವು ಈ ಅಪ್ಲಿಕೇಶನ್‌ಗಳ ಬೆಲೆಗಳನ್ನು ನೋಡಿದರೆ ಆಘಾತಕ್ಕೊಳಗಾಗುತ್ತೀರಿ. ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗಿಂತ ಅವು ಅಗ್ಗವಾಗಿವೆ. ನಾನು ಕೆಲವೊಂದು ಆ್ಯಪ್‌ಗಳಿಂದ ಆರ್ಡರ್ ಮಾಡಿಕೊಳ್ಳುತ್ತೇನೆ. ಆದರೆ ಅದು ಅಗ್ಗವಾಗಿರುತ್ತದೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅವರು ತಾಜಾ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಎಂಬ ಕಾರಣಕ್ಕಾಗಿ. ತರಕಾರಿಗಳನ್ನು ಎಲ್ಲಿ ಬೆಳೆಯಲಾಗುತ್ತದೆ ಎಂದೂ ಅವರು ನಮಗೆ ತಿಳಿಸುತ್ತಾರೆ. ರೈತರೂ ಅವರಿಂದ ನೇರ ಪ್ರಯೋಜನಗಳನ್ನು ಪಡೆಯುತ್ತಾರೆʼʼ ಎಂಬ ಶೆಟ್ಟಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: KL Rahul Athiya Shetty: ರಾಹುಲ್-ಅಥಿಯಾ ಜೋಡಿಗೆ ದುಬಾರಿ ಉಡುಗೊರೆ ದೊರೆತಿಲ್ಲ; ಸುನೀಲ್ ಶೆಟ್ಟಿ
ʻʻನಟರಿಗೆ ಸಾಮಾನ್ಯ ಜನರ ಬವಣೆ ಏನೂ ತಿಳಿದಿಲ್ಲ ಎಂದು ಜನ ಭಾವಿಸಿರಬಹುದು. ಆದರೆ ಕೆಲವೊಮ್ಮೆ ಅವರು ಸಾಮಾನ್ಯ ಜನರಿಗಿಂತ ಹೆಚ್ಚು ತಿಳಿದಿರುತ್ತಾರೆ. ನಾನು ಸಹ ಉತ್ತಮ ಬೆಲೆಗಳಿಗಾಗಿ ಚೌಕಾಶಿ ಮಾಡುತ್ತೇನೆ. ಆದರೆ ಟೊಮೆಟೊ ಬೆಲೆ ಏರಿಕೆಯಿಂದಾಗಿ ಜನರು ರುಚಿ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿ ಬಂದಿದೆ. ನಾನು ಕೂಡ.” ಎಂದವರು ಹೇಳಿದರು.