Site icon Vistara News

Suniel Shetty: ಟೊಮ್ಯಾಟೊ ಹೇಳಿಕೆಗೆ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ

Suniel Shetty

ಬೆಂಗಳೂರು: ನಟ ಸುನೀಲ್ ಶೆಟ್ಟಿ (Suniel Shetty) ಟೊಮ್ಯಾಟೊ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ‘ಟೊಮೆಟೊ ಬೆಲೆ ಕೇಳಿದಮೇಲೆ ಊಟದಲ್ಲಿ ಟೊಮ್ಯಾಟೊ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ’ ಎನ್ನುವ ಮಾತುಗಳನ್ನು ಆಡಿದ್ದರು. ಆ ನಂತರ ಅನೇಕರು ಇವರ ಮಾತಿಗೆ ವಿರೋಧಿಸಿದ್ದರು. ಟ್ರೋಲ್ ಕೂಡ ಮಾಡಿದ್ದರು. ಇದೀಗ ಈ ಬಗ್ಗೆ ಸುನೀಲ್‌ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಯನ್ನು ತಪ್ಪು ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ನಟ ಸಮರ್ಥಿಸಿಕೊಂಡಿದ್ದಾರೆ. “ನಾನು ನಮ್ಮ ರೈತರನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತೇನೆ. ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತನ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ನಾನು ರೈತ ವಿರೋಧಿ ಮಾತುಗಳನ್ನು ಆಡಿಲ್ಲ. ನನಗೂ ರೈತನ ಬಗ್ಗೆ ಕಾಳಜಿ ಇದೆ. ನನ್ನ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಅವರು ಹೇಳಿಕೊಂಡಿದ್ದಾರೆ. ತಮಗೂ ರೈತರ ಬಗ್ಗೆ ಕಾಳಜಿ ಇರುವ ಕುರಿತು ಮಾತನಾಡಿದ್ದಾರೆ.

ನಟ ಹೇಳಿದ್ದೇನು?

ಸಂದರ್ಶನದಲ್ಲಿ ಸುನೀಲ್ ಅವರು ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ತಾವು ಬೆಳೆಯುವ ವಿವಿಧ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಮಾತನಾಡಿದ್ದರು. “ನನ್ನ ಹೆಂಡತಿ ಮನೆಗೆ ಕೇವಲ ಒಂದು ಅಥವಾ ಎರಡು ದಿನ ತರಕಾರಿಗಳನ್ನು ಮಾತ್ರ ಖರೀದಿಸುತ್ತಾಳೆ. ಅಂದರೆ ತಾಜಾ ತರಕಾರಿಗಳನ್ನು ತಿನ್ನುವುದು ನಮಗೆ ರೂಢಿ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಬೆಲೆಗಳು ಗಗನಕ್ಕೇರುತ್ತಿವೆ. ಇದು ನಮ್ಮ ಅಡುಗೆಮನೆಯ ಮೇಲೂ ಪರಿಣಾಮ ಬೀರಿದೆ. ಈ ದಿನಗಳಲ್ಲಿ ನಾನು ಕಡಿಮೆ ಟೊಮ್ಯಾಟೊ ತಿನ್ನುತ್ತೇನೆ. ನಾನು ಸೂಪರ್‌ಸ್ಟಾರ್ ಆಗಿರುವುದರಿಂದ ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜನರು ಭಾವಿಸಬಹುದು. ಆದರೆ ಇದು ನಿಜವಲ್ಲ, ನಾವು ಅಂತಹ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿದೆʼʼ ಎಂದಿದ್ದರು.

ಇದನ್ನೂ ಓದಿ: Suniel Shetty : ಅಳಿಯ ಕೆ.ಎಲ್‌.ರಾಹುಲ್‌ಗೆ ಜಾಸ್ತಿ ಒಳ್ಳೆಯವನಾಗಿರಬೇಡ ಎಂದು ಸಲಹೆ ಕೊಟ್ಟ ಸುನಿಲ್‌ ಶೆಟ್ಟಿ!

ಆ್ಯಪ್‌ಗಳ ಕುರಿತು ಅವರು ಮಾತನಾಡಿ ʻʻನೀವು ಈ ಅಪ್ಲಿಕೇಶನ್‌ಗಳ ಬೆಲೆಗಳನ್ನು ನೋಡಿದರೆ ಆಘಾತಕ್ಕೊಳಗಾಗುತ್ತೀರಿ. ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗಿಂತ ಅವು ಅಗ್ಗವಾಗಿವೆ. ನಾನು ಕೆಲವೊಂದು ಆ್ಯಪ್‌ಗಳಿಂದ ಆರ್ಡರ್‌ ಮಾಡಿಕೊಳ್ಳುತ್ತೇನೆ. ಆದರೆ ಅದು ಅಗ್ಗವಾಗಿರುತ್ತದೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅವರು ತಾಜಾ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಎಂಬ ಕಾರಣಕ್ಕಾಗಿ. ತರಕಾರಿಗಳನ್ನು ಎಲ್ಲಿ ಬೆಳೆಯಲಾಗುತ್ತದೆ ಎಂದೂ ಅವರು ನಮಗೆ ತಿಳಿಸುತ್ತಾರೆ. ರೈತರೂ ಅವರಿಂದ ನೇರ ಪ್ರಯೋಜನಗಳನ್ನು ಪಡೆಯುತ್ತಾರೆʼʼ ಎಂಬ ಶೆಟ್ಟಿ ಅಭಿಪ್ರಾಯ ಹಂಚಿಕೊಂಡಿದ್ದರು.

Exit mobile version