ಬೆಂಗಳೂರು: ಬಾಲಿವುಡ್‌ನ ಹೆಸರಾಂತ ಸಿನಿಮಾ ʻಹೇರಾ ಫೇರಿʼ (Hera Pheri 3) ಸಿನಿಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ನಟ ಸುನಿಲ್ ಶೆಟ್ಟಿ (Suniel Shetty) ಖಚಿತಪಡಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಜತೆ ಅಭಿನಯಿಸಲು ಎದುರು ನೋಡುತ್ತಿರುವುದಾಗಿ ಸುನಿಲ್ ಶೆಟ್ಟಿ ತಿಳಿಸಿದ್ದಾರೆ. ಎಂಪೈರ್ ಸ್ಟುಡಿಯೊದಲ್ಲಿ ನಿರ್ಮಾಪಕರು ಚಿತ್ರದ ಪ್ರೊಮೊವನ್ನು ಚಿತ್ರೀಕರಿಸಿದ್ದಾರೆ.
ʻಹೇರಾ ಫೆರಿ 3′ ಮೂಲ ಪಾತ್ರವರ್ಗದೊಂದಿಗೆ ಮತ್ತೆ ಟ್ರ್ಯಾಕ್‌ಗೆ ಮರಳಿರುವ ಬಗ್ಗೆ ಸುನೀಲ್ ʻʻಹೇರಾ ಫೆರಿ 3 ಅಂತಿಮವಾಗಿ ನಡೆಯುತ್ತಿದೆ. ಪರೇಶ್‌ಜಿ ಮತ್ತು ಅಕ್ಕಿ (ಅಕ್ಷಯ್) ಜತೆಯಲ್ಲಿ ಮತ್ತೆ ಸೆಟ್‌ಗೆ ಮರಳಲು ಎದುರು ನೋಡಬಹುದು. ಎಲ್ಲ ಒಳ್ಳೆಯ ಕೆಲಸಗಳಂತೆ ಇದು ಕೂಡ ಆರಂಭವಾಗಲು ಸ್ವಲ್ಪ ಸಮಯ ತಗುಲಿತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದರೊಂದಿಗೆ ನಿರಾಳತೆ ಮೂಡಿದೆ’ ಎಂದು ಹೇಳಿದ್ದಾರೆ.
2000ನೇ ಇಸವಿಯಲ್ಲಿ ಹಾಸ್ಯ ಭರಿತ ‘ಹೇರಾ ಫೇರಿ’ ಸಿನಿಮಾದ ಮೊದಲನೇ ಭಾಗ ಬಿಡುಗಡೆಯಾಗಿತ್ತು. ಪ್ರಮುಖವಾಗಿಯೂ ಪರೇಶ್, ಅಕ್ಷಯ್ ಹಾಗೂ ಸುನಿಲ್ ಅವರ ಅಭಿನಯ ಜನಮನ್ನಣೆಗೆ ಪಾತ್ರವಾಯಿತು. 2006ರಲ್ಲಿ ‘ಫಿರ್ ಹೇರಾ ಫೇರಿ’ ಎಂಬ ಹೆಸರಿನಲ್ಲಿ ಎರಡನೇ ಭಾಗ ಬಿಡುಗಡೆಯಾಗಿತ್ತು.
ಇದನ್ನೂ ಓದಿ: Salman Khan ಗೂ ಇದ್ದವು ಕಷ್ಟದ ದಿನಗಳು, ದುಡ್ಡಿಲ್ಲದಾಗ ಶರ್ಟ್ ಕೊಡಿಸಿದ್ದ ಸುನಿಲ್ ಶೆಟ್ಟಿ!
ಇದನ್ನೂ ಓದಿ: Athiya Kl Rahul Wedding Reception: ಐಪಿಎಲ್ ಬಳಿಕ ರಾಹುಲ್-ಅಥಿಯಾ ಜೋಡಿಯ ಆರತಕ್ಷತೆ; ಸುಳಿವು ನೀಡಿದ ಸುನೀಲ್ ಶೆಟ್ಟಿ
ಹೇರಾ ಫೆರಿ-3 ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. 2000ರಲ್ಲಿ ತೆರೆ ಕಂಡ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದರು. ಇದು 1989 ರ ಮಲಯಾಳಂ ಚಿತ್ರ ರಾಮ್‌ಜಿ ರಾವ್ ಸ್ಪೀಕಿಂಗ್‌ನ ರಿಮೇಕ್ ಆಗಿತ್ತು.