ಬೆಂಗಳೂರು: ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೆಟ್‌ಗೆ ವಿಶೇಷ ಅತಿಥಿಯಾಗಿ ಭೇಟಿ ನೀಡಿದ್ದರು. ದೇಬೋಷ್ಮಿತಾ ಅವರ ಗಾಯನವನ್ನು ಹಾಡಿ ಹೊಗಳಿದರು. ಈ ಕಾರ್ಯಕ್ರಮ ನೋಡಲು ದೇಬೋಷ್ಮಿತಾ ಅವರ ತಂದೆ-ತಾಯಿ ಕೂಡ ಬಂದಿದ್ದರು. ತಂದೆ-ಮಗಳ ಬಾಂಧವ್ಯದ ಬಗ್ಗೆ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ. ಈ ವೇಳೆ ನಟ ಮಗಳು ಆಥಿಯಾ ಶೆಟ್ಟಿಯೊಂದಿಗೆ ತನಗೂ ಇದೇ ರೀತಿಯ ಸಂಬಂಧವಿದೆ ಎಂದು ಹೇಳಿದರು. ಹಾಗೆಯೇ ತಂದೆಯೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದರು.
ದೇಬೋಶ್ಮಿತಾ ಅವರೊಂದಿಗೆ ನಟ ಮಾತನಾಡುತ್ತಾ, ʻʻನಿಮ್ಮ ತಂದೆಯೊಂದಿಗಿನ ನಿಮ್ಮ ಬಾಂಧವ್ಯವನ್ನು ನೋಡಿ ಖುಷಿಯಾಯಿತು. ಏಕೆಂದರೆ ನಾನು ಅಥಿಯಾ ಅವರೊಂದಿಗೆ ಅದೇ ಬಂಧವನ್ನು ಹೊಂದಿದ್ದೇನೆ. ಅದೇ ಪ್ರೀತಿ ಇದೆ ಮತ್ತು ನಾನು ಅವಳಿಗಾಗಿ ಮಾತ್ರ ಬದುಕುತ್ತೇನೆ. ನಮ್ಮ ತಾಯಿ ಕೂಡ ನಿಮ್ಮೆಲ್ಲರ ಕಾರ್ಯಕ್ರಮವನ್ನು ನೋಡುತ್ತಾರೆ. ನೀವೆಲ್ಲ ನಮ್ಮ ಕುಟುಂಬದ ಭಾಗವಾಗಿದ್ದೀರಿ’ ಎಂದಿದ್ದಾರೆ ಸುನೀಲ್ ಶೆಟ್ಟಿ. ಈ ವೇಳೆ ಅವರು ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Suniel Shetty: ಸುನೀಲ್ ಶೆಟ್ಟಿಗೆ ಅಮಿತಾಭ್ ಬಚ್ಚನ್, ಸಂಜಯ್ ದತ್ ʻಅಣ್ಣಾʼ ಅಂತ ಕರೆಯುವುದೇಕೆ?
ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೆಟ್
ʻʻತಂದೆ ಮತ್ತು ಮಕ್ಕಳ ಸಂಬಂಧ ಎಂದೆಂದಿಗೂ ಹೀಗೆಯೇ ಇರಬೇಕು. ನನ್ನ ಸ್ವಂತ ತಂದೆಯೊಂದಿಗೆ ನಾನು ಅದೇ ಬಂಧವನ್ನು ಹೊಂದಿದ್ದೆ. ನನ್ನ ತಂದೆ 9ನೇ ವಯಸ್ಸಿನಲ್ಲಿ ಹೋಟೆಲ್‌ನಲ್ಲಿ ಟೇಬಲ್ ಕ್ಲೀನ್ ಮಾಡುತ್ತಿದ್ದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ, ಟೇಬಲ್‌ಕ್ಲೀನ್ ಮಾಡಲು ಅದರ ನಾಲ್ಕೂ ಮೂಲೆ ಸುತ್ತುತ್ತಿದ್ದರು. ಯಾಕೆಂದರೆ ಕೈ ಸರಿಯಾಗಿ ಎಟಕುತ್ತಿರಲಿಲ್ಲ. ನನಗೆ ಇದೆಲ್ಲವೂ ನೆನಪಿದೆ. ನೀವು ಏನೇ ಆಗಿದ್ದರೂ ನಿಮ್ಮ ತಂದೆ ತಾಯಿಯಿಂದ ಮಾತ್ರ ಎಂಬುದು ಎಂದಿಗೂ ಮರೆಯಬೇಡಿ. ಅವರಿಗೆ ಯಾವಾಗಲೂ ಋಣಿಯಾಗಿರಿʼʼ ಎಂದರು.
ಸುನೀಲ್ ಶೆಟ್ಟಿ ಮುಂದೆ ವೆಬ್ ಶೋ `ಹಂಟರ್: ಟೂಟೇಗಾ ನಹಿ ತೊಡೆಗಾ’ದಲ್ಲಿ (Hunter: Tootega Nahi Todega) ಕಾಣಿಸಿಕೊಳ್ಳಲಿದ್ದಾರೆ. ಅಮೆಜಾನ್ ಮಿನಿ ಟಿವಿಯಲ್ಲಿ ಕಾರ್ಯಕ್ರಮ ಬಿಡುಗಡೆಯಾಗಲಿದೆ.