ಉತ್ತರ ಪ್ರದೇಶವನ್ನು “ಭಾರತದ ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ” ಎಂದು ಪ್ರಚಾರ ಮಾಡುವ ಸಲುವಾಗಿ ಸಿಎಂ ಯೋಗಿ ಆದಿತ್ಯನಾಥ್ ಮುಂಬೈಗೆ ಭೇಟಿ ಕೊಟ್ಟಿದ್ದಾರೆ. ಹಲವು ಬಾಲಿವುಡ್ ಗಣ್ಯರೊಂದಿಗೆ ಗುರುವಾರ ಜ. 5ರಂದು ಸಂವಾದ ನಡೆಸಿದ್ದಾರೆ. ಈ ವೇಳೆ ನಟ ಸುನೀಲ್ ಶೆಟ್ಟಿ (Suniel Shetty) ಬಾಲಿವುಡ್‌ನಲ್ಲಿ ಬಾಯ್ಕಾಟ್ ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ನ ಆಪತ್ತನ್ನು ತೆಗೆದುಹಾಕುವುದು ಮುಖ್ಯವಾಗಿದೆ ಎಂದು ಧ್ವನಿ ಎತ್ತಿದ್ದಾರೆ.
ಸುನೀಲ್ ಶೆಟ್ಟಿ ಮಾತನಾಡಿ ʻʻಬಾಲಿವುಡ್‌ನ 99%ರಷ್ಟು ಜನರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಮತ್ತು ಜನರನ್ನು ತಲುಪಲು ಕಠಿಣ ಪರಿಶ್ರಮದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಬಾಲಿವುಡ್ ಬಾಯ್ಕಾಟ್ ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್ ಅನ್ನು ತೆಗೆದುಹಾಕಬೇಕಾಗಿದೆ. ಕೆಲವೇ ಕೆಲವರ ಬುಟ್ಟಿಯಲ್ಲಿ ಕೊಳೆತ ಸೇಬು ಇರಬಹುದು. ಆದರೆ ನಾವೆಲ್ಲರೂ ಹಾಗಲ್ಲ. ಇಂತಹ ಕಳಂಕವನ್ನು ತೆಗೆದುಹಾಕಬೇಕಾಗಿದೆ. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರೂ ತಿಳಿಸಿ” ಎಂದು ಮನವಿ ಮಾಡಿದರು.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನೋಡಿ ಭಾವುಕರಾದ ಸುನೀಲ್ ಶೆಟ್ಟಿ: ನಟ ಹೇಳಿದ್ದೇನು?
ಬಾಲಿವುಡ್ ಚಲನಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಬಹಿಷ್ಕಾರದ ಕರೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಟ ಸುನೀಲ್ ಶೆಟ್ಟಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯದ ʻಪಠಾಣ್ʼ ಸಿನಿಮಾದ ‘ಬೇಷರಮ್ ರಂಗ್’ ಹಾಡು ಬಿಡುಗಡೆ ಸಂದರ್ಭದಲ್ಲಿ ಇಂತಹದ್ದೊಂದು ಟ್ರೆಂಡ್ ಕಾಣಿಸಿಕೊಂಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಡ್ಯಾನ್ಸ್ ಮಾಡಿರುವುದು ಹಿಂದು ಸಮುದಾಯಕ್ಕೆ “ಅಗೌರವ” ಎಂದು ಹಲವರು ಭಾವಿಸಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.
ಸುನೀಲ್ ಶೆಟ್ಟಿ ಅವರಲ್ಲದೆ ರವಿ ಕಿಶನ್, ಜಾಕಿ ಭಗ್ನಾನಿ, ಜಾಕಿ ಶ್ರಾಫ್, ರಾಜ್‌ಪಾಲ್ ಯಾದವ್, ಸೋನು ನಿಗಮ್, ಬೋನಿ ಕಪೂರ್, ಸುಭಾಷ್ ಘಾಯ್, ಮಧುರ್ ಭಂಡಾರ್ಕರ್ ಮತ್ತಿತರ ಸೆಲೆಬ್ರಿಟಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | Sunil Shetty | ಮಗಳು ಅಥಿಯಾ ಶೆಟ್ಟಿ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟ ಸುನೀಲ್ ಶೆಟ್ಟಿ