ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ (Suniel Shetty) ಅವರ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ವಿವಾಹವಾಗಿ ತಿಂಗಳುಗಳು ಕಳೆದಿವೆ. ಇದೀಗ ಸುನಿಲ್ ಶೆಟ್ಟಿ ಅವರು ಮಗಳು ಮತ್ತು ಅಳಿಯನಿಗೆ ಸಲಹೆ ನೀಡಿದ್ದು, ರಾಹುಲ್ ಅವರಿಗೆ ಜಾಸ್ತಿ ಒಳ್ಳೆಯ ಹುಡುಗನಾಗಿರಬೇಡ ಎಂದು ಹೇಳಿದ್ದಾರೆ.
ಹೌದು. ಇತ್ತೀಚೆಗೆ ಸುನಿಲ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರಿಗೆ ಮಗಳು ಮತ್ತು ಅಳಿಯನಿಗೆ ಏನು ಸಲಹೆ ನೀಡುತ್ತೀರಿ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಸುನಿಲ್ ಶೆಟ್ಟಿ ಅವರು, “ನಾನು ನನ್ನ ಮಗಳು ಇಂಡಸ್ಟ್ರಿಗೆ ಬರುವಾಗಲೇ ಅವಳಿಗೆ ಹೇಳಿದ್ದೆ, ಯಶಸ್ಸಿನ ಬಗ್ಗೆ ಭಯ ಬೇಡ ಹಾಗೆಯೇ ಸೋಲನ್ನು ಎದುರಿಸುವುದಕ್ಕೂ ಸಿದ್ಧವಿರು ಎಂದಿದ್ದೆ. ಎರಡನೆಯದಾಗಿ ನಿನ್ನ ಸಂಗಾತಿಯನ್ನು ಕುರುಡರ ರೀತಿಯಲ್ಲಿ ನಂಬು. ಅವನೊಬ್ಬ ಕ್ರೀಡಾಪಟು. ಪ್ರಯಾಣ ಮಾಡುತ್ತಿರುತ್ತಾನೆ. ಎಲ್ಲ ಕಡೆಗೆ ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನೀನು ಎಲ್ಲ ಸಮಯದಲ್ಲಿಯೂ ಅವನ ಪರವಾಗಿಯೇ ಇರಬೇಕು. ನಟರಂತೆ ಅವರೂ ಕೂಡ ಜೀವನದಲ್ಲಿ ಏರಿಳಿತವನ್ನು ಕಾಣುತ್ತದೆ. ನನ್ನ ಕಾಲದಲ್ಲಿ ನಾನು ಸುನಿಲ್ ಗವಾಸ್ಕರ್ ಅವರನ್ನು ನಂಬಿದ್ದರೆ, ನನ್ನ ಸಾಯುವ ದಿನದವರೆಗೂ ನನಗೆ ಅವರು ಹೀರೋ ಆಗಿಯೇ ಇರುತ್ತಾರೆ. ಆದರೆ ಈಗ ಕಾಲ ಹಾಗಿಲ್ಲ. ದ್ವೇಷ ಬಿತ್ತುವುದಕ್ಕೆ ತಂತ್ರಜ್ಞಾನಗಳು ಬಂದುಬಿಟ್ಟಿವೆ. ಈಗಿನದು ಭಯಾನಕ ಸಮಯ. ಈಗ ನಾವು ಸಂಗಾತಿಗೆ ಪೂರ್ತಿ ಬೆಂಬಲ ನೀಡುವುದು ಅತ್ಯವಶ್ಯಕ” ಎಂದು ಹೇಳಿದರು.
ಇದನ್ನೂ ಓದಿ: Alia Bhatt Viral Video : ಫೋಟೊಗ್ರಾಫರ್ ಚಪ್ಪಲಿ ಆಲಿಯಾ ಭಟ್ ಕೈಯಲ್ಲಿ!
ಹಾಗೆಯೇ ಅಳಿಯನ ವಿಚಾರದಲ್ಲಿ, “ನಿಮ್ಮ ಬಗ್ಗೆ ಕೀಳರಿಮೆ ತೋರುವ ಜನರಿಗೂ ನೀವು ತುಂಬಾ ಒಳ್ಳೆಯವರಾಗಿರುವುದು ಬೇಡ. ಅಥಿಯಾಗೆ ನೀನು ಅದೃಷ್ಟವಂತೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ” ಎಂದು ಹೇಳಿದ್ದಾರೆ.
ಸುನಿಲ್ ಶೆಟ್ಟಿ ಅವರು ಜೀ5ನಲ್ಲಿ ಬಿಡುಗಡೆಯಾದ ಆಪರೇಷನ್ ಫ್ರೈಡೇಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಹೇರಾ ಫೇರಿ 3 ಸಿನಿಮಾದಲ್ಲಿ ಶ್ಯಾಮ್ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.