Site icon Vistara News

Sunil Shende | ʻಶಾಂತಿʼ ಧಾರಾವಾಹಿ ಖ್ಯಾತಿಯ ನಟ ಸುನೀಲ್ ಶೇಂಡೆ ವಿಧಿವಶ

Sunil Shende

ಬೆಂಗಳೂರು: ಹಿಂದಿಯ ʻಶಾಂತಿʼ ಧಾರಾವಾಹಿ ಖ್ಯಾತಿಯ ಸುನೀಲ್ ಶೇಂಡೆ (Sunil Shende) ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಚಲನಚಿತ್ರಗಳಲ್ಲಿಯೂ ಇವರು ಹೆಸರುವಾಸಿಯಾಗಿದ್ದರು.

ನಟರ ಸ್ನೇಹಿತ, ಚಲನಚಿತ್ರ ಮತ್ತು ಸಂಗೀತ ವಿಮರ್ಶಕ ಪವನ್ ಝಾ ಈ ಕುರಿತು ಟ್ವೀಟ್‌ ಮಾಡಿ ” ಭಾನುವಾರ ರಾತ್ರಿ 1 ಗಂಟೆಗೆ ವಿಲೆ ಪಾರ್ಲೆಯಲ್ಲಿರುವ ಅವರ ನಿವಾಸದಲ್ಲಿ ಸುನೀಲ್ ಶೇಂಡೆ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪಾರ್ಶಿವಾಡದಲ್ಲಿರುವ ಹಿಂದು ಚಿತಾಗಾರದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತುʼʼಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ, ಮೋದಿ ಸಂತಾಪ

ಸುನೀಲ್ ಶೇಂಡೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಲವು ನಟ ನಟಿಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶಾಂತಿ ಧಾರಾವಾಹಿಯಲ್ಲಿ ನಟಿಸಿರುವ ರಾಜೇಶ್ ತೇಲಂಗ್ ಅವರು ಟ್ವೀಟ್‌ ಮೂಲಕ ಸುನೀಲ್‌ ಜತೆ ಇದ್ದ ನೆನಪುಗಳನ್ನು ಹಂಚಿಕೊಂಡಿದ್ದಾರೆ. “ಸುನೀಲ್ ಶೇಂಡೆ ಮಹಾನ್ ನಟ ಮತ್ತು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಶಾಂತಿ ಧಾರಾವಾಹಿಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುವ ಅದೃಷ್ಟ ನನಗೆ ಸಿಕ್ಕಿತು. ನಾನು ಅವರ ಮಗನ ಪಾತ್ರದಲ್ಲಿ ನಟಿಸಿದ್ದೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | Umesh Katti | ಹೃದಯಾಘಾತದಿಂದ ಆಹಾರ ಸಚಿವ ಉಮೇಶ್‌ ಕತ್ತಿ ವಿಧಿವಶ

Exit mobile version