Site icon Vistara News

Sunil Shetty | ಮಗಳು ಅಥಿಯಾ ಶೆಟ್ಟಿ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟ ಸುನೀಲ್‌ ಶೆಟ್ಟಿ

Sunil Shetty -Athiya Shetty And Kl Rahul’s Wedding

ಬೆಂಗಳೂರು: ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್‌ ರಾಹುಲ್‌ (Athiya Shetty And KL Rahul) ಮದುವೆಯ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ನಟ ಸುನೀಲ್‌ ಶೆಟ್ಟಿ (Sunil Shetty) ತಮ್ಮ ಮಗಳ ಮದುವೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್‌ ರಾಹುಲ್‌ ಡಿಸೆಂಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಸ್ವತಃ ಸುನೀಲ್‌ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಸುನೀಲ್‌ ಶೆಟ್ಟಿ ಅವರು ‘ಮಾಧ್ಯಮದವರ ಮುಂದೆ ಮಗಳು ಅಥಿಯಾ ಹಾಗೂ ರಾಹುಲ್‌ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಇಬ್ಬರ ಬಿಡುವಿನ ಸಮಯ ನೋಡಿ ಮದುವೆಯ ದಿನಾಂಕ ಫಿಕ್ಸ್‌ ಮಾಡುತ್ತೇವೆ. ಸೂಕ್ತ ಸಮಯದಲ್ಲಿ ತಿಳಿಯಲಿದೆ ಎಂದು’ ನಟ ಹೇಳಿಕೆ ನೀಡಿದ್ದಾರೆ. ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್‌. ರಾಹುಲ್‌ ಅವರ ಮದುವೆಯ ಬಗ್ಗೆ ಕಳೆದ ವರ್ಷದಿಂದಲೂ ಸುದ್ದಿ ಹರಿದಾಡುತ್ತಿವೆ. ಆದರೆ, ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ ಈ ಸ್ಟಾರ್​ ಜೋಡಿ ಪೇಟೆ-ಪಟ್ಟಣಗಳನ್ನು ಸುತ್ತುತ್ತಲೇ ಇದ್ದಾರೆ. ಇವರ ಡೇಟಿಂಗ್‌ ಸಂಗತಿ ಅಭಿಮಾನಿಗಳ ಮನೆಯ ಪ್ರತಿ ನಿತ್ಯದ ಮಾತಾಗಿದೆ.

ಇದನ್ನೂ ಓದಿ | Athiya Shetty And KL Rahul | ಅಥಿಯಾ- ರಾಹುಲ್​ ಜೋಡಿಯ ಮದುವೆ ಮುಂದಿನ ವರ್ಷಾರಂಭಕ್ಕೆ?

ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ನ ಪ್ರಥಮ ಪ್ರದರ್ಶನದಲ್ಲಿ ಒಟ್ಟಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ರಾಹುಲ್ ಮತ್ತು ಅಥಿಯಾ ಶೆಟ್ಟಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.

ಇದನ್ನೂ ಓದಿ | Athiya Shetty and KL Rahul | ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್‌ ರಾಹುಲ್‌ ಕಲ್ಯಾಣವಂತೆ : ಸುನೀಲ್‌ ಶೆಟ್ಟಿ ಹೇಳಿದ್ದೇನು?

Exit mobile version