Site icon Vistara News

Sunny Deol: ಒಂದೇ ದಿನ ರಿಲೀಸ್‌ ಆಗಲಿದೆ ಗದರ್‌ 2, ಅನಿಮಲ್‌ ಸಿನಿಮಾ : ಸನ್ನಿ ಡಿಯೋಲ್ ಪೋಸ್ಟರ್‌ ಔಟ್‌!

Sunny Deol Gadar 2 poster out

ಬೆಂಗಳೂರು : ʻಗದರ್‌-2ʼ (Gadar-2) ಸಿನಿಮಾದ ನಟ ಸನ್ನಿ ಡಿಯೋಲ್ (Sunny Deol) ಅವರ ಪೋಸ್ಟ್‌ರ್‌ ಬಿಡುಗಡೆಗೊಂಡಿದೆ. ಅವರ ಉಗ್ರ ಅವತಾರವು ಸಿನಿರಸಿಕರನ್ನು ರೋಮಾಂಚನಗೊಳಿಸಿದೆ. ಚಿತ್ರ ಆಗಸ್ಟ್ 11ರಂದು, ಬಿಡುಗಡೆಯಾಗಲಿದೆ. ರಣಬೀರ್ ಕಪೂರ್ ಅವರ ಅನಿಮಲ್ ಕೂಡ ಅದೇ ದಿನ ಬಿಡುಗಡೆಯಾಗಲಿದೆ.

ಗದರ್ 2 ಮೊದಲ ಪೋಸ್ಟರ್ ಔಟ್

ನಿರ್ದೇಶಕ ಅನಿಲ್ ಶರ್ಮಾ ಗದರ್‌ 2 ಕುರಿತು ಮಾತನಾಡಿ ʻʻಗದರ್ – ಏಕ್ ಪ್ರೇಮ್ ಕಥಾʼʼ ನನ್ನ ಚಿತ್ರವಲ್ಲ. ಇದು ಜನರ ಚಿತ್ರ. ತಾರಾ ಸಿಂಗ್ ಮತ್ತು ಸಕೀನಾ ಅವರ ಪ್ರೇಮಕಥೆಯನ್ನು ಜನರು ಇಂದಿಗೂ ಆರಾಧಿಸುತ್ತಿದ್ದಾರೆ. ಮೊದಲ ಪೋಸ್ಟರ್ ಬಿಡುಗಡೆ ಮಾಡಲು ನಾವು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇವೆʼʼಎಂದರು.

ಗದರ್ ಬಗ್ಗೆ ಸನ್ನಿ ಡಿಯೋಲ್ ಹೇಳಿದ್ದೇನು?

ಸನ್ನಿ ಡಿಯೋಲ್ ಮಾತನಾಡಿ ಗದರ್ – ಏಕ್ ಪ್ರೇಮ್ ಕಥಾ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನನ್ನ ಜೀವನದ ಒಂದು ಪ್ರಮುಖ ಸಿನಿಮಾ. ಗದರ್‌ನ ತಾರಾ ಸಿಂಗ್ ಪಾತ್ರ ಕೇವಲ ನಾಯಕ ಮಾತ್ರವಲ್ಲದೇ ಕುಟುಂಬ ಮತ್ತು ಪ್ರೀತಿಗಾಗಿ ಎಲ್ಲ ಗಡಿಗಳನ್ನು ದಾಟಿದ ಐಕಾನ್‌ ಎಂತಲೇ ಹೇಳಬಹುದು. 22 ವರ್ಷಗಳ ನಂತರ ಮತ್ತೆ ಸಿನಿತಂಡದೊಂದಿಗೆ ಸೃಜನಾತ್ಮಕವಾಗಿ ಕೆಲಸ ಮಾಡುತ್ತಿರುವುದು ಖುಷಿ ಇದೆ ಎಂದರು

ಇದನ್ನೂ ಓದಿ: Rashmika Mandanna | ರಣಬೀರ್‌-ರಶ್ಮಿಕಾ ಅಭಿನಯದ ʻಅನಿಮಲ್‌ʼ ಸಿನಿಮಾ ಫಸ್ಟ್‌ ಲುಕ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌!

2023ರಲ್ಲಿ ʻಗದರ್‌-2ʼ ಬಹು ನಿರೀಕ್ಷಿತ ಚಿತ್ರವಾಗಿದೆ. ಸಿನಿರಸಿಕರು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ʻಗದರ್‌-2ʼ ಸಿನಿಮಾದಲ್ಲಿ ಸನ್ನಿ ಡಿಯೋಲ್ ಅವರ ಲುಕ್‌ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ನೆಟ್ಟಿಗರು ಟ್ವೀಟ್‌ ಮೂಲಕ ʻಗದರ್‌-2 ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಲಿದೆʼʼಎಂದು ಕಮೆಂಟ್‌ ಮೂಲಕ ಹೇಳಿಕೊಳ್ಳುತ್ತಿದ್ದಾರೆ.

ವರದಿ ಪ್ರಕಾರ ಸಿನಿಮಾ ಹಿಮಾಚಲ ಪ್ರದೇಶ, ಇಂದೋರ್ ಮತ್ತು ಲಕ್ನೋದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಗದರ್-2 ಅನಿಲ್ ಶರ್ಮಾ ನಿರ್ದೇಶಿಸಿದ್ದಾರೆ. 2023ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಗದರ್‌-1

ಅನಿಲ್ ಶರ್ಮಾ ನಿರ್ದೇಶನದ ʻಗದರ್ ಏಕ್ ಪ್ರೇಮ್ ಕಥಾʼ ಆ ಕಾಲದ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜತೆಗೆ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: Sunny Deol | ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಫಸ್ಟ್‌ ಲುಕ್‌ ಔಟ್‌: ತಾರಾ ಸಿಂಗ್ ಪಾತ್ರ ನೆನಪಾಯ್ತು ಅಂದ್ರು ಫ್ಯಾನ್ಸ್‌!

ಗದರ್ 2 ಕುರಿತು ಸಂದರ್ಶನವೊಂದರಲ್ಲಿ ಈ ಹಿಂದೆ ನಿರ್ದೇಶಕ ಅನಿಲ್ ಶರ್ಮಾ ಮಾತನಾಡಿ ʻʻನಾವು ತಾರಾ ಸಿಂಗ್ (ಸನ್ನಿ), ಸಕಿನಾ (ಅಮಿಶಾ) ಮತ್ತು ಜೀತೆ (ಉತ್ಕರ್ಷ್ ಶರ್ಮಾ) ರಿಯಲ್‌ ಪಾತ್ರಧಾರಿಗಳ ಜತೆಯೇ ಚಿತ್ರೀಕರಣ ಮಾಡಿದ್ದೇವೆ. ಕಥೆಯೂ 22 ವರ್ಷಗಳ ಮುಂದೆ ಮುಂದುವರಿದಿದೆ. ಹೊಸ ಪ್ರೇಕ್ಷಕರಿಗೆ ಇದು ಹೊಸ ಚಿತ್ರ ಮತ್ತು ಹಳೆಯ ಪ್ರೇಕ್ಷರಿಗೆ ಇದೊಂದು ಸೀಕ್ವೆಲ್‌ ಆಗಿರಲಿದೆʼʼಎಂದು ಹೇಳಿದ್ದಾರೆ. ಝೀ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಮೀಶಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version