Site icon Vistara News

Sunny Deol | ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಫಸ್ಟ್‌ ಲುಕ್‌ ಔಟ್‌: ತಾರಾ ಸಿಂಗ್ ಪಾತ್ರ ನೆನಪಾಯ್ತು ಅಂದ್ರು ಫ್ಯಾನ್ಸ್‌!

Sunny Deol

ಬೆಂಗಳೂರು : ʻಗದರ್‌-2ʼ (Gadar-2) ಸಿನಿಮಾದ ನಟ ಸನ್ನಿ ಡಿಯೋಲ್ (Sunny Deol) ಅವರ ಫಸ್ಟ್‌ ಲುಕ್‌ ಔಟ್‌ ಆಗಿದೆ. ZEE ಸ್ಟುಡಿಯೋಸ್ ಈ ವರ್ಷ ಮುಂಬರುವ ಚಲನಚಿತ್ರಗಳ 50 ಸೆಕೆಂಡುಗಳ ಮಾಂಟೇಜ್ ವಿಡಿಯೊವನ್ನು ಅನಾವರಣಗೊಳಿಸಿದೆ. ಈ ವಿಡಿಯೊದಲ್ಲಿ ಸಿನಿಮಾಗಳ ಸಂಕ್ಷಿಪ್ತ ತುಣುಕುಗಳು ಒಳಗೊಂಡಿದೆ. ಈ ಸಂದರ್ಭದಲ್ಲಿ ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಅವರ ಲುಕ್‌ ಔಟ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ವೈರಲ್‌ ಆಗುತ್ತಿದೆ.

2023ರಲ್ಲಿ ʻಗದರ್‌-2ʼ ಬಹು ನಿರೀಕ್ಷಿತ ಚಿತ್ರವಾಗಿದೆ. ಸಿನಿರಸಿಕರು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ʻಗದರ್‌-2ʼ ಸಿನಿಮಾದಲ್ಲಿ ಸನ್ನಿ ಡಿಯೋಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್‌ ಕಂಡು ಅಭಿಮಾನಿಗಳು ʻʻಗದರ್‌-ಏಕ್ ಪ್ರೇಮ್ ಕಥಾದ ತಾರಾ ಸಿಂಗ್ ಪಾತ್ರ ನೆನಪಿಸುತ್ತದೆʼʼಎಂದು ಟ್ವೀಟ್‌ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರು ಟ್ವೀಟ್‌ ಮೂಲಕ ʻಗದರ್‌-2 ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಲಿದೆʼʼಎಂದು ಕಮೆಂಟ್‌ ಮೂಲಕ ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Pathaan Film | ಪಠಾಣ್​ ಸಿನಿಮಾ ಪೋಸ್ಟರ್​ ಹಾಕಿದ್ದ ಮಾಲ್​ ಮೇಲೆ ಬಜರಂಗ ದಳ ದಾಳಿ; ಜೈ ಶ್ರೀರಾಮ್​ ಎನ್ನುತ್ತ ದಾಂಗುಡಿ ಇಟ್ಟ ಕಾರ್ಯಕರ್ತರು

ವರದಿ ಪ್ರಕಾರ ಸಿನಿಮಾ ಹಿಮಾಚಲ ಪ್ರದೇಶ, ಇಂದೋರ್ ಮತ್ತು ಲಕ್ನೋದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಗದರ್-2 ಅನ್ನು ಅನಿಲ್ ಶರ್ಮಾ ನಿರ್ದೇಶಿಸಲಿದ್ದಾರೆ ಮತ್ತು 2023ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅನಿಲ್ ಶರ್ಮಾ ನಿರ್ದೇಶನದ ʻಗದರ್ ಏಕ್ ಪ್ರೇಮ್ ಕಥಾʼ ಆ ಕಾಲದ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜತೆಗೆ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗದರ್ 2 ಕುರಿತು ಸಂದರ್ಶನವೊಂದರಲ್ಲಿ ನಿರ್ದೇಶಕ ಅನಿಲ್ ಶರ್ಮಾ ಮಾತನಾಡಿ ʻʻನಾವು ತಾರಾ ಸಿಂಗ್ (ಸನ್ನಿ), ಸಕಿನಾ (ಅಮಿಶಾ) ಮತ್ತು ಜೀತೆ (ಉತ್ಕರ್ಷ್ ಶರ್ಮಾ) ರಿಯಲ್‌ ಪಾತ್ರಧಾರಿಗಳ ಜತೆಯೇ ಚಿತ್ರೀಕರಣ ಮಾಡಿದ್ದೇವೆ. ಕಥೆಯೂ 22 ವರ್ಷಗಳ ಮುಂದೆ ಮುಂದುವರಿದಿದೆ. ಹೊಸ ಪ್ರೇಕ್ಷಕರಿಗೆ ಇದು ಹೊಸ ಚಿತ್ರ ಮತ್ತು ಹಳೆಯ ಪ್ರೇಕ್ಷರಿಗೆ ಇದೊಂದು ಸೀಕ್ವೆಲ್‌ ಆಗಿರಲಿದೆʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | Sita Ramam Film | ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ ಹಿಂದಿಯಲ್ಲಿ ಬಿಡುಗಡೆ

Exit mobile version