Site icon Vistara News

Sunny Deol : ಸನ್ನಿ ಡಿಯೋಲ್ ಅಂಗೈಯಲ್ಲಿ ಸರ್ವ ಧರ್ಮ ಸಮನ್ವಯ! ಮಗನ ಮದ್ವೆಗೆ ತಂದೆಯ ವಿಶಿಷ್ಟ ಸಂದೇಶ

sunny deol mehandi

#image_title

ಮುಂಬೈ: ಬಾಲಿವುಡ್‌ ನಟ ಸನ್ನಿ ಡಿಯೋಲ್‌ (Sunny Deol) ಅವರ ಪುತ್ರ ಕರಣ್‌ ಡಿಯೋಲ್‌ ಅವರು ತಮ್ಮ ಪ್ರಿಯತಮೆ ದಿಶಾ ಆಚಾರ್ಯರೊಂದಿಗೆ ವಿವಾಹವಾಗಲು ಸನ್ನದ್ಧರಾಗಿದ್ದಾರೆ. ಈ ಜೋಡಿಯ ಮೆಹಂದಿ ಕಾರ್ಯಕ್ರಮ ಈಗಾಗಲೇ ಜರುಗಿದ್ದು, ಅದರಲ್ಲಿ ನಟಿ ಸನ್ನಿ ಡಿಯೋಲ್‌ ಕೂಡ ತಮ್ಮ ಕೈಗೆ ಮೆಹಂದಿ ಹಾಕಿಸಿಕೊಂಡಿದ್ದಾರೆ. ಅವರ ಮೆಹಂದಿ ಅತ್ಯಂತ ವಿಶೇಷವಾಗಿದ್ದು, ಅನೇಕರ ಗಮನ ಸೆಳೆದಿದೆ.

ಇದನ್ನೂ ಓದಿ: Viral News: ರಾಜಿ ಮೂಲಕ 138 ವಿಚ್ಛೇದನ ತಡೆದಿದ್ದ ವಕೀಲನಿಗೆ‌ ಡಿವೋರ್ಸ್‌ ನೀಡಿದ ಪತ್ನಿ; ಆದರ್ಶವೇ ಮುಳ್ಳಾಯಿತು
ಸನ್ನಿ ಡಿಯೋಲ್‌ ಅವರು ತಮ್ಮ ಬಲಗೈ ಅಂಗೈ ಮೇಲೆ ಹಿಂದೂ, ಮುಸ್ಲಿಂ ಸೇರಿದಂತೆ ಒಟ್ಟು ನಾಲ್ಕು ಧರ್ಮಗಳ ಚಿಹ್ನೆಗಳನ್ನು ಮೆಹಂದಿ ಹಾಕಿಸಿಕೊಂಡಿದ್ದಾರೆ. ಅವರ ಆ ಮೆಹಂದಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಎಲ್ಲ ಧರ್ಮಗಳ ಬಗ್ಗೆ ಅವರು ಕೊಟ್ಟಿರುವ ಗೌರವದ ಬಗ್ಗೆ ಹಲವಾರು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ.

ಸನ್ನಿ ಡಿಯೋಲ್‌


ಇನ್ನೊಂದು ವಿಡಿಯೊ ಬಾಲಿವುಡ್‌ನ ಮಾಧ್ಯಮವರಿಗೆ ಲಭ್ಯವಾಗಿದೆ. ಅದರಲ್ಲಿ ಸನ್ನಿ ಡಿಯೋಲ್‌ ಅವರು ಮದುವೆಗೆಂದು ಮನೆಗೆ ಬಂದಿರುವ ಬಂಧುಗಳೊಂದಿಗೆ ಮಾತನಾಡುತ್ತ ನಿಂತಿರುವುದನ್ನು ಕಾಣಬಹುದಾಗಿದೆ.


ಕರಣ್‌ ಮತ್ತು ದಿಶಾ ಅವರ ಮದುವೆ ಜೂನ್‌ 18ರಂದು ನಡೆಯಲಿದೆ. ಈಗಾಗಲೇ ಮದುವೆಯ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ. ಸನ್ನಿ ಡಿಯೋಲ್‌ ಅವರ ಮನೆಯಲ್ಲಿ ಅತ್ಯಂತ ಕಡಿಮೆ ಸಂಬಂಧಿಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆ ಆದ ನಂತರ ನವ ಜೋಡಿಗೆಂದು ಸನ್ನಿ ಡಿಯೋಲ್‌ ಅವರು ದೊಡ್ಡದೊಂದು ರಿಸೆಪ್ಶನ್‌ ನಡೆಸಲಿದ್ದಾರೆ ಎಂದು ವರದಿಗಳು ಹೇಳಿವೆ.

Exit mobile version