ಮುಂಬೈ: ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ (Sunny Deol) ಅವರು ನಟಿಸಿರುವ ಗದರ್ 2 ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಿನಿಮಾದ ಟ್ರೈಲರ್ ಅನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಈ ವೇಳೆ ಮಾತನಾಡಿದ ಸನ್ನಿ ಡಿಯೋಲ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ಗದರ್ 2 ಸಿನಿಮಾದ ಟ್ರೈಲರ್ ಬಿಡುಗಡೆಯಾದ ನಂತರ ಮಾತನಾಡಿದ ಸನ್ನಿ ಡಿಯೋಲ್ ಅವರು, “ಭಾರತ ಮತ್ತು ಪಾಕಿಸ್ತಾನಗಳೆರಡೂ ಕಡೆ ಪ್ರೀತಿ ಇದೆ. ಆದರೆ ಇಲ್ಲಿ ರಾಜಕೀಯದ ಆಟದಿಂದಾಗಿ ದ್ವೇಷ ಹುಟ್ಟಿಕೊಂಡಿದೆ. ಎರಡೂ ದೇಶಗಳ ಜನರು ಪರಸ್ಪರ ಜಗಳವಾಡುವುದನ್ನು ಬಯಸುವುದಿಲ್ಲ ಎನ್ನುವುದನ್ನು ನಾವು ಸಿನಿಮಾದಲ್ಲಿಯೂ ತೋರಿಸಿಕೊಟ್ಟಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
ಈ ಹೇಳಿಕೆ ಜನರಿಗೆ ಇಷ್ಟವಾಗಿಲ್ಲ. “ಸನ್ನಿ ಡಿಯೋಲ್ ಅವರು ಚಿತ್ರ ಬಾಯ್ಕಾಟ್ಗೆ ಆಹ್ವಾನ ನೀಡಲು ಈ ಹೇಳಿಕೆಯನ್ನು ಕೊಟ್ಟಿದ್ದಾರೆ”, “ಇಲ್ಲಿನ ಜನರು ಈ ಹೇಳಿಕೆಯನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಸನ್ನಿ ಡಿಯೋಲ್ಗೆ ಇಲ್ಲ. ಇಲ್ಲಿನ ಜನರು ಅವರ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಾರೆ. ಹಾಗೆಯೇ ಆ ಕಡೆಯ(ಪಾಕಿಸ್ತಾನ) ಜನರಿಗೆ ಇವರ ಸಿನಿಮಾ ನೋಡಲು ಟಿಕೆಟ್ ಖರೀದಿಸಲೂ ಹಣವಿಲ್ಲ”, “ಕಾರ್ಗಿಲ್ ವಿಜಯ ದಿನದಂದು ತನ್ನನ್ನು ತಾನು ದೇಶಭಕ್ತ ಎಂದು ಹೇಳಿಕೊಳ್ಳುವ ನಟನಿಂದ ನಾಚಿಕೆಗೇಡಿನ ಹೇಳಿಕೆ” ಎಂದು ಜನರು ಹೇಳಲಾರಂಭಿಸಿದ್ದಾರೆ.
#WATCH | Actor Sunny Deol at the trailer launch of his film #Gadar2 says, "There is love on both sides (India-Pakistan). It is the political game that creates all this hatred. And you will see the same in this film as well that the people do not want us to fight with each other." https://t.co/oc5ZHLmsqO pic.twitter.com/OYVPVRWnCZ
— ANI (@ANI) July 26, 2023
ಈಗಾಗಲೇ ಹಾಡುಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿರುವ ಗದರ್ 2 ಸಿನಿಮಾ ಬುಧವಾರ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಸನ್ನಿ ಅವರು ತಾರಾ ಸಿಂಗ್ ಆಗಿ ನಟಿಸಿದ್ದು, ನಟಿ ಅಮಿಶಾ ಅವರು ಸಕೀನಾ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇವರಿಬ್ಬರ ಮಗನಾದ ಚರಣ್ಜೀತ್ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಚಿತ್ರಹಿಂಸೆಗೆ ಒಳಗಾಗುತ್ತಾನೆ. ಅವನನ್ನು ಕರೆತರಲು ತಾರಾ ಸಿಂಗ್ ಹೋಗುತ್ತಾನೆ ಎನ್ನುವುದನ್ನು ಟ್ರೈಲರ್ನಲ್ಲಿ ತೋರಿಸಿಕೊಡಲಾಗಿದೆ. ಸಿನಿಮಾ ಆಗಸ್ಟ್ 11ರಂದು ತೆರೆ ಕಾಣಲಿದೆ.