ಮುಂಬೈ: ಬಾಲಿವುಡ್‌ನ ಹಾಟ್ ಬೆಡಗಿ ಸನ್ನಿ ಲಿಯೋನ್(Sunny Leone). ಸನ್ನಿಯ ಪ್ರತಿಯೊಂದು ಉಡುಗೆಯನ್ನೂ ಮೆಚ್ಚಿಕೊಳ್ಳುವ ದೊಡ್ಡ ಅಭಿಮಾನಿಗ ಬಳಗವೇ ಅವರಿಗಿದೆ. ಇದೀಗ ಅದೇ ನಟಿಯ ಪೂರ್ತಿ ಕುಟುಂಬವೇ ಭಾರತೀಯ ಶೈಲಿಯನ್ನು ಉಡುಗೆ ತೊಟ್ಟಿದ್ದು ನೆಟ್ಟಿಗರು ವಾವ್ ಎನ್ನುವಂತೆ ಮಾಡಿದೆ.
ಹೌದು. ಸನ್ನಿ ಲಿಯೋನ್ ಅವರು ಇತ್ತೀಚೆಗೆ ನಿರ್ದೇಶಕ ಕೃಷ್ಣ ಭಟ್ ಅವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದಕ್ಕೆಂದು ಪೂರ್ತಿ ಕುಟುಂಬ ಪಕ್ಕಾ ಭಾರತೀಯ ಶೈಲಿಯಲ್ಲಿ ಸಿದ್ಧವಾಗಿತ್ತು. ತಮ್ಮ ಕುಟುಂಬದ ಫೋಟೋವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಫೋಟೋಗಳನ್ನು ಹಂಚಿಕೊಂಡ ಅವರು ಅದಕ್ಕೆ, “ನಮ್ಮ ಮೊದಲ ಕುಟುಂಬ ಪ್ರಯಾಣ ಮದುವೆಯೊಂದಕ್ಕೆ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Sunny Leone: ಅನುರಾಗ್ ಕಶ್ಯಪ್,ನಟ ರಾಹುಲ್ ಭಟ್ ಜತೆ ಕಾನ್‌ನಲ್ಲಿ ಸನ್ನಿ ಲಿಯೋನ್!
ನಟಿ ಹಂಚಿಕೊಂಡಿರುವ ಫೋಟೋಗಳಲ್ಲಿ ಅವರು ನೀಲಿ ಬಣ್ಣದ ಲೆಹಂಗಾ ಧರಿಸಿದ್ದಾರೆ. ಕಿವಿಗೆ ವಜ್ರದ ದೊಡ್ಡದಾದ ಓಲೆಗಳನ್ನು ಹಾಕಿಕೊಂಡಿದ್ದಾರೆ. ಸನ್ನಿ ಅವರ ಪತಿ ಡೇನಿಯಲ್ ಕೂಡ ನೀಲಿ ಬಣ್ಣದ ಶರ್ವಾನಿ ಮತ್ತು ಸಿಲ್ಕ್ ಕುರ್ತಾ ಧರಿಸಿದ್ದಾರೆ. ಅವರ ಮಗಳು ನಿಶಾ ಹಳದಿ ಮತ್ತು ಗುಲಾಬಿ ಬಣ್ಣದ ಲೆಹಂಗಾ ಧರಿಸಿದ್ದಾರೆ. ಸನ್ನಿ ತಾನು ಮಾಡಿಕೊಂಡಿರುವ ಹೇರ್‌ಸ್ಟೈಲ್ ಅನ್ನೇ ಮಗಳಿಗೂ ಮಾಡಿದ್ದಾರೆ. ಇನ್ನು ಗಂಡು ಮಕ್ಕಳಾದ ನೋಹಾ ಮತ್ತು ಆಶರ್ ತಿಳಿ ಹಸಿರು ಬಣ್ಣದ ಕುರ್ತಾ ಪೈಜಾಮ ಧರಿಸಿದ್ದಾರೆ.
ಸನ್ನಿ ಈ ಉಡುಗೆಯಲ್ಲಿ ತಾವೊಬ್ಬರೇ ತೆಗೆಸಿಕೊಂಡಿರುವ ಹಲವಾರು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಎಲ್ಲ ಫೋಟೋಗಳನ್ನು ಕಂಡಿರುವ ಅವರ ಅಭಿಮಾನಿಗಳು ಫಿದಾ ಆಗಿರುವುದಾಗಿ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಭಾರತದ ಉಡುಗೆ ನಿಮಗೆ ಸರಿಹೊಂದುತ್ತದೆ, ನಿಮ್ಮ ಕುಟುಂಬ ಈ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದೆ ಎನ್ನುವಂತಹ ಹಲವಾರು ಕಾಮೆಂಟ್‌ಗಳು ಫೋಟೋಗಳಿಗೆ ಬಂದಿವೆ. ಈ ಪೋಸ್ಟ್ ಸಾವಿರಾರು ಲೈಕ್‌ಗಳನ್ನೂ ಸಹ ಪಡೆದುಕೊಂಡಿದೆ.
ಸನ್ನಿ ಮತ್ತು ಡೇನಿಯಲ್ 2011 ರಲ್ಲಿ ವಿವಾಹವಾದರು. ಅವರು 2017ರಲ್ಲಿ ಮಹಾರಾಷ್ಟ್ರದ ಲಾತೂರ್‌ನಿಂದ ನಿಶಾಳನ್ನು ದತ್ತು ಪಡೆದರು. ಹಾಗೆಯೇ 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಗಂಡು ಮಕ್ಕಳ ಪೋಷಕರಾದರು.