ಸನ್ನಿ ಲಿಯೋನ್ (Sunny Leone) ಆಗಾಗ ತಮ್ಮ ಮಾದಕ ಫೋಟೊಗಳಿಂದ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತಲೇ ಇರುತ್ತಾರೆ. ಆಗಸ್ಟ್ 9ರ ತಡರಾತ್ರಿ ಈವೆಂಟ್‌ವೊಂದಕ್ಕೆ ಸನ್ನಿ ಹಾಜರಾಗಿದ್ದರು. ರೆಡ್-ಕಟ್, ಬಾಡಿ ಹಗ್ಗಿಂಗ್ ಔಟ್‌ಫಿಟ್‌ನಲ್ಲಿ ಸೆಕ್ಸಿಯಾಗಿ ಕಂಡಿದ್ದಾರೆ ಸನ್ನಿ. ಮಾದಕ ನಟಿಯು ಕ್ಯಾಮೆರಾಗಳಿಗೆ ಸನ್ನಿ ಪೋಸ್ ನೀಡಿದ್ದು, ಅವರ ಫ್ಯಾನ್ಸ್ ನಟಿಯ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸನ್ನಿ ಅವರ ಪತಿ ಡೇನಿಯಲ್ ವೆಬರ್ ಕೂಡ ಭಾಗಿಯಾಗಿದ್ದು, ಕಪ್ಪು ಸೂಟ್‌ನಲ್ಲಿ ಮಿಂಚಿದ್ದಾರೆ. ಸನ್ನಿಯೊಂದಿಗೆ ಪೋಸ್ ಕೂಡ ನೀಡಿದ್ದಾರೆ.
ಸನ್ನಿ ಮತ್ತು ಡೇನಿಯಲ್ 2011 ರಲ್ಲಿ ವಿವಾಹವಾದರು. ಅವರು 2017ರಲ್ಲಿ ಮಹಾರಾಷ್ಟ್ರದ ಲಾತೂರ್‌ನಿಂದ ನಿಶಾಳನ್ನು ದತ್ತು ಪಡೆದರು. ಹಾಗೆಯೇ 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಗಂಡು ಮಕ್ಕಳ ಪೋಷಕರಾದರು. ಸನ್ನಿ ಲಿಯೋನ್ ನಿರೀಕ್ಷಿತ ಮಟ್ಟಕ್ಕೆ ಟಾಪ್ ಹೀರೊಯಿನ್ ಆಗಲೇ ಇಲ್ಲ. ಸನ್ನಿ ಇದ್ದಾರೆ ಅಂದರೆ ಅಲ್ಲೊಂದು ಗ್ಲಾಮರಸ್ ಡ್ಯಾನ್ಸ್ ಇರುತ್ತದೆ ಅಂತಲೇ ಅದೆಷ್ಟೋ ಜನ ಥಿಯೇಟರ್‌ಗೆ ಹೋಗುತ್ತಿದ್ದರು. ಆದರೆ ಸನ್ನಿ ಲಿಯೋನ್ ಒಬ್ಬ ಒಳ್ಳೆ ನಟಿ ಎಂಬ ಮಾತು ಬಹುಶಃ ಇನ್ನು ಕೇಳಿ ಬಂದಿಯೇ ಇಲ್ಲ ಅಂತಲೂ ಹೇಳಬಹುದು. ತೆಲುಗು, ತಮಿಳು ಹಿಂದಿ ಸೇರಿದಂತೆ ಕನ್ನಡದಲ್ಲೂ ನಟಿಸಿ ಹೋಗಿದ್ದಾರೆ.
ಇದನ್ನೂ ಓದಿ: Sunny Leone: ಸ್ಟ್ಯಾಂಡ್-ಅಪ್ ಕಮಿಡಿಯನ್ ಜತೆಗಿನ ಡೇಟಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ ಸನ್ನಿ ಲಿಯೋನ್
ಕೆಲವು ದಿನಗಳ ಹಿಂದೆಯಷ್ಟೇ ಸನ್ನಿ ಲಿಯೋನ್ (Sunny Leone) ಸ್ಟ್ಯಾಂಡ್-ಅಪ್ ಕಮಿಡಿಯನ್ ರಸೆಲ್ ಪೀಟರ್ಸ್ (Russell Peters) ಅವರೊಂದಿಗಿನ ಡೇಟಿಂಗ್ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದರು. ಸನ್ನಿ ಲಿಯೋನ್ ಜನಪ್ರಿಯ ಸ್ಟ್ಯಾಂಡ್-ಅಪ್ ಕಮಿಡಿಯನ್, ರಸೆಲ್ ಪೀಟರ್ಸ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದರು. ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ, ರಸೆಲ್ ಪೀಟರ್ಸ್ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳಲ್ಲಿ ಸಂಬಂಧದ ಬಗ್ಗೆ ತಮಾಷೆ ಮಾಡುವುದನ್ನು ನೀವು ಮನಸ್ಸಿಗೆ ತೆಗೆದುಕೊಳ್ಳುತ್ತೀರಾ ಎಂದು ಸನ್ನಿ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಸನ್ನಿ ಮಾತನಾಡಿ ʻʻಆತ ಹಾಗೆ ಮಾಡುತ್ತಾನೋ ಇಲ್ಲವೋ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ರಸೆಲ್ ಪೀಟರ್ಸ್ ಸಂಬಂಧದ ಬಗ್ಗೆ ತಮಾಷೆ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲʼʼ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.