Site icon Vistara News

Sunny Leone: ಸ್ಟ್ಯಾಂಡ್-ಅಪ್ ಕಮಿಡಿಯನ್ ಜತೆಗಿನ ಡೇಟಿಂಗ್‌ ಬಗ್ಗೆ ಮನಬಿಚ್ಚಿ ಮಾತನಾಡಿದ ಸನ್ನಿ ಲಿಯೋನ್‌

Sunny Leone Russell Peters

ಬೆಂಗಳೂರು: ಸನ್ನಿ ಲಿಯೋನ್ (Sunny Leone) ಸ್ಟ್ಯಾಂಡ್-ಅಪ್ ಕಮಿಡಿಯನ್ ರಸೆಲ್ ಪೀಟರ್ಸ್ (Russell Peters) ಅವರೊಂದಿಗಿನ ಡೇಟಿಂಗ್‌ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಸನ್ನಿ ಲಿಯೋನ್ ಜನಪ್ರಿಯ ಸ್ಟ್ಯಾಂಡ್-ಅಪ್ ಕಮಿಡಿಯನ್, ರಸೆಲ್ ಪೀಟರ್ಸ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ, ರಸೆಲ್ ಪೀಟರ್ಸ್ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳಲ್ಲಿ ಸಂಬಂಧದ ಬಗ್ಗೆ ತಮಾಷೆ ಮಾಡುವುದನ್ನು ನೀವು ಮನಸ್ಸಿಗೆ ತೆಗೆದುಕೊಳ್ಳುತ್ತೀರಾ ಎಂದು ಸನ್ನಿ ಅವರಿಗೆ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಸನ್ನಿ ಮಾತನಾಡಿ ʻʻಆತ ಹಾಗೆ ಮಾಡುತ್ತಾನೋ ಇಲ್ಲವೋ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ರಸೆಲ್ ಪೀಟರ್ಸ್ ಸಂಬಂಧದ ಬಗ್ಗೆ ತಮಾಷೆ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲʼʼಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಭಾರತಕ್ಕೆ ಬರುವ ಮೊದಲು ಅಮೆರಿಕದಲ್ಲಿ ಇರುವಾಗ ಇಬ್ಬರೂ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿರುವುದಾಗಿ ಬಹಿರಂಗಪಡಿಸಿದರು. ಸನ್ನಿ ಲಿಯೋನ್ ಅವರು ರಸೆಲ್ ಪೀಟರ್ಸ್ ಜತೆ ಡೇಟಿಂಗ್ ಮಾಡುವಾಗ ಅಮೆರಿಕದ ವಯಸ್ಕ ಚಲನಚಿತ್ರ ತಾರೆಯಾಗಿದ್ದರು.

ಸನ್ನಿ – ರಸ್ಸೆಲ್ ಸಂಬಂಧ

ಮಿಡ್-ಡೇ ಜತೆಗಿನ ಇತ್ತೀಚಿನ ಸಂದರ್ಶನದಲ್ಲಿ ಸನ್ನಿ ಅವರು ಕುರಿತು ಮಾತನಾಡಿದ್ದಾರೆ. “ಹಾಟ್ ಸೆಕೆಂಡ್ ಮಾತ್ರ ನಮ್ಮ ಡೇಟಿಂಗ್‌ ಆಗಿತ್ತು. ಅದೊಂದು ಮಿಸ್ಟೇಕ್‌ ಅಷ್ಟೇ. ಅವನು ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ. ನಾವು ಒಟ್ಟಿಗೆ ತುಂಬಾ ಆನಂದಿಸಿದ್ದೇವೆ. ಅಮೆರಿಕದಲ್ಲಿ ನಾನು ಎಲ್ಲೆಲ್ಲಿಗೆ ಪ್ರಯಾಣಿಸುತ್ತಿದ್ದೆನೋ ಅಲ್ಲಿ ಅವರು ಕಾರ್ಯಕ್ರಮವನ್ನು ಮಾಡುತ್ತಿದ್ದರು. ಆಗಾಗ ನಾವು ಭೇಟಿಯಾಗುತ್ತಿದ್ದೇವು, ನಿಜವಾಗಿಯೂ ತಮಾಷೆಯಾಗಿರುತ್ತಿತ್ತು” ಎಂದು ಸನ್ನಿ ಅದೇ ಸಂದರ್ಶನದಲ್ಲಿ ಹೇಳಿದರು. ರಸೆಲ್ ಪೀಟರ್ಸ್ ಅವರನ್ನು ಮತ್ತೆ ಭೇಟಿಯಾಗಲು ಇಷ್ಟಪಡುತ್ತೇನೆ ಎಂತಲೂ ಸನ್ನಿ ಹೇಳಿದ್ದಾರೆ.

ಇದನ್ನೂ ಓದಿ: Sunny Leone: ಟೀಮ್​ ಇಂಡಿಯಾದ ಈ ಕ್ರಿಕೆಟಿಗ ಸನ್ನಿ ಲಿಯೋನ್​ಗೆ ಫೇವರಿಟ್​

ಇದನ್ನೂ ಓದಿ: Sunny Leon Trendy Partywear: ಬೆಂಗಳೂರಿನ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿಕೃಷ್ಣ ಡಿಸೈನರ್‌ವೇರ್‌ನಲ್ಲಿ ಸನ್ನಿ ಲಿಯೋನ್‌ ಡಿಜೆ ಪಾರ್ಟಿ

ಸದ್ಯ ಡೇನಿಯಲ್ ಜತೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಸನ್ನಿ. ಮೂರು ಮಕ್ಕಳ ತಾಯಿಯೂ ಆಗಿದ್ದಾರೆ. ಪತಿ ಡೇನಿಯಲ್ ಸನ್ನಿ ಅವರನ್ನು ರಸೆಲ್ ಪೀಟರ್ಸ್ ತಮಾಷೆ ಮಾಡಿದ್ದಕ್ಕಾಗಿ ಕ್ಲಾಸ್‌ ತೆಗೆದುಕೊಂಡಿದ್ದರು ಎಂಬ ವದಂತಿಗಳು ಇದ್ದವು. ಇದನ್ನು ವೆಬ್‌ ಸಿರೀಸ್‌ನಲ್ಲಿಯೂ ತೋರಿಸಲಾಗಿತ್ತು. ಈ ಬಗ್ಗೆ ಸಂದರ್ಶನದಲ್ಲಿ ಕೇಳಿದಾಗ, ನಟಿ ತಕ್ಷಣವೇ ನಕ್ಕು, ʻಅದು ಸ್ವಲ್ಪ ಸೂಕ್ಷ್ಮ ವಿಚಾರವಾಗಿದೆʼ ಎಂದರು.

ಮತ್ತೆ ಮಾತು ಮುಂದುವರಿಸಿ ʻʻರಸೆಲ್ ಪೀಟರ್ಸ್ ಹಾಗೂ ನಾನು ಈಗಲೂ ಸ್ನೇಹಿತರಾಗಬೇಕೆಂದು ಬಯಸುತ್ತೇನೆ. ಅವರು ಒಂದು ದಾರಿಯಲ್ಲಿ ಹೋದರೆ, ನಾನು ಬೇರೆ ದಾರಿಯಲ್ಲಿ ಹೋದೆ. ಇಬ್ಬರಿಗೂ ಒಳ್ಳೆಯದಾಗಿತ್ತು. ರಸೆಲ್‌ ತನ್ನ ಸ್ಟ್ಯಾಂಡ್-ಅಪ್ ಕಾಮಿಡಿಯಲ್ಲಿ ಮಾತನಾಡಿದ್ದರೂ ಪರವಾಗಿಲ್ಲʼʼ ಎಂದರು.

ಜೀ5 ನಲ್ಲಿ ಸ್ಟ್ರೀಮ್ ಆಗುತ್ತಿರುವ ಸನ್ನಿ ಅವರ ಆತ್ಮಚರಿತ್ರೆಯ ವೆಬ್ ಶೋ ಕರೆಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿಯಲ್ಲಿ ರಸೆಲ್ ಪೀಟರ್ಸ್ ಮಾದರಿಯಲ್ಲಿ ರಸ್ಟಿ ಎಂಬ ಹೆಸರಿನ ಪಾತ್ರವೂ ಇದೆ.

Exit mobile version