Site icon Vistara News

Kantara Movie | ʻಹ್ಯಾಟ್ಸ್‌ ಆಫ್‌ ರಿಷಬ್‌ʼಎಂದು ಕಾಂತಾರ ಸಿನಿಮಾ ಹೊಗಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌!

Kantara Movie

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ವಿಶ್ವದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ತಾರೆಯರು ಈ ಸಿನಿಮಾ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಸರದಿ. ಈ ಸಿನಿಮಾ ಕುರಿತು ಸ್ಟೈಲ್‌ ಕಿಂಗ್‌ ಹಾಡಿ ಹೊಗಳಿದ್ದಾರೆ.

ʻʻತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವುದು ಹೆಚ್ಚು ಇರುತ್ತದೆ. ಇಂತಹ ಒಳ್ಳೆಯ ಸಿನಿಮಾವನ್ನು ನೀಡಿದ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್‌ಗೆ ಧನ್ಯವಾದಗಳು. ಒಬ್ಬ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಟರಾಗಿ ಅದ್ಭುತ ನಿರ್ವಹಣೆ ತೋರಿದ ರಿಷಬ್ ಅವರಿಗೆ ಹ್ಯಾಟ್ಸ್‌ ಆಫ್‌. ಕಾಂತಾರದಂತಹ ಮಾಸ್ಟರ್ ಪೀಸ್ ಚಿತ್ರಕ್ಕಾಗಿ ದುಡಿದ ಎಲ್ಲಾ ಸಿನಿಮಾದ ತಾರೆಯರಿಗೆ ಹಾಗೂ ತಂತ್ರಜ್ಞರಿಗೂ ಅಭಿನಂದನೆಗಳುʼʼ ಎಂದು ರಜನಿಕಾಂತ್‌ ನಟ ರಜನಿಕಾಂತ್‌ ಟ್ವೀಟ್‌ ಮೂಲಕ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ವರಾಹ ರೂಪಂ, ನವರಸಂ ಸೇಮ್‌ ಟು ಸೇಮ್‌, ಏನಂತಾರೆ ಅಜನೀಶ್‌?

ಈ ಹಿಂದೆ ನಟಿ ಪೂಜಾ ಹೆಗ್ಡೆ ಪೋಸ್ಟ್‌ ಹಂಚಿಕೊಂಡು ʻʻನಿಮ್ಮ ಹೃಯದಿಂದ ಕಥೆ ಹೇಳಿ. ಸಿನಿಮಾ ಅಷ್ಟು ಚೆನ್ನಾಗಿದೆ. ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳು ಚಿಲ್‌ ಅನುಭವ ನೀಡಿತು. ದಿಗ್ಭ್ರಮೆಗೊಂಡೆ ಮತ್ತು ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ. ನಾನು ಬಾಲ್ಯದಲ್ಲಿ ನೋಡಿದ ಭೂತಾರಾಧನೆ, ಕೋಲ, ದೈವಾರಾಧನೆ ಮರುಕಳಿಸಿತು. ಸಿನಿಮಾವನ್ನು ತುಂಬಾ ಗೌರವದಿಂದ ಮಾಡಲಾಗಿದೆ. ಎಲ್ಲರೂ ಈ ಸಿನಿಮಾವನ್ನು ನೋಡಿʼʼ ಎಂದು ಹೊಂಬಾಳೆ ಫಿಲಮ್ಸ್‌ ಟ್ಯಾಗ್‌ ಮಾಡಿ ಬರೆದುಕೊಂಡಿದ್ದರು.

ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ | Kantara movie | ಕಾರ್ಯಕರ್ತರಿಗಾಗಿ ಕಾಂತಾರ ಉಚಿತ ಶೋ; ಥಿಯೇಟರ್‌ ಬುಕ್‌ ಮಾಡಿದ ಶಾಸಕ!

Exit mobile version