Site icon Vistara News

Sidharth Kiara Wedding: ಸಿದ್‌-ಕಿಯಾರ ಮದುವೆ ಇಲ್ಲಿಯೇ ಎಂದು ಖಚಿತಪಡಿಸಿದ ಜೈಸಲ್ಮೇರ್‌ ಸೂರ್ಯಗಢ್ ಪ್ಯಾಲೇಸ್!

Sidharth Kiara Wedding Jaisalmer indirectly confirms

ಬೆಂಗಳೂರು: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ ಅವರ ವಿವಾಹದ (Sidharth Kiara Wedding) ಸಿದ್ಧತೆ ಭರದಿಂದ ಸಾಗುತ್ತಿದೆ. ಫೆಬ್ರವರಿ 6ರಂದು ವಿವಾಹ ಸಮಾರಂಭ ನಡೆಯಲಿದೆ. ಹಳದಿ, ಮೆಹೆಂದಿ ಮತ್ತು ಸಂಗೀತ ಹೀಗೆ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮಗಳು ಫೆಬ್ರವರಿ 5ರಿಂದಲೇ ಶುರುವಾಗಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೋಡಿ ತಮ್ಮ ಮದುವೆಗಾಗಿ ಜೈಸಲ್ಮೇರ್‌ನಲ್ಲಿರುವ ರಾಯಲ್ ಸೂರ್ಯಗಢ್ ಪ್ಯಾಲೇಸ್ ಹೋಟೆಲ್ ಅನ್ನು ಬುಕ್ ಮಾಡಿದೆ ಎಂದು ವರದಿಯಾಗಿದೆ.

ಮಾಧ್ಯಮವೊಂದು ಇನ್‌ಸ್ಟಾ ಖಾತೆಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ ಅವರ ವಿವಾಹದ ಕುರಿತು ಪೋಸ್ಟ್‌ ಮಾಡಿತ್ತು. ಪೋಸ್ಟ್‌ಗೆ ಸೂರ್ಯಗಢ ಪ್ಯಾಲೇಸ್ ಹೋಟೆಲ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್,“ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ” ಎಂದು ಕಮೆಂಟ್‌ ಮಾಡಿದೆ. ಈ ಮೂಲಕ ಕಿಯಾರ-ಸಿದ್ಧಾರ್ಥ್ ಮದುವೆ ನಡೆಯುತ್ತಿರುವ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದೆ.

ಇದನ್ನೂ ಓದಿ: Sidharth Kiara Wedding: ಸಿದ್ಧಾರ್ಥ್-ಕಿಯಾರ ಮದುವೆಯಲ್ಲಿ ಏನೆಲ್ಲ ವಿಶೇಷತೆಗಳಿರಲಿವೆ?

ಇದನ್ನೂ ಓದಿ: Kiara – Sidharth Wedding : ಕಿಯಾರಾ – ಸಿದ್ದಾರ್ಥ್‌ ಮದುವೆಗೂ ಶಾರುಖ್‌ ಖಾನ್‌ಗೂ ಇದೆ ಸಂಬಂಧ! ಏನದು?

ಸಿದ್ಧಾರ್ಥ್ ಮತ್ತು ಕಿಯಾರಾ ಅವರ ವಿವಾಹಕ್ಕೆ ಸುಮಾರು 100 ಜನ ಅತಿಥಿಗಳಷ್ಟೇ ಭಾಗಿಯಾಗಲಿದ್ದು, ಆಪ್ತರಿಗಷ್ಟೇ ಆಹ್ವಾನ ಮಾಡಲಾಗಿದೆ ಎನ್ನಲಾಗಿದೆ. ಶಾಹಿದ್ ಕಪೂರ್, ಮೀರಾ ರಜಪೂತ್, ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಅವರು ಆಹ್ವಾನಿಸಿದವರಲ್ಲಿ ಸೇರಿದ್ದಾರೆ. ‘ಶೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

Exit mobile version