Site icon Vistara News

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Suvarna Celebrity League a reality show launched on Star Suvarna

ಬೆಂಗಳೂರು: ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” (Suvarna Celebrity League) ಇದೇ ಭಾನುವಾರದಿಂದ (ಸೆ.15) ರಾತ್ರಿ 7 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೊಂದು ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಒಳಗೊಂಡ ವಿನೂತನ ರೀತಿಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ ಒಟ್ಟು 2 ತಂಡಗಳು ಇರಲಿದ್ದು, 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. ಈ ಜಟಾಪಟಿಯಲ್ಲಿ ಯಾವ ತಂಡ ಗೆದ್ದು “ಸುವರ್ಣ ಸೆಲೆಬ್ರಿಟಿ ಲೀಗ್” ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಎಂಬುದು ಈ ಕಾರ್ಯಕ್ರಮದ ಶೈಲಿಯಾಗಿದೆ. ಜತೆಗೆ ಮೋಜು-ಮಸ್ತಿ, ತರ್ಲೆ ತುಂಟಾಟದ ಜತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ.

ನಿರೂಪಕರಾಗಿ ಮಿಂಚಲಿರುವ ಕಾರ್ತಿಕ್‌ ಮಹೇಶ್‌

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಅದ್ಧೂರಿಯಾಗಿ ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್‌’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಆಗಿದೆ.

‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್‌ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. 10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ ಹಾಗೂ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಯ ಚಂದು ಗೌಡ, ‘ಆಸೆ’ ಧಾರಾವಾಹಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ, ‘ಗೌರಿಶಂಕರ’ ಧಾರಾವಾಹಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ ‘ಕಾಮಿಡಿ ಗ್ಯಾಂಗ್ಸ್’ನ ಹಿತೇಶ್ ಭಾಗವಹಿಸಲಿದ್ದಾರೆ.

ಇನ್ಮುಂದೆ ವಾರಾಂತ್ಯದಲ್ಲಿ ಶುರುವಾಗಲಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ಪ್ರತೀ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Exit mobile version