Site icon Vistara News

Bollywood : ಬೇಬಿ ಬಂಪ್​ ತೋರಿಸುವ ಸರದಿಯಲ್ಲಿ ಸ್ವರಾ; ಪತಿ ಫಹಾದ್ ಜತೆ ಫೋಟೊ ಹಂಚಿಕೊಂಡ ನಟಿ

Actress Swara Bhaskar

#image_title

ನವ ದೆಹಲಿ : ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯದ ಮದುವೆ ಮದುವೆಯಾಗಿ ಮಾರ್ಚ್​​ನಲ್ಲಿ ಅದ್ಧೂರಿ ಸಮಾರಂಭದೊಂದಿಗೆ ವಿವಾಹವಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಅವರ ಪತಿ ಫಹಾದ್ ಅಹ್ಮದ್ ತಮ್ಮ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಪತಿ ಫಹಾದ್ ಅವರೊಂದಿಗೆ ಬೇಬಿ ಬಂಪ್​ನ ಫೋಟೋವನ್ನು ಶೇರ್​ ಮಾಡಿರುವ ನಟಿ ಗರ್ಭಧಾರಣೆಯ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಫೆಬ್ರವರಿ 16, 2023ರಂದು ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ನಾಲ್ಕು ತಿಂಗಳ ನಂತರ ದಂಪತಿ ತಮ್ಮ ದಾಂಪತ್ಯದ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾನು ಮತ್ತು ಫಹಾದ್ ಪೋಷಕರಾಗಲು ಸಜ್ಜಾಗಿದ್ದೇವೆ ಎಂದು ಸ್ವರಾ ಬರೆದುಕೊಂಡಿದ್ದಾರೆ.

ಸ್ವರಾ ಭಾಸ್ಕರ್​ ಮೂರು ಫೋಟೋಗಳನ್ನು ಹಂಚಿಕೊಂಡಿದ್ದರೆ. ಅದರಲ್ಲಿ ಅವರು ಪತಿ ಫಹಾದ್ ಜತೆ ನಿಂತು ಬೇಬಿ ಬಂಪ್​ ತೋರಿಸಿದ್ದಾರೆ. ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವ ಅವರು ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಅಕ್ಟೋಬರ್​​ನಲ್ಲಿ ತನ್ನ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಒಟ್ಟಿಗೆ ಉತ್ತರ ನೀಡುತ್ತವೆ ಎಂದು ಬರೆದುಕೊಂಡಿದ್ದಾರೆ.

ಸ್ವರಾ ಮತ್ತು ಫಹಾದ್ ಲವ್ ಸ್ಟೋರಿ ಹೀಗಿದೆ

2020 ರ ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಯುವಜನ ಸಭಾದ ರಾಜ್ಯ ಅಧ್ಯಕ್ಷ ಫಹಾದ್ ಅಹ್ಮದ್ ಭೇಟಿಯಾಗಿದ್ದಾರೆ. ಈ ವೇಳೆ ಅವರಿಬ್ಬರು ಸ್ನೇಹಿತರಾಗಿದ್ದರು. ಸ್ವಲ್ಪ ಸಮಯದ ನಂತರ ಪ್ರೀತಿ ಮೊಳಕೆಯೊಡೆದಿತ್ತು. ಹೀಗಾಗಿ ಅವರು ವಿವಾಹವಾಗಲು ನಿರ್ಧರಿಸಿದರು. ಅಂತೆಯೇ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿದರು. ಮಾರ್ಚ್​​ನಲ್ಲಿ ಸಂಭ್ರಮದ ಕಾರ್ಯಕ್ರಮ ಆಯೋಜಿಸಿ ಔತಣಕೂಟ ಏರ್ಪಡಿಸಿದ್ದರು.

ಈ ವೇಳೆ ಮೆಹೆಂದಿ ಮತ್ತು ಸಂಗೀತದೊಂದಿಗೆ ಸಂಪೂರ್ಣವಾದ ಸಾಂಪ್ರದಾಯಿಕ ಭಾರತೀಯ ವಿವಾಹ ಕಾರ್ಯಕ್ರಮ ಆಯೋಜಸಿದ್ದರು. ಅದಕ್ಕಿಂತ ಮೊದಲು ತಮ್ಮ ಪ್ರೀತಿಪಾತ್ರರಿಗಾಗಿ ಖವ್ವಾಲಿ ರಾತ್ರಿಯನ್ನು ಸಹ ನಡೆಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಯಾ ಬಚ್ಚನ್ ಅವರು ರಾಷ್ಟ್ರ ರಾಜಧಾನಿ ದೆಹಯಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವರಾ ಇತ್ತೀಚೆಗೆ 2023 ರಲ್ಲಿ ಬಿಡುಗಡೆಯಾದ ಜಹಾನ್ ಚಾರ್ ಯಾರ್ ಚಿತ್ರದಲ್ಲಿ ಕಾಣಿಸಿಕೊಂಡರು.

ತಮ್ಮ ಮದುವೆ ಕುರಿತು ಮಾತನಾಡಿದ್ದ ಫಹಾದ್​ ಮತ್ತು ಸ್ವರಾ, ನಾವಿಬ್ಬರು ವಿಭಿನ್ನ ಧರ್ಮಗಳು ಹಾಗೂ ಹಿನ್ನೆಲೆಗೆ ಸೇರಿದವರು. ವಿಭಿನ್ನ ಜೀವನ ಅನುಭವಗಳನ್ನು ಹೊಂದಿರುವವರು. ಆದರೂ ನಾವಿಬ್ಬರೂ ಒಂದು ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ನಮ್ಮ ಮೂಲವನ್ನು ಬದಲಾಯಿಸಿಕೊಳ್ಳಬಾರದು ಅಷ್ಟೇ. ಆರಾಮ ಜೀವನದಿಂದ ಹೊರಗೆ ಬರಬೇಕು ಅಷ್ಟೇ ಎಂದು ಹೇಳಿದ್ದರು.

Exit mobile version