ಬೆಂಗಳೂರು: ನವವಿವಾಹಿತರಾದ ಸ್ವರಾ ಭಾಸ್ಕರ್ (Swara Bhasker) ಮತ್ತು ಫಹಾದ್ ಅಹ್ಮದ್ ಜೋಡಿಯ ಆರತಕ್ಷತೆ ದೆಹಲಿಯಲ್ಲಿ ಜರುಗಿದೆ. ಜನವರಿ 6ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಜೋಡಿ ಮದುವೆಯಾದ ನಂತರ ಮತ್ತೆ ಹಿಂದು ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದೆ. ಮಾರ್ಚ್ 16ರಂದು ಆರತಕ್ಷತೆಯಲ್ಲಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಇತರರು ಭಾಗವಹಿಸಿದ್ದರು. ಮಾರ್ಚ್ 19ರಂದು ಸ್ವರಾ ಮತ್ತು ಫಹಾದ್ ಅವರ ಮತ್ತೊಂದು ಆರತಕ್ಷತೆಯನ್ನು ವರನ ಕುಟುಂಬದವರು ಆಯೋಜಿಸಿದ್ದರು. ಇದರಲ್ಲಿ ಸ್ವರಾ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಸ್ವರಾ ಧರಿಸಿದ್ದ ಲೆಹಂಗಾವನ್ನು ಪಾಕಿಸ್ತಾನದ ಪ್ರಸಿದ್ಧ ಡಿಸೈನರ್ ಒಬ್ಬರು ಡಿಸೈನ್ ಮಾಡಿದ ಲೆಹೆಂಗಾವಾಗಿದೆ.
ವರನ ಕುಟುಂಬದಿಂದ ಆಯೋಜಿಸಿದ್ದ ಆರತಕ್ಷತೆಯಲ್ಲಿ ಲೆಹೆಂಗಾ ಮೂಲಕ ಸ್ವರಾ ಅವರು ಗಮನ ಸೆಳೆದರು. ಹೆವಿ ಎಂಬ್ರಾಯಿಡರಿ ವರ್ಕ್ ಇರುವ ಲೆಹಂಗಾ ಧರಿಸಿದ್ದರು. ಮೂಗಿಗೆ ದೊಡ್ಡ ರಿಂಗ್ ಧರಿಸಿದ್ದರು. ಇನ್ನು ಸ್ವರಾ ಪತಿ ಫಹಾದ್ ಬಿಳಿ ಮತ್ತು ಗೋಲ್ಡನ್ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದರು.
ಸಮಾಜವಾದಿ ಪಕ್ಷದ ನಾಯಕ ಸುಹೈಬ್ ಅನ್ಸಾರಿ ಅವರು ಟ್ವಿಟರ್‌ನಲ್ಲಿ ಮದುವೆಯ ಆರತಕ್ಷತೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ʻʻಅನೇಕ ಅಭಿನಂದನೆಗಳು, ಫಹಾದ್ ಭಾಯ್ ಮತ್ತು ಸ್ವರಾ ಜಿ. ನಿಮಗೆ ಆಶೀರ್ವಾದ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಫೋಟೊಗಳಲ್ಲಿ, ಅತಿಥಿಗಳೊಂದಿಗೆ ಪೋಸ್ ನೀಡುತ್ತಿರುವಾಗ ಫಹಾದ್ ಮತ್ತು ಸ್ವರಾ ಫೋಟೊಗಳು ವೈರಲ್ ಆಗಿವೆ.
ಇದನ್ನೂ ಓದಿ: Swara Bhasker: ಹಿಂದೂ ಸಂಪ್ರದಾಯದಂತೆ ಮದುವೆಯಾದ ಸ್ವರಾ-ಫಹಾದ್: ಇಲ್ಲಿವೆ ಫೋಟೊಗಳು
ತೆಲುಗು ಶೈಲಿಯ ಮಂಗಳಸೂತ್ರ
ತೆಲುಗು ಸಂಪ್ರದಾಯದ ಪ್ರಕಾರ ಮದುವೆಯಾದ ಸ್ವರಾ ಫೋಟೊಗಳು ಅಭಿಮಾನಿಗಳ ಗಮನ ಸೆಳೆದಿತ್ತು. ತೆಲುಗು ಸಂಸ್ಕೃತಿಯನ್ನು ಸಂಕೇತಿಸುವ ವಿಶೇಷ ಮಂಗಳಸೂತ್ರವನ್ನು ಧರಿಸಿದ್ದಾರೆ. ಸ್ವರಾ ತಾಯಿ ಇರಾ ಭಾಸ್ಕರ್ ಬಿಹಾರದವರು ಆದರೆ ಅವರ ತಂದೆ ಸಿ ಉದಯ್ ಭಾಸ್ಕರ್ ತೆಲುಗು ಮೂಲದವರು. ಹಾಗಾಗಿ ಸ್ವರಾ ತೆಲುಗು ಶೈಲಿಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಗಂಡನ ಮನೆಗೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತ ಸ್ವರಾ
ಅಮ್ಮನ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ವಿಡಿಯೊ ಶೇರ್ ಮಾಡಿ ಸ್ವರಾ ತಂದೆ ಕೂಡ ಭಾವುಕರಾಗಿದ್ದರು. ಸ್ವರಾ ಅಳುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.