ಬೆಂಗಳೂರು: ನಟ ರಣದೀಪ್ ಹೂಡಾ (Randeep Hooda) ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ (Swatantrya Veer Savarkar) ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಸಿನಿಮಾ ಅನೌನ್ಸ್ ಮಾಡಿದ್ದಾಗಿನಿಂದಲೂ ಸದಾ ವಿವಾದದಲ್ಲಿರುವ ಈ ಸಿನಿಮಾ ಇದೀಗ ನಿರ್ದೇಶಕ ಮತ್ತು ನಿರ್ಮಾಪಕನ ನಡುವೆ ಕಥೆಯ ಹಕ್ಕುಸ್ವಾಮ್ಯದ (Copyright) ಕುರಿತು ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ ವೀರ್ ಸಾವರ್ಕರ್ ಅವರ ಸ್ಪೂರ್ತಿದಾಯಕ ಜೀವನ ಮತ್ತು ಕೊಡುಗೆಗಳನ್ನು ಮುಂಚೂಣಿಗೆ ತರುವ ಗುರಿಯನ್ನು ಹೊಂದಿರುವ’ ಚಿತ್ರದಲ್ಲಿ ರಣದೀಪ್ ಅವರು ಸಾವರ್ಕರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಸಿನಿಮಾ ಘೋಷಿಸಿದ್ದಾಗಿನಿಂದಲೂ, ರಣದೀಪ್ ಚಿತ್ರದ ಸಹ-ನಿರ್ಮಾಪಕ, ನಾಯಕ ನಟ ಮತ್ತು ನಿರ್ದೇಶಕರಾಗಿದ್ದರು. ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ಕೂಡ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇತ್ತೀಚೆಗೆ, ರಣದೀಪ್ ಹೂಡಾ ಪ್ರೊಡಕ್ಷನ್ಸ್ ಚಿತ್ರದ ಹಕ್ಕುಸ್ವಾಮ್ಯಗಳ ಸಂಪೂರ್ಣ ಮಾಲೀಕತ್ವವನ್ನು ಹೊಂದುವ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು, ಇದು ರಣದೀಪ್ ಹೂಡಾ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಇದೀಗ ನಿರ್ದೇಶಕ ಮತ್ತು ನಿರ್ಮಾಪಕr ನಡುವೆ ಕಥೆಯ ಹಕ್ಕುಸ್ವಾಮ್ಯದ ಕುರಿತು ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Randeep Hooda: ಕೇವಲ 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿಕೊಂಡ ರಣದೀಪ್ ಹೂಡಾ; ಪ್ರಶ್ನೆ ಮಾಡೋರಿಗೆ ನಿರ್ಮಾಪಕ ಹೇಳಿದ್ದೇನು?
ಇದೀಗ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಕಡೆಯಿಂದ ರಣದೀಪ್ ಹೂಡಾ ಅವರು ಮಾಡಿದ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ. ನಾವೂ ಕೂಡ ಚಿತ್ರದಲ್ಲಿ ಮೊದಲಿನಿಂದಲೂ ಭಾಗವಾಗಿದ್ದರಿಂದ ಕಥೆಯ ಹಕ್ಕುಸ್ವಾಮ್ಯ ನಮಗೆ ಬರತಕ್ಕದ್ದು, ಇದರಲ್ಲಿ ರಣದೀಪ್ ಹೂಡಾ ಅವರ ಪಾಲು ಇಲ್ಲ ಎಂದು, ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ಪರ ವಕೀಲರು ಆರೋಪಿಸಿದ್ದಾರೆ. ಇದೀಗ ನಿರ್ಮಾಪಕರು ರಣದೀಪ್ ಹೂಡಾ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್, ಸೂಕ್ತ ಕಾನೂನು ಕ್ರಮ ಮೂಲಕ ಪ್ರಕ್ರಿಯೆಯಲ್ಲಿದ್ದಾರೆ.
ಚಿತ್ರಕಥೆ ಬರಹಗಾರ ಉತ್ಕರ್ಷ್ ನೈತಾನಿ ಜತೆ ರಣದೀಪ್ ಕೂಡ ಸಿನಿಮಾ ಕಥೆ ಬರೆದಿದ್ದಾರೆ. 2023ರ ಅಂತ್ಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ರಿಲೀಸ್ ಆಗಲಿದೆ.