Site icon Vistara News

Raj B Shetty | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದ ರಾಜ್ ಬಿ ಶೆಟ್ಟಿ ಲುಕ್ ರಿವೀಲ್‌!

Raj B Shetty

ಬೆಂಗಳೂರು: ʻಗರುಡ ಗಮನ ವೃಷಭ ವಾಹನʼ ಸಿನಿಮಾ ಬಳಿಕ ನಟ, ನಿರ್ದೇಶಕ ರಾಜ್​​ ಬಿ. ಶೆಟ್ಟಿ (Raj B Shetty) ʻʻಸ್ವಾತಿ ಮುತ್ತಿನ ಮಳೆ ಹನಿಯೇʼʼ (Swathi Mutthina Male haniye) ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಾಜ್‌ ಬಿ. ಶೆಟ್ಟಿ ಅವರ ಲುಕ್‌ ರಿವೀಲ್‌ ಆಗಿದೆ. ಈ ಸಿನಿಮಾವನ್ನು ಸ್ಯಾಂಡಲ್​ವುಡ್ ಕ್ವೀನ್, ನಟಿ ರಮ್ಯಾ ಅವರ ಆ್ಯಪಲ್​ ಬಾಕ್ಸ್ ಸ್ಟುಡಿಯೋಸ್ ಅಡಿ ನಿರ್ಮಾಣ ಮಾಡಲಾಗುತ್ತಿದೆ.

ಈಗಾಗಲೇ ಚಿತ್ರತಂಡ ಸಿನಿಮಾ ಶೂಟಿಂಗ್ ​ಅನ್ನು ಒಂದೇ ಶೆಡ್ಯೂಲ್​ನಲ್ಲಿ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್​​ನಲ್ಲಿ ಬ್ಯುಸಿಯಾಗಿದೆ. ಈ ನಡುವೆಯೇ ಸಿನಿಮಾ ಟೈಟಲ್ ಕುರಿತಂತೆ ವಿವಾದವೊಂದು ಸಖತ್ ಸದ್ದು ಮಾಡಿತ್ತು. ಟೈಟಲ್ ವಿರುದ್ಧ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ | Raj B. Shetty Birthday | ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿಗೆ ಜನುಮ ದಿನದ ಸಂಭ್ರಮ

ʻ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಶೀರ್ಷಿಕೆ ನನ್ನದು. ಈ ಶೀರ್ಷಿಕೆಯನ್ನು ಯಾರೂ ಬಳಸದಂತೆ ಕ್ರಮ ತಗೆದುಕೊಳ್ಳಬೇಕುʼ ಎಂದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ವಕೀಲರ ಮುಖೇನ ಪತ್ರವೊಂದನ್ನು ಬರೆದಿದ್ದರು. ಪೊಗರು ಚಿತ್ರದ ನಿರ್ಮಾಪಕ ಗಂಗಾಧರ್ ಅವರು, ʻʻನನ್ನ ಬಳಿ ಇದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಅನ್ನು ನಾನು ಕಾನೂನಾತ್ಮಕವಾಗಿಯೇ ರಮ್ಯಾ ಅವರಿಗೆ ಕೊಟ್ಟಿದ್ದೇನೆ. ಸಿನಿಮಾ ಶೂಟಿಂಗ್ ಆರಂಭ ಮುನ್ನವೇ ಅವರು ನನ್ನ ಬಳಿಯಿಂದ ಟೈಟಲ್ ಪಡೆದುಕೊಂಡಿದ್ದಾರೆʼʼ ಎಂದು ತಿಳಿಸಿದ್ದರು.

ಉಳಿದಂತೆ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಸಿರಿ ರವಿಕುಮಾರ್ ನಾಯಕಿಯಾಗಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ.

ಇದನ್ನೂ ಓದಿ | Raj B Shetty | ಮಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್‌ ಬಿ ಶೆಟ್ಟಿ: ನಾಯಕಿ ರಾಷ್ಟ್ರ ಪ್ರಶಸ್ತಿ ವಿಜೇತೆ!

Exit mobile version