Site icon Vistara News

Raj B Shetty: ರಾಜ್‌ ಬಿ ಶೆಟ್ಟಿ ಜತೆ ಕೈ ಜೋಡಿಸಿದ ಕತೆಗಾರ ಟಿ.ಕೆ. ದಯಾನಂದ್; ನಾಳೆ ಟೈಟಲ್‌, ರಿಲೀಸ್‌ ಡೇಟ್‌ ಘೋಷಣೆ!

T.K.Dayanand

ಬೆಂಗಳೂರು: ರಾಜ್ ಬಿ ಶೆಟ್ಟಿ (Raj B Shetty) ನಟ- ನಿರ್ದೇಶಕ, ಬರಹಗಾರನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಿಂದ ರಾಜ್ ಬಿ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ರಾಜ್‌ ಬಿ ಶೆಟ್ಟಿ ಜತೆ ಕನ್ನಡದ ಕತೆಗಾರ ಟಿ.ಕೆ. ದಯಾನಂದ್ ಕೈ ಜೋಡಿಸುತ್ತಿದ್ದಾರೆ. ರಾಜ್‌ ಬಿ ಶೆಟ್ಟಿ ಅವರ ಜತೆ ತನ್ನ ಮೊದಲ ಪ್ರಾಜೆಕ್ಟ್‌ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಟಿ.ಕೆ. ದಯಾನಂದ್ ಸೋಷಿಯಲ್‌ ಮೀಡಿಯಾದಲ್ಲಿ ʻʻರಾಜ್‌ ಬಿ ಶೆಟ್ಟಿ ಅವರ ಜತೆ ಕಥೆಗಾರನಾಗಿ ಮೊದಲ ಪ್ರಾಜೆಕ್ಟ್‌. ಅಪ್ಪಟ ತಳಸಮುದಾಯದ ಸಬ್‌ಜೆಕ್ಟ್‌. ಮಾಸ್‌ ಮೇಕಿಂಗ್‌ ಚಿತ್ರ. ಶೂಟಿಂಗ್‌ ಮುಕ್ತಾಯ. ನಾಳೆ ಟೈಟಲ್‌ ಮತ್ತು ಬಿಡುಗಡೆಯ ದಿನಾಂಕ ಘೋಷಣೆʼʼಎಂದು ಬರೆದುಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ನೇತೃತ್ವದ ಲೈಟರ್ಸ್ ಬುದ್ಧ ಫಿಲ್ಮ್‌ ಅಡಿಯಲ್ಲಿ ವಚನ್ ಶೆಟ್ಟಿ, ರವಿ ರೈ ನಿರ್ಮಾಣ ಮಾಡಿದ್ದರು. ಇವರ ಜತೆ ಅಗಸ್ತ್ಯ ಫಿಲ್ಮ್‌ ಜಂಟಿಯಾಗಿ ಬರುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ. ಜೂನ್ 13ರಂದು ಬೆಳಗ್ಗೆ 11.07ಕ್ಕೆ ಚಿತ್ರದ ಬಗ್ಗೆ ಶುಭ ಸುದ್ದಿ ಸಿಗಲಿದೆ ಎಂದು ರಾಜ್ ಬಿ ಶೆಟ್ಟಿ ಈಗಾಗಲೇ ತಿಳಿಸಿದ್ದಾರೆ. ಈ ಹೊಸ ಪ್ರಾಜೆಕ್ಟ್‌ನಲ್ಲಿ ಕತೆಗಾರ ಟಿ.ಕೆ. ದಯಾನಂದ್ ಅವರು ರಾಜ್ ಬಿ ಶೆಟ್ಟಿ ಜತೆ ಕೈ ಜೋಡಿಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಯಾವುದು.? ಪಾತ್ರಗಳು ಏನು?ಈ ಎಲ್ಲ ಹೆಚ್ಚಿನ ಮಾಹಿತಿ ಜೂನ್‌ 13ಕ್ಕೆ ಸಿಗಲಿದೆ. ಈ ಹೊಸ ಪ್ರಾಜೆಕ್ಟ್‌ನಲ್ಲಿ ಭಿನ್ನ ಪಾತ್ರ, ಕಥೆಯ ಮೂಲಕ ರಾಜ್‌ ಬಿ ಶೆಟ್ಟಿ ಬರಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Raj B. Shetty Birthday | ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿಗೆ ಜನುಮ ದಿನದ ಸಂಭ್ರಮ

ರಾಜ್ ಬಿ ಶೆಟ್ಟಿ ಅವರ ಕೈಯಲ್ಲಿ ಟೋಬಿ, ನಟಿ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’, ರಾಮನ ಅವತಾರ, ಸೇರಿದಂತೆ ಹಲವು ಚಿತ್ರಗಳು ಕೈಯಲ್ಲಿದೆ.ಚಿತ್ರದ ಬಗೆಗಿನ ಹೆಚ್ಚಿನ ಅಪ್‌ಡೇಟ್‌ಗೆ ಜೂನ್ 13ರಂದು ಉತ್ತರ ಸಿಗಲಿದೆ.

Exit mobile version