Site icon Vistara News

Taapsee Pannu: ʻಫಿರ್ ಆಯಿ ಹಸೀನ್ ದಿಲ್‌ರುಬಾʼ ಫಸ್ಟ್‌ ಲುಕ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು

Taapsee Pannu hot Look in Phir Aayi Haseen Dilruba

ಹಸೀನ್ ದಿಲ್‌ರುಬಾ (Haseen Dilruba’s) ತಂಡದ ಮುಂಬರುವ ʼಫಿರ್ ಆಯಿ ಹಸೀನ್ ದಿಲ್‌ರುಬಾʼ (Phir Aayi Haseen Dilruba) ಪೋಸ್ಟರ್‌ ಅನಾವರಣಗೊಂಡಿದೆ. ಚಿತ್ರದಲ್ಲಿ ತಾಪ್ಸಿ ಪನ್ನು (Taapsee Pannu) ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ನೀಲಿ ಸೀರೆಯನ್ನು ಧರಿಸಿರುವ ತಾಪ್ಸಿ ಬ್ಯಾಕ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ ನಟಿಗೆ ಮೆಚ್ಚುಗೆಯ ಕಮೆಂಟ್‌ಗಳು ಬರುತ್ತಿವೆ. “ನೀಲಿಯ ಹೊಸ ಗುಲಾಬಿ,” ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನೊಬ್ಬರು ʻಪೋಸ್ಟರ್‌ ತುಂಬ ಸುಂದರವಾಗಿದೆʼ ಎಂದು ಬರೆದಿದ್ದಾರೆ.

ಈ ಹಿಂದೆ, ಸಸ್ಪೆನ್ಸ್ ಚಿತ್ರದ ಎರಡನೇ ಕಂತನ್ನು ಸಹನಟ ವಿಕ್ರಾಂತ್ ಮಾಸ್ಸೆ ಇತ್ತೀಚೆಗೆ ದೃಢಪಡಿಸಿದರು. ನಂತರ, ತಾಪ್ಸಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ತಾಪ್ಸಿ ತಾಜ್ ಮಹಲ್ ಕಡೆಗೆ ಮುಖ ಮಾಡಿದ್ದಾರೆ. ಮೇಲ್ನೋಟಕ್ಕೆ ಆಗ್ರಾದಲ್ಲಿ ಕಥೆ ನಡೆದಂತೆ ಇದೆ ಎನ್ನಲಾಗಿದೆ. ಈ ಚಿತ್ರದಲ್ಲಿ ತಾಪ್ಸಿ ಜತೆಗೆ ವಿಕ್ರಾಂತ್ ಮಾಸ್ಸೆ ಮತ್ತು ಸನ್ನಿ ಕೌಶಲ್ ಕೂಡ ನಟಿಸಲಿದ್ದಾರೆ.

ಇದನ್ನೂ ಓದಿ: ಮಿಥಾಲಿ ರಾಜ್ ಅವರನ್ನು ‘ಲೇಡಿ ಸಚಿನ್ʼ ಅಂತ ಯಾಕೆ ಹೇಳ್ಬೇಕು? ಅವರಿಗೆ ಐಡೆಂಟಿಟಿ ಇಲ್ವಾ?: ತಾಪ್ಸಿ ಪನ್ನು ಪ್ರಶ್ನೆ

ಹಸೀನ್ ದಿಲ್‌ರುಬಾ ದೊಡ್ಡ ಹಿಟ್ ಆಗಿತ್ತು. ಇದೀಗ ಅಭಿಮಾನಿಗಳು ಫಿರ್ ಆಯಿ ಹಸೀನ್ ದಿಲ್‌ರುಬಾದ ಸಿನಿಮಾದಿಂದ ಅದನ್ನೇ ಆಶಿಸುತ್ತಿದ್ದಾರೆ. ಕಲರ್ ಯೆಲ್ಲೋ ಪ್ರೊಡಕ್ಷನ್ಸ್, ತಾಪ್ಸಿ ಪನ್ನು ಸಹ-ನಿರ್ಮಾಪಕರಾಗಿದ್ದಾರೆ.

Exit mobile version