ಮುಂಬೈ: ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧರಾಗಿರುವ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ನಟ ವಿಜಯ್ ವರ್ಮಾ ಅವರೊಂದಿಗೆ ಕೆಲ ತಿಂಗಳುಗಳಿಂದ ಪ್ರೀತಿಯಲ್ಲಿರುವ ವಿಚಾರ ಬಹಿರಂಗವಾಗಿದೆ. ಸದ್ಯ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿರುವ ಈ ಜೋಡಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಲಸ್ಟ್ ಸ್ಟೋರಿಸ್ 2 ಸಿನಿಮಾದಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಸಲಾಗಿದ್ದ ಸಂದರ್ಶನವೊಂದರಲ್ಲಿ ತಮನ್ನಾ ಅವರು ವಿಜಯ್ ಬಳಿ ಮಾಜಿ ಪ್ರೇಮಿಯೊಂದಿಗೆ ನಡೆಸಿದ ಸೆಕ್ಸ್ ಕುರಿತು ಪ್ರಶ್ನೆಯನ್ನು ಕೇಳಿದ್ದಾರೆ.
ತಮನ್ನಾ ಅವರು ವಿಜಯ್ ಬಳಿ, “ಮಾಜಿ ಪ್ರೇಮಿ ಜತೆ ನಿಮ್ಮ ಸೆಕ್ಸ್, ಹೌದು ಅಥವಾ ಇಲ್ಲ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಚಾಣಾಕ್ಷತನದಿಂದ ಉತ್ತರಿಸುವ ವಿಜಯ್, “ಅವರಿಗೆ ಏನು ಬೇಕೋ ಅದು” ಎನ್ನುತ್ತಾರೆ. ನಂತರ ಅದನ್ನು ವಿವರಿಸುವ ರೀತಿಯಲ್ಲಿ, “ಯಾರನ್ನೂ ಜಡ್ಜ್ ಮಾಡುವುದಕ್ಕೆ ನಾವು ಯಾರೂ ಅಲ್ಲ. ಒಂದು ವೇಳೆ ಇಬ್ಬರೂ ಸಿಂಗಲ್ ಆಗಿದ್ದರೆ ಅವರನ್ನು ಕೇಳುವವರು ಯಾರು? ಅವರು ಏನು ಬೇಕಾದರೂ ಮಾಡಬಹುದು. ಅದರ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ” ಎಂದು ವಾದಿಸಿದ್ದಾರೆ.
ಇದನ್ನೂ ಓದಿ: Murder Case : ತೋಟದ ಮನೆಯಲ್ಲಿ ಪತ್ನಿಯ ಕೊಂದ; ಅಣ್ಣ-ತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯ
ಇದೇ ವೇಳೆ ವಿಜಯ್ ಅವರು ಚಿಕ್ಕ ವಯಸ್ಸಿನಲ್ಲಿ ರಾಜಾ ಹಿಂದೂಸ್ಥಾನಿ ಸಿನಿಮಾವನ್ನು ಕುಟುಂಬದೊಂದಿಗೆ ಚಿತ್ರಮಂದಿರದಲ್ಲಿ ನೋಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ. “ಸಿನಿಮಾ ನೋಡುವುದಕ್ಕೆಂದು ನಾನು ನನ್ನ ಕುಟುಂಬ ಮತ್ತು ನನ್ನ ಚಿಕ್ಕಪ್ಪನ ಕುಟುಂಬ ಹೋಗಿದ್ದೆವು. 20 ಜನ ಒಂದೇ ಸಾಲಿನಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದೆವು. ಆಗ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಕರೀಶ್ಮಾ ಕಪೂರ್ ಮುತ್ತು ಕೊಟ್ಟುಕೊಳ್ಳುವ ದೃಶ್ಯ ಬಂತು. ಆ ದೃಶ್ಯವನ್ನು ಒಂದು ಗಂಟೆ ನೋಡಿದಂತಹ ಅನುಭವವಾಯಿತು. ನಮ್ಮ ಇಡೀ ಕುಟುಂಬಕ್ಕೆ ಆ ಸಮಯದಲ್ಲಿ ಏನು ಮಾಡಬೇಕೆಂದು ತೋಚಿರಲಿಲ್ಲ” ಎಂದು ಹೇಳಿದ್ದಾರೆ.
ಸುಜೋಯ್ ಘೋಷ್ ಅವರು ನಿರ್ದೇಶನ ಮಾಡಿರುವ ಲಸ್ಟ್ ಸ್ಟೋರಿಸ್ 2 ಸಿನಿಮಾದ ಒಂದು ಭಾಗದಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಮೊದಲೇ ತಮನ್ನಾ ಅವರು ತಮ್ಮ ಮತ್ತು ವಿಜಯ್ ನಡುವೆ ಪ್ರೀತಿ ಇರುವುದಾಗಿ ಬಹಿರಂಗಪಡಿಸಿದ್ದರು.