ಹೈದರಾಬಾದ್: ತೆರೆ ಮೇಲೆ ಮುತ್ತು ಕೊಡುವುದು, ರೊಮ್ಯಾನ್ಸ್ ಮಾಡುವುದೆಲ್ಲವೂ ನಟ, ನಟಿಯರಿಗೆ ಸರ್ವೇ ಸಾಮಾನ್ಯ. ಆದರೆ ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗಲ್ಲ. ಸಿನಿಮಾ ಕ್ಷೇತ್ರಕ್ಕೆ ಬಂದು 18 ವರ್ಷಗಳಾದರೂ ಅವರು ಇದುವರೆಗೆ ಯಾವುದೇ ಸಿನಿಮಾದಲ್ಲಿ ಮುತ್ತು ಕೊಡುವ ಸೀನ್‌ಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಇದೀಗ ಈ ನಟಿ ತಮ್ಮ ನಿಯಮವನ್ನು ಮುರಿದು ಭರ್ಜರಿಯಾಗಿ ಕಿಸ್ ಕೊಟ್ಟಿದ್ದಾರೆ.
ಹೌದು. ತಮನ್ನಾ ಸದ್ಯ ಎರಡು ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಜೀ ಕರ್ದಾ ಸೀರಿಸ್ ಅಮೇಜಾನ್‌ನಲ್ಲಿ ಬಿಡುಗಡೆಯಾಗಿದೆ. ಲಸ್ಟ್ ಸ್ಟೋರಿಸ್ 2 ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಬೇಕಿದೆ. ಈ ಲಸ್ಟ್ ಸ್ಟೋರಿಸ್ ಸೀರಿಸ್‌ನಲ್ಲಿ ತಮನ್ನಾ ಮುತ್ತು ಕೊಡುವ ಸೀನ್‌ನಲ್ಲಿ ನಟಿಸಿದ್ದಾರಂತೆ. ತಾವು ಹೀಗೆ ಇದ್ದಕ್ಕಿದ್ದಂತೆ ನಿಯಮ ಮುರಿದಿರುವುದಕ್ಕೆ ಸೂಕ್ತ ಕಾರಣವನ್ನೂ ನಟಿ ಕೊಟ್ಟಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಕೆಣಕಬೇಡಿ ಎಂದ ತಮಿಳುನಾಡು ಸಿಎಂ ಸ್ಟಾಲಿನ್; ನಮ್ಮನ್ನು ಮುಟ್ಟಬೇಡಿ ಎಂದ ಬಿಜೆಪಿ ಚೀಫ್ ಅಣ್ಣಾಮಲೈ
“ನಮ್ಮ ದೇಶ ವಿಶಾಲವಾಗಿದೆ. ಇಲ್ಲಿ ಹಲವು ವಿಭಾಗಗಳಲ್ಲಿ ವಿಕಸನಗಳು ಸಂಭವಿಸಿವೆ. ಇನ್ನೂ ಅಭಿವೃದ್ಧಿಯಾಗಬೇಕಿರುವುದು, ವಿಕಸನ ಕಾಣಬೇಕಿರುವುದು ಸಾಕಷ್ಟಿದೆ. ನಾನು ಮಾತ್ರ ಬದಲಾವಣೆಗೆ ಒಗ್ಗಿಕೊಳ್ಳದೆ ಹಾಗೆಯೇ ಇರುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಈಗ ನಿಯಮ ಮುರಿದಿದ್ದೇನೆ. 18 ವರ್ಷದ ನಿಯಮ ಮುರಿದು ಪ್ರಸಿದ್ಧಳಾಗಬೇಕು ಎನ್ನುವ ಇರಾದೆ ಇದರಲ್ಲಿಲ್ಲ. ಇದೊಂದು ಕಥೆಯ ಅವಶ್ಯಕತೆಗಷ್ಟೇ” ಎಂದು ತಮನ್ನಾ ಹೇಳಿಕೊಂಡಿದ್ದಾರೆ.
Vayinchandamma 🥁#TamannaahBhatia pic.twitter.com/Tyd2Pg2ZjI
— Telugu CineMazaa (@telugucinemaza) June 14, 2023
ತಮನ್ನಾ, ಅವರ ಪ್ರಿಯತಮ ವಿಜಯ್ ವರ್ಮಾ, ನೀನಾ ಗುಪ್ತಾ, ಅಮೃತ್ ಸುಭಾಷ್ ಸೇರಿ ಅನೇಕ ಕಲಾವಿದರು ನಟಿಸಿರುವ ಲಸ್ಟ್ ಸ್ಟೋರಿಸ್ 2 ಇದೇ ಜೂನ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದಲ್ಲದೆ ತಮನ್ನಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿಯೂ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.