ಬೆಂಗಳೂರು: ತಮನ್ನಾ ಭಾಟಿಯಾ (Tamanna Bhatia) ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಗುವಾಹಟಿಯ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪ್ರಾರ್ಥನೆ ಸಲ್ಲಿಸಿರುವ ಫೋಟೊವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಚೂಡಿದಾರ್ ಉಟ್ಟು, ಕೊರಳಿಗೆ ಹಾರ, ಹಣೆಗೆ ಕುಂಕುಮ ಇಟ್ಟುಕೊಂಡಿರುವ ತಮನ್ನಾ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.‘ನನ್ನ ಪ್ರೀತಿಪಾತ್ರರರೊಟ್ಟಿಗೆ ಕೆಲವು ಭಕ್ತಿಪೂರ್ಣ ಕ್ಷಣಗಳನ್ನು ಕಳೆದೆ’ ಎಂದು ಕ್ಯಾಪ್ಷನ್ ನೀಡಿ ದೇವಾಲಯದ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಈ ವರ್ಷ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗುತ್ತಿದೆ. ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma ) ಜೋಡಿ 2023ರ ಆರಂಭದಲ್ಲಿ ತಮ್ಮ ರಿಲೇಶನ್‌ಶಿಪ್ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿತ್ತು. ಇದಾದ ಬಳಿಕ ಜೋಡಿಗೆ ಫ್ಯಾನ್ಸ್ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಇತ್ತೀಚಿನ ವರದಿಗಳ ಪ್ರಕಾರ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಎನ್ನಲಾಗಿದೆ. ಈಗಾಗಲೇ ಮದುವೆ ಬಗ್ಗೆ ಪೋಷಕರು ತಮನ್ನಾಗೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ‘ಲಸ್ಟ್ ಸ್ಟೋರೀಸ್ 2’ ಬಿಡುಗಡೆಯ ಸಮಯದಲ್ಲಿ ಸಾರ್ವಜನಿಕವಾಗಿ ರಿಲೇಶನ್‌ಶಿಪ್ ಬಗ್ಗೆ ಅಧಿಕೃತಗೊಳಿಸಿದ್ದರು. ತಮನ್ನಾ ಮದುವೆಯಾಗುವಂತೆ ಪೋಷಕರಿಂದ ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ‘ಭೋಲಾ ಶಂಕರ್’ ಮತ್ತು ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ‘ಕಾವಲಾ’ ಹಾಡಿನ ನಂತರ ನಟಿ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿಲ್ಲ.
ಇದನ್ನೂ ಓದಿ: Tamanna Bhatia : ಮಾಜಿ ಪ್ರೇಮಿ ಜತೆ ಸೆಕ್ಸ್ ಮಾಡಿದ್ದು ಹೌದಾ ಅಲ್ಲವಾ? ವಿಜಯ್ ವರ್ಮಾಗೆ ತಮನ್ನಾ ಪ್ರಶ್ನೆ!
ಸ್ತ್ರೀ-2 ಸಿನಿಮಾದಲ್ಲಿ ತಮನ್ನಾ ?
ಸ್ತ್ರೀ-2 ಸಿನಿಮಾದಲ್ಲಿ ತಮನ್ನಾ ವಿಶೇಷ ಪಾತ್ರದೊಂದಿಗೆ ಕಮ್ ಬ್ಯಾಕ್ ಆಗಲಿದ್ದಾರೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಚಂದೇರಿಯಲ್ಲಿ ಸ್ತ್ರೀ 2 ಸಿನಿಮಾ ಶೂಟಿಂಗ್ ನಡೆದಿತ್ತು. ಇದೀಗ ತಮನ್ನಾ ಅವರ ಹಾಡಿನ ಚಿತ್ರೀಕರಣ ಚಿತ್ರತಂಡ ಮುಗಿಸಿದೆ ಎಂದು ವರದಿಯಾಗಿದೆ.ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ. ಸ್ತ್ರೀ 1 ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಸ್ತ್ರೀ 1ಚಿತ್ರ ಬಿಡುಗಡೆಯಾದ ಹೊಸ್ತಿಲಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದು, ಭಾರಿ ಕಲೆಕ್ಷನ್ ಮಾಡಿತ್ತು. ಅದೇ ರೀತಿ ಈಗ ಸ್ತ್ರೀ 2 ಸಿನಿಮಾ ಪಾತ್ರವರ್ಗ ಬಹಳ ಆಸಕ್ತಿದಾಯಕವಾಗಿವೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರು ಸ್ತ್ರೀ 2ರಲ್ಲಿಯ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರ ಈ ಹಾಡಿನ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂದು ಮೂಲ ತಿಳಿಸಿದೆ.