Site icon Vistara News

Tamannaah Bhatia: ಸ್ತ್ರೀ-2 ಸಿನಿಮಾದ ಸ್ಪೆಷಲ್‌ ರೋಲ್‌ನಲ್ಲಿ ತಮನ್ನಾ!

Tamannaah Bhatia to Make Special Appearance in Stree 2

ಬೆಂಗಳೂರು: ರಜನಿಕಾಂತ್ ಅಭಿನಯದ ʻಜೈಲರ್‌ʼ ಸಿನಿಮಾದ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ತಮನ್ನಾ (Tamannaah Bhatia) ಮತ್ತೆ ಸ್ಟೆಪ್ಸ್‌ ಹಾಕಲು ರೆಡಿಯಾಗಿದ್ದಾರೆ. ಸ್ತ್ರೀ-2 ಸಿನಿಮಾದಲ್ಲಿ ತಮನ್ನಾ ವಿಶೇಷ ಪಾತ್ರದೊಂದಿಗೆ ಕಮ್‌ ಬ್ಯಾಕ್‌ ಆಗಲಿದ್ದಾರೆ ಎಂದು ವರದಿಯಾಗಿದೆ. ಈ ವರ್ಷ ಜುಲೈನಲ್ಲಿ ಸಿನಿಮಾ ಸೆಟ್ಟೇರಿದ್ದು, ಮಧ್ಯಪ್ರದೇಶದ ಚಂದೇರಿಯಲ್ಲಿ ಸ್ತ್ರೀ 2 ಸಿನಿಮಾ ಶೂಟಿಂಗ್‌ ನಡೆದಿತ್ತು. ಇದೀಗ ತಮನ್ನಾ ಅವರ ಹಾಡಿನ ಚಿತ್ರೀಕರಣ ಚಿತ್ರತಂಡ ಮುಗಿಸಿದೆ ಎಂದು ವರದಿಯಾಗಿದೆ.

ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ. ಸ್ತ್ರೀ 1 ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಸ್ತ್ರೀ 1ಚಿತ್ರ ಬಿಡುಗಡೆಯಾದ ಹೊಸ್ತಿಲಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದು, ಭಾರಿ ಕಲೆಕ್ಷನ್‌ ಮಾಡಿತ್ತು. ಅದೇ ರೀತಿ ಈಗ ಸ್ತ್ರೀ 2 ಸಿನಿಮಾ ಪಾತ್ರವರ್ಗ ಬಹಳ ಆಸಕ್ತಿದಾಯಕವಾಗಿವೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರು ಸ್ತ್ರೀ 2ರಲ್ಲಿಯ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ತಮನ್ನಾ ಭಾಟಿಯಾ ಅವರ ಈ ಹಾಡಿನ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂದು ಮೂಲ ತಿಳಿಸಿದೆ.

ತಮನ್ನಾ ಈಗಾಗಲೇ ಹಲವಾರು ಹಾಡುಗಳಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಇತ್ತೀಚಿಗೆ ರಜನಿಕಾಂತ್ ಅವರ ಜೈಲರ್‌ ಕಾವಾಲಾ ಸಾಂಗ್‌ ಸಖತ್‌ ಹಿಟ್‌ ಆಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಜೈಲರ್‌ ಕಾವಾಲಾ ಹುಕ್‌ ಸ್ಟೆಪ್‌ ವೈರಲ್ ಆಗಿದ್ದು, ಫ್ಯಾನ್ಸ್‌ ಸೇರಿದಂತೆ ಸಿನಿರಸಿಕರು ರೀಲ್ಸ್‌ ಹಂಚಿಕೊಂಡಿದ್ದರು.

ಇದನ್ನೂ ಓದಿ: Tamannaah Bhatia: ʻನೈಸ್ ಜೋಡಿʼ ಎನ್ನುತ್ತಿದ್ದಂತೆ ನಾಚಿಕೊಂಡ ತಮನ್ನಾ-ವಿಜಯ್ ವರ್ಮಾ!

ಸ್ತ್ರೀ 2 ಅನ್ನು ಅಮರ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸುತ್ತಿದೆ. ಸ್ತ್ರೀ 22024ರ ಆಗಸ್ಟ್ 30 ರಂದು ಥಿಯೇಟರ್‌ಗೆ ಬರಲು ಸಜ್ಜಾಗಿದೆ.

ಇನ್ನು ತಮನ್ನಾ ವೈಯಕ್ತಿಕ ವಿಚಾರಕ್ಕೆ ಬಂದರೆ, ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma ) ಜೋಡಿ ಈ ವರ್ಷದ ಆರಂಭದಲ್ಲಿ ತಮ್ಮ ರಿಲೇಶನ್‌ಶಿಪ್‌ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿತ್ತು. ಇದಾದ ಬಳಿಕ ಜೋಡಿಗೆ ಫ್ಯಾನ್ಸ್‌ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಇತ್ತೀಚಿನ ವರದಿಗಳ ಪ್ರಕಾರ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಎನ್ನಲಾಗಿದೆ. ಈಗಾಗಲೇ ಮದುವೆ ಬಗ್ಗೆ ಪೋಷಕರು ತಮನ್ನಾಗೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

ವಿಜಯ್‌ ತಮನ್ನಾ ಅವರನ್ನು ಪ್ರೀತಿಯಿಂದ ಟೊಮ್ಯಾಟೋ ಎಂದು ಕರೆಯುತ್ತಾರೆ. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೊ ಮತ್ತು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

Exit mobile version