Site icon Vistara News

Tamannaah : `ಸಾಕ್ಷಾತ್ಕಾರ’ದ ನಟಿ ಜಮುನಾ ಬಯೋಪಿಕ್‌ನಲ್ಲಿ ಮಿಲ್ಕಿ ಬ್ಯೂಟಿ?

Tamannaah biopic of Jamuna actress

ಬೆಂಗಳೂರು: ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್‌ಗಳ ಜೊತೆ ಜೋಡಿಯಾಗಿ ನಟಿಸಿದ ನಟಿ ಜಮುನಾ ಅಗಲಿದ ಬೆನ್ನಲ್ಲೇ ಅವರ ಬಯೋಪಿಕ್‌ ಕುರಿತು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಮುನಾ ಅವರ ಪಾತ್ರವನ್ನ ಮಿಲ್ಕಿ ಬ್ಯೂಟಿ ತಮನ್ನಾ (Tamannaah) ನಟಿಸುವ ಕುರಿತು ಚರ್ಚೆಯಾಗುತ್ತಿದೆ.

ಡಾ. ರಾಜ್‌ಕುಮಾರ್ ಅವರ ಜತೆ ʼಸಾಕ್ಷಾತ್ಕಾರʼ ಸಿನಿಮಾದಲ್ಲಿ ಜಮುನಾ ನಟಿಸಿದ್ದರು. ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಸಾಕ್ಷಾತ್ಕಾರ, ರತ್ನಗಿರಿ ರಹಸ್ಯ, ಭೂ ಕೈಲಾಸ, ಪೋಲಿಸ್ ಮತ್ತು ದಾದಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ದಕ್ಷಿಣ ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಸೇರಿದಂತೆ ಹಲವು ಹಿರಿಯ ಸ್ಟಾರ್‌ಗಳ ಜತೆ ನಟಿಸಿದ್ದರು. ಅವರಿಗೆ ʼಶ್ರೀಕೃಷ್ಣ ತುಲಾಭಾರಂ’ ಚಿತ್ರದ ಸತ್ಯಭಾಮೆ ಪಾತ್ರ ಅಪಾರ ಜನಪ್ರಿಯತೆ ತಂದು ಕೊಟ್ಟಿತ್ತು. ʼಪುಟ್ಟಿಲ್ಲು’ ನಟಿ ಜಮುನಾ ನಟಿಸಿದ ಚೊಚ್ಚಲ ಸಿನಿಮಾ. ಈಗ ಖ್ಯಾತ ನಟಿ ಜಮುನಾ ಸಿನಿಮಾ ತೆರೆಗೆ ಬರುವುದಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Priya Varrier | `ವಿಂಕ್ ಗರ್ಲ್ʼ ಖ್ಯಾತಿಯ ನಟಿ ಪ್ರಿಯಾ ವಾರಿಯರ್ ಫೋಟೊಶೂಟ್‌ ವೈರಲ್‌

ಜಮುನಾ ಅವರ ಪಾತ್ರಕ್ಕೆ ತಮನ್ನಾ ಭಾಟಿಯಾ (Tamanna Bhatia) ಅವರು ಸೆಲೆಕ್ಟ್ ಆಗಿದ್ದಾರಂತೆ. ನಟಿಯ ಬಯೋಪಿಕ್‌ನಲ್ಲಿ ತಮನ್ನಾ ನಟಿಸುವ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

 

Exit mobile version