Site icon Vistara News

Tamanna Bhatia | ಡೇಟಿಂಗ್‌ ಸುದ್ದಿ ಬೆನ್ನಲೇ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ?

Tamanna Bhatia

ಬೆಂಗಳೂರು : ಟಾಲಿವುಡ್‌ ನಟಿ ತಮನ್ನಾ ಭಾಟಿಯಾ (Tamanna Bhatia) ಅವರು ಗೋವಾದಲ್ಲಿ ನಟ ವಿಜಯ್ ವರ್ಮಾ ಅವರೊಂದಿಗೆ ಕಾಣಿಸಿಕೊಂಡಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಈಗ, ತಮನ್ನಾ ಅವರು ತಮ್ಮ ಮಲಯಾಳಂ ಚಿತ್ರ ʻಬಾಂದ್ರಾʼ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿಲಿದ್ದಾರೆ ಎಂದು ವರದಿಯಾಗಿದೆ.

ಚಿತ್ರದ ಚಿತ್ರೀಕರಣಕ್ಕಾಗಿ ಮುಂದಿನ ವಾರ ಕೇರಳಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಶೆಡ್ಯೂಲ್ ರಾಜಸ್ಥಾನದಲ್ಲಿ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಮಲಯಾಳಂ ನಿರ್ದೇಶಕ ಅರುಣ್ ಗೋಪಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ದಿಲೀಪ್ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ ಎಂದು ಹೇಳಲಾಗಿದೆ. ಉದಯ್ ಕೃಷ್ಣ ಅವರ ಚಿತ್ರಕಥೆಯೊಂದಿಗೆ, ಅಜಿತ್ ವಿನಾಯಕ ಫಿಲ್ಮ್ಸ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

2022ರಲ್ಲಿ ಅಕ್ಟೋಬರ್‌ನಲ್ಲಿ ತಮನ್ನಾ ಕೊಚ್ಚಿಯಲ್ಲಿ ನಿರ್ದೇಶಕ ಅರುಣ್ ಗೋಪಿ ಅವರೊಂದಿಗೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿದ್ದರು. ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ “ಮಲಯಾಳಂ ಚಿತ್ರರಂಗದಲ್ಲಿ ಹೊಸ ಆರಂಭʼʼ ಎಂದು ಬರೆದುಕೊಂಡಿದ್ದರು. ನಿರ್ದೇಶಕ ಅರುಣ್ ಗೋಪಿ ಅವರು ಪೋಸ್ಟ್ ಮಾಡಿದ ಫೋಟೊದಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Tamanna Bhatia | ತಮನ್ನಾ-ವಿಜಯ್ ವರ್ಮಾ ಡೇಟಿಂಗ್‌: ಮುದ್ದಾಟ ಸಖತ್ತಾಗಿತ್ತು ಅಂತ ಕಾಲೆಳೆದ ನೆಟ್ಟಿಗರು!

ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ನಟಿ ತಮನ್ನಾ (Tamanna Bhatia) ಹಾಗೂ ಬಾಲಿವುಡ್‌ ನಟ ವಿಜಯ್ ವರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಚುಂಬಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ʻಲವ್‌ ಸ್ಟೋರಿಸ್‌ 2ʼ ಶೂಟಿಂಗ್‌ ವೇಳೆ ತಮನ್ನಾ ಅವರು ವಿಜಯ್‌ ವರ್ಮಾ ಅವರನ್ನು ಭೇಟಿಯಾಗಿದ್ದರು. ಆಲಿಯಾ ಭಟ್‌ ʻಡಾರ್ಲಿಂಗ್ಸ್‌ʼ ಸಿನಿಮಾದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ | Tamanna Bhatia | ಹೊಸ ವಿನ್ಯಾಸದ ಲೆಹೆಂಗಾದಲ್ಲಿ ತಮನ್ನಾ ಮಿಂಚು

Exit mobile version