Site icon Vistara News

Kantara Movie | ಕಾಂತಾರ ಸಿನಿಮಾ ಹೊಗಳಿದ ತಮಿಳು ನಟ ಕಾರ್ತಿ: ರಿಷಬ್‌ ಮೇಲೆ ಕನ್ನಡಿಗರು ಗರಂ ಆಗಿದ್ಯಾಕೆ?

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಅಕ್ಟೋಬರ್‌ 14ರಂದು ಹಿಂದಿ ಹಾಗೂ ಅಕ್ಟೋಬರ್‌ 15ರಂದು ತೆಲುಗು ಮತ್ತು ತಮಿಳಿನ ಅವತರಣಿಕೆಗಳು ತೆರೆ ಕಂಡಿವೆ. ಕನ್ನಡದಲ್ಲಿ ಪ್ರಶಂಸೆಗೆ ಪಾತ್ರವಾದಂತೆ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ವೀಕ್ಷಿಸಿದ ತಮಿಳು ನಟ ಕಾರ್ತಿ ಅವರು ರಿಷಬ್‌ ಶೆಟ್ಟಿ ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಕಾಲತಾಣದಲ್ಲಿ ವೈರಲ್‌ ಆಗಿದ್ದು, ಕನ್ನಡಿಗರು ರಿಷಬ್‌ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.

ಕಾಂತಾರ ಸಿನಿಮಾ ವೀಕ್ಷಿಸಿದ ಬಳಿಕ ಕಾರ್ತಿ ʻʻಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಎಂತಹ ಒಳ್ಳೆಯ ಕಾನ್ಸೆಪ್ಟ್‌ʼʼ ಎಂದು ಹೊಗಳಿದ್ದಾರೆ. ಇದಕ್ಕೂ ಮುಂಚೆ ಕಾಂತಾರ ಟ್ರೈಲರ್‌ ರಿಲೀಸ್‌ ಆದಾಗ ಒಳ್ಳೆಯ ಮಾತುಗಳನ್ನಾಡಿದರು. ನಟ ಕಾರ್ತಿ ತಮಿಳಿನಲ್ಲಿ ಹೊಗಳುತ್ತಿದ್ದಂತೇ ರಿಷಬ್‌ ಶೆಟ್ಟಿ ʻʻಸಮಾಜದಲ್ಲಿ ಮೇಲು ಜಾತಿ ಮತ್ತು ಕೆಳಜಾತಿ ಇಲ್ಲದಂತೆ ಎಲ್ಲರೂ ಸಮಾನವಾಗಿರಬೇಕುʼʼ ಎಂಬುದನ್ನು ಸಂಪೂರ್ಣವಾಗಿ ತಮಿಳಿನಲ್ಲಿಯೇ ಹೇಳಿದರು.

ಇದನ್ನೂ ಓದಿ | Kantara Movie | ಕಾಂತಾರ ʻಮೈಂಡ್‌ ಬ್ಲೋಯಿಂಗ್‌ʼಎಂದ ನಟ ಧನುಷ್‌: ರಿಷಬ್‌ ಸ್ಫೂರ್ತಿ ಅಂದ್ರು ರಾಣಾ!

ವಿಡಿಯೊದಲ್ಲಿ ಕನ್ನಡ ಭಾಷೆಯನ್ನು ಎಲ್ಲೂ ಬಳಸದ ರಿಷಬ್‌ ಶೆಟ್ಟಿ ವಿರುದ್ಧ ಕನ್ನಡಿಗರು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ಕಿಡಿಕಾರಿದ್ದಾರೆ. ಈ ಹಿಂದೆ ರಿಷಬ್‌ ಸಂದರ್ಶನವೊಂದರಲ್ಲಿ ನಾನು ಮಾತನಾಡುವುದು, ಯೋಚಿಸುವುದು ಕನ್ನಡದಲ್ಲಿಯೇ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ | Kantara Movie | ಎರಡನೇ ಬಾರಿ ಕಾಂತಾರ ವೀಕ್ಷಿಸಿದ ಪ್ರಭಾಸ್‌: ಸ್ಟಾರ್‌ ನಟರ ಮೆಚ್ಚುಗೆ!

Exit mobile version