Site icon Vistara News

Tanisha kuppanda: ಬೋಲ್ಡ್ ಆಗಿ ನಟಿಸಿರುವ ಮಾತ್ರಕ್ಕೆ ಆ ಪ್ರಶ್ನೆ ಕೇಳಿದ್ದು ಸರಿ ಅಲ್ಲ, ನಟಿ ತನಿಷಾ

Tanisha kuppanda Press Meet

ಬೆಂಗಳೂರು: ಏಪ್ರಿಲ್ 7 ರಂದು ದೇಶಾದ್ಯಂತ ʻಪೆಂಟಗನ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಪೆಂಟಗನ್’ ಸಿನಿಮಾದಲ್ಲಿ (Pentagon Movie) ಅಭಿನಯಿಸಿರುವ ತನಿಷಾ ಕುಪ್ಪಂಡ (Tanisha kuppanda) ಅವರಿಗೆ ಯೂಟ್ಯೂಬರ್‌ ಸಂದರ್ಶನ ವೇಳೆ ನೀವು ನ್ಯೂಡ್ ಫಿಲ್ಮ್‌ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟಿ ಮುಜುಗರದ ಸನ್ನಿವೇಶಕ್ಕೆ ಒಳಗಾಗಿದ್ದು, ಯೂಟ್ಯೂಬರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೀಗ ಈ ಬಗ್ಗೆ ನಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ತನಿಷಾ ಮಾತನಾಡಿ ʻʻಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿರುವ ಮಾತ್ರಕ್ಕೆ ಆ ಪ್ರಶ್ನೆ ಕೇಳಿದ್ದು ಸರಿ ಅಲ್ಲ. ಸುಶಾನ್ ಎಂಬ ವ್ಯಕ್ತಿ ನನಗೆ ಇಂಟರ್ವ್ಯೂ ಕೇಳಿದ್ದ. ಅವರು ಪ್ರಶ್ನೆ ಕೇಳುವ ರೀತಿ, ಮಾತನಾಡುವ ರೀತಿ ಇಷ್ಟ ಆಗಿರಲಿಲ್ಲ. ಹಲವು ಧಾರಾವಾಹಿಗಳು ಮಾಡಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಈ ರೀತಿ ಅನುಭವ ಮೊದಲ ಬಾರಿಗೆ ನನಗೆ ಆಗಿದೆ. ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಈ ರೀತಿ ಪ್ರಶ್ನೆಗಳು ಯಾಕೆ..? ಬ್ಯಾಕ್ ಲೆಸ್ ಬೋಲ್ಡ್ ಸೀನ್ ಮಾಡುವ ಮುನ್ನ ಏನು ತಯಾರಿ ಮಾಡ್ಕೋತ್ತೀರಾ ಎಂದು ಒಬ್ಬರು ಕೇಳಿದದು ಅದಕ್ಕೂ ಉತ್ತರ ಕೊಟ್ಟಿದೆ. ಪ್ರಶ್ನೆ ಕೇಳುವ ಹಾವ ಭಾವ ಸರಿ ಇರಬೇಕು. ಈತನ ಉದ್ದೇಶ ಟ್ರೆಂಡಿಂಗ್‌ನಲ್ಲಿ ಇರುವುದು. ಪಬ್ಲಿಸಿಟಿ ಗಿಮಿಕ್ ಅಲ್ಲಾ ಇದು. ನಮ್ಮ ತಾಯಿ ತುಂಬಾ ಸೆನ್ಸಿಟಿವ್. ಕಳೆದ ಬಾರಿ 4 ದಿನಗಳ ಕಾಲ ಕೋಮಾದಲ್ಲಿ ಇದ್ದರು ನಮ್ಮ ತಾಯಿ. ಈ ವಿಷಯ ಕೇಳಿ ಅವರು ಬೇಜಾರಾಗಿದ್ದಾರೆ. ದುಡ್ಡು ಮಾಡುವ ಅಗತ್ಯ ನನಗಿಲ್ಲʼʼ ಎಂದು ಭಾವುಕರಾಗಿದ್ದಾರೆ ತನಿಷಾ.

ಇದನ್ನೂ ಓದಿ: Pentagon Movie: ನ್ಯೂಡ್ ಫಿಲ್ಮ್‌ ಮಾಡುತ್ತೀರಾ ಎಂಬ ಪ್ರಶ್ನೆಗೆ ಯೂಟ್ಯೂಬರ್‌ ವಿರುದ್ಧ ನಟಿ ಗರಂ, ತರಾಟೆಗೆ ತೆಗೆದುಕೊಂಡ ಚಿತ್ರತಂಡ

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಈ ಸಿನಿಮಾದ ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ ತನಿಷಾ. ಈ ವಿಡಿಯೊ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ʻಪೆಂಟಗನ್’ ಸಿನಿಮಾದಲ್ಲಿ ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜೀ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇದೆ.

Exit mobile version