Tanya Hope: ನನ್ನ ತುಟಿ ಮೇಲೆ ಕಣ್ಣು ಯಾಕೆ ನಿಮಗೆ? ಕಮೆಂಟ್‌ಗಳಿಗೆ ನಟಿಯ ಉತ್ತರವೇನು? Yashaswi Devadiga 1 ವರ್ಷ ago ಕಿಕ್ (Kick) ಸಿನಿಮಾದಲ್ಲಿ ತಾನ್ಯಾ ಹೋಪ್ (Tanya Hope) ಮತ್ತು ರಾಗಿಣಿ ದ್ವಿವೇದಿ (Ragini Dwivedi) ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ವೇಳೆ ತಾನ್ಯಾ ಹೋಪ್‌ಗೆ ಅವರ ತುಟಿಯ ಬಗ್ಗೆ ಪ್ರಶ್ನೆ ಎದುರಾಗಿದೆ. ನಟಿ ಬೇಸರದಿಂದಲೇ ಈ ಬಗ್ಗೆ ಉತ್ತರಿಸಿದ್ದಾರೆ. ನಟಿ ತಾನ್ಯಾ ಹೋಪ್ ಕನ್ನಡದ ನಟಿ. ಮೂಲತಃ ಬೆಂಗಳೂರಿನವರೇ. ಆದರೆ, ಸಿನಿಮಾ ವೃತ್ತಿ ಜೀವನ ಆರಂಭವಾಗಿದ್ದು ಮಾತ್ರ ಟಾಲಿವುಡ್ ಅಂಗಳದಿಂದ. 2016ರಲ್ಲಿʻ ಅಪ್ಪಟ್ಲೋ ಒಕ್ಕಡುನದೆವುಡಾʼ ಚಿತ್ರದ ಮೂಲಕ ತೆಲುಗು ಸಿನಿಮಾರಂಗದಲ್ಲಿ ಎಂಟ್ರಿ ಕೊಟ್ಟರು. ನಟಿಗೆ ಪ್ರತಿ ಬಾರಿ ತುಟಿಗೆ ಸರ್ಜರಿ ಮಾಡಿಸಿದ್ದಾರಾ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ʻʻನನ್ನ ತುಟಿಗೆ ನಾನು ಸರ್ಜರಿ ಮಾಡಿಸಿಲ್ಲ. ಎಲ್ಲರೂ ಯಾಕೆ ನಿಮ್ಮ ತುಟಿ ದಪ್ಪ ಇದೆ ಎಂದು ಕೇಳುತ್ತಾರೆ. ಚಿಕ್ಕ ವಯಸ್ಸಿನಿಂದಲೂ ನನ್ನ ತುಟಿ ಹೀಗೆಯೇ ಇದೆ. ನಿಜಕ್ಕೂ ನಾನು ಯಾವುದೇ ಸರ್ಜರಿ ಮಾಡಿಸಿಲ್ಲʼʼ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: Kichcha Sudeep : ಡೈರೆಕ್ಟರ್ ಹ್ಯಾಟ್ ಧರಿಸಿದ ಕಿಚ್ಚ ಸುದೀಪ್, ಯಾವುದಿದು ಸಿನಿಮಾ? 2019ರಲ್ಲಿ ಯಜಮಾನ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ತಾನ್ಯಾ ಹೋಪ್, ಅದಾದ ಬಳಿಕ ಉದ್ಘರ್ಷ, ಅಮರ್, ಖಾಕಿ ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೂ ಹತ್ತಿರವಾದರು. ಇದೀಗ ಕಿಕ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಪದೇ ಪದೇ ನಟಿಯ ತುಟಿಯ ಬಗ್ಗೆ ನೆಟ್ಟಿಗರು ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ನಟಿ ʻʻಎಲ್ಲರಿಗೂ ನನ್ನ ತುಟಿಯ ಮೇಲೆಯೇ ಕಣ್ಣು. ಭಾರತೀಯರ ತುಟಿಗಳು ಇರುವುದೇ ಹೀಗೆ. ನನ್ನ ತಾಯಿ ಮತ್ತು ಅಜ್ಜಿ ಕೂಡ ಈ ರೀತಿಯ ದೊಡ್ಡ ತುಟಿಗಳನೇ ಹೊಂದಿದ್ದಾರೆ. ಹಾಗಾಗಿ ಇದನ್ನು ದೊಡ್ಡ ವಿಚಾರ ಮಾಡಬೇಡಿ. ಪದೇಪದೆ ಇದೇ ವಿಚಾರವನ್ನು ಕೇಳಿ ತಾಳ್ಮೆ ಪರೀಕ್ಷೆ ಮಾಡಲೂ ಬೇಡಿ” ಎಂದು ತಾನ್ಯಾ ಹೇಳಿಕೊಂಡಿದ್ದಾರೆ. ತಾನ್ಯಾ ಬೆಂಗಳೂರಿನ ಖ್ಯಾತ ಉದ್ಯಮಿ ರವಿ ಪುರವಂಕರ ಅವರ ಮಗಳಾಗಿದ್ದಾರೆ. ಸಂತಾನಂ ನಾಯಕನಾಗಿ ನಟಿಸಿರುವ ಕಿಕ್ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ತಾನ್ಯಾ ನಟಿಸಿದ್ದಾರೆ.