ಬೆಂಗಳೂರು: ನಟ ತಾರಕ ರತ್ನ (Taraka Ratna) ಅವರು ಪಾದಯಾತ್ರೆ ವೇಳೆ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇದೀಗ ಅವರ ಆರೋಗ್ಯ ಕುರಿತು ಟಾಲಿವುಡ್ ಸ್ಟಾರ್ ಬಾಲಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ನಂದಮೂರಿ ಅವರನ್ನು ಸ್ಥಳಾಂತರ ಮಾಡಲಾಗಿದೆ. ತೆಲುಗು ದೇಶಂ ಪಕ್ಷದ ನಾಯಕ ನಾರಾ ಲೋಕೇಶ್ ಅವರ ‘ಯುವ ಗಲಂ’ (ಯುವ ಧ್ವನಿ) ಪಾದಯಾತ್ರೆ ವೇಳೆ ತೆಲುಗು ನಟ ತಾರಕ ರತ್ನ (Taraka Ratna) ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಆಯಾಸದಿಂದಾಗಿ ಪಾದಯಾತ್ರೆಯ ವೇಳೆ ರತ್ನ ಮೂರ್ಛೆ ಹೋದರು ಎಂದು ವರದಿಯಾಗಿದೆ. ಅವರು ಬಿದ್ದ ನಂತರ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಾಲಕೃಷ್ಣ ಅವರ ಆರೋಗ್ಯದ ಕುರಿತು ಬಾಲಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ. “ಚಿಕಿತ್ಸೆಗೆ ತಾರಕ ರತ್ನ ಸ್ಪಂದಿಸುತ್ತಿದ್ದಾರೆ. ವೈದ್ಯರು ಅವರಿಗೆ ಸಾಧ್ಯವಾದಷ್ಟು ಕಾಳಜಿ ವಹಿಸಿದ್ದಾರೆ, ಚಿಂತಿಸಬೇಕಾಗಿಲ್ಲ. ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ” ಎಂದು ಹೇಳಿದರು. ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಕೆಲ ಹೊತ್ತಲ್ಲಿ ಅಧಿಕೃತವಾಗಿ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Sarath Kumar | ಕಾಲಿವುಡ್ ನಟ ಶರತ್‌ಕುಮಾರ್ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ: Taraka Ratna: ʻಯುವ ಧ್ವನಿʼ ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ನಂದಮೂರಿ ತಾರಕ ರತ್ನ; ಆಸ್ಪತ್ರೆಗೆ ದಾಖಲು
ಆಗಿದ್ದೇನು?
ನಾರಾ ಲೋಕೇಶ್ ತಮ್ಮ 4000 ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ ಮಸೀದಿಯ ಹೊರಗೆ ಕಾಲ್ತುಳಿತ ಸಂಭವಿಸಿತು. ಆಗ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ನಂದಮೂರಿ ತಾರಕ ರತ್ನ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ನಾರಾ ಲೋಕೇಶ್ ಹೊರಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ನೂಕುನುಗ್ಗಲಿನಲ್ಲಿ ನಟ ಮೂರ್ಛೆ ತಪ್ಪಿ ಕೆಳಗೆ ಬಿದ್ದರು.