Site icon Vistara News

Taraka Ratna: ʻಯುವ ಧ್ವನಿʼ ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ನಂದಮೂರಿ ತಾರಕ ರತ್ನ; ಆಸ್ಪತ್ರೆಗೆ ದಾಖಲು

taraka-ratna Taraka Ratna faints during 'Yuva Galam

ಬೆಂಗಳೂರು : ತೆಲುಗು ದೇಶಂ ಪಕ್ಷ ದನಾಯಕ ನಾರಾ ಲೋಕೇಶ್ ಅವರ ‘ಯುವ ಗಲಂ’ (ಯುವ ಧ್ವನಿ) ಪಾದಯಾತ್ರೆ ವೇಳೆ ತೆಲುಗು ನಟ ತಾರಕ ರತ್ನ (Taraka Ratna) ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದಾರೆ. ಆಯಾಸದಿಂದಾಗಿ ಪಾದಯಾತ್ರೆಯ ವೇಳೆ ರತ್ನ ಮೂರ್ಛೆ ಹೋದರು ಎಂದು ವರದಿಯಾಗಿದೆ. ಅವರು ಬಿದ್ದ ನಂತರ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಲೋಕೇಶ್ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ.

ಲೋಕೇಶ್ ತಮ್ಮ 4000 ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ ಮಸೀದಿಯ ಹೊರಗೆ ಕಾಲ್ತುಳಿತ ಸಂಭವಿಸಿತು. ಆಗ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ನಂದಮೂರಿ ತಾರಕ ರತ್ನ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ನಾರಾ ಲೋಕೇಶ್ ಹೊರಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ನೂಕುನುಗ್ಗಲಿನಲ್ಲಿ ನಟ ಮೂರ್ಛೆ ತಪ್ಪಿ ಕೆಳಗೆ ಬಿದ್ದರು. ತಕ್ಷಣ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Sankranti 2023 | ʻಸಂಕ್ರಾಂತಿ ತಕಥೈʻ ಹಾಡಿನಲ್ಲಿ ಸ್ಯಾಂಡಲ್‌ವುಡ್‌ , ಟಾಲಿವುಡ್‌ ಸಮಾಗಮ!

ಇದನ್ನೂ ಓದಿ: Actor Sharwanand | ರಾಜಕಾರಣಿ ಮೊಮ್ಮಗಳ ಜತೆ ಹಸೆಮಣೆ ಏರಲು ರೆಡಿಯಾದ ಟಾಲಿವುಡ್‌ ನಟ ಶರ್ವಾನಂದ್!

ಈಗ ನಟ ತಾರಕ ರತ್ನ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. 400 ದಿನಗಳ ನಂತರ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರದಲ್ಲಿ ಪಾದಯಾತ್ರೆ ಮುಕ್ತಾಯವಾಗಲಿದೆ. ಆಂಧ್ರಪ್ರದೇಶದಲ್ಲಿ ಮುಂದಿನ ವರ್ಷ ಜೂನ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ, ವೈಎಸ್ಆರ್ ಕಾಂಗ್ರೆಸ್ ಪಕ್ಷವು 175 ಸ್ಥಾನಗಳಲ್ಲಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ. ಆದರೆ, ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Exit mobile version