ಬೆಂಗಳೂರು: ಸೂಪರ್ ಹೀರೊ ಕಾನ್ಸೆಪ್ಟ್ ಹೊಂದಿರುವ ʻಹನುಮಾನ್ʼ ಸಿನಿಮಾಗೆ (Hanuman Movie) ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ, ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವ ʻಹನುಮಾನ್ʼ ಚಿತ್ರವನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜ.16ರಂದು ವೀಕ್ಷಿಸಿದ್ದಾರೆ. ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶಿವಣ್ಣ. ಜತೆಗೆ ಸಂಸದ ತೇಜಸ್ವಿ ಸೂರ್ಯ ಅವರನ್ನು ತೇಜ ಸಜ್ಜಾ ಭೇಟಿಯಾದರು. ಈ ವೇಳೆ ʻಹನುಮಾನ್ʼ ಸಿನಿಮಾ ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಪತ್ನಿ, ಹಾಗೂ ಮಗಳೊಟ್ಟಿಗೆ ʻಹನುಮಾನ್ʼ ಸಿನಿಮಾವನ್ನು ಶಿವಣ್ಣ ನೋಡಿ ನಟ ತೇಜ್ ಸಜ್ಜಾ ಹಾಗೂ ನಟಿ ಅಮೃತಾ ಅವರಿಗೆ ಸಾಥ್ ಕೊಟ್ಟರು. ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ʻಹನುಮಾನ್ ಸಿನಿಮಾ ಚಿತ್ರ ಎಂದರು. ತೇಜ ಅದ್ಭುತ ಚಿತ್ರ. ಸಜ್ಜಾ, ಅಮೃತಾ, ವರಲಕ್ಷ್ಮೀ ಅಭಿನಯ ತುಂಬ ಚೆನ್ನಾಗಿದೆʼʼಎಂದರು.
ತೇಜ ಮೀಟ್ಸ್ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಅವರನ್ನು ತೇಜ ಸಜ್ಜಾ ಜ.16ರಂದು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ʻಹನುಮಾನ್ʼ ಸಿನಿಮಾವನ್ನು ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾದ ʻಹನುಮಾನ್ʼ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಇದನ್ನೂ ಓದಿ: Box Office Collection: ದೊಡ್ಡ ಚಿತ್ರಗಳ ನಿದ್ದೆಗೆಡಿಸಿ ಮ್ಯಾಜಿಕ್ ಮಾಡಿದ ‘ಹನುಮಾನ್’; ವಾರಾಂತ್ಯದ ಗಳಿಕೆ ಎಷ್ಟು?
ಹನುಮಾನ್ ಮೀಟ್ಸ್ ಭಜರಂಗಿ ❤️@NimmaShivanna sir
— Teja Sajja (@tejasajja123) January 17, 2024
Thank you for all your kind words sir
ಧನ್ಯವಾದಗಳು ಶಿವಣ್ಣ ನಿಮ್ಮ ಪ್ರೀತಿಗೆ
ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ⛳#HanuMan pic.twitter.com/QNuEyE28Mz
ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ (HanuMan) ಕೂಡ ಜ. 12ರಂದೇ ತೆರೆ ಕಂಡಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ʼಗುಂಟೂರು ಖಾರಂʼಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಸುಮಾರು 7.56 ಕೋಟಿ ರೂ. ಬಾಚಿಕೊಂಡಿತ್ತು. ಈ ಪೈಕಿ ಸಿಂಹಪಾಲು ಅಂದರೆ 5.50 ಕೋಟಿ ರೂ. ತೆಲುಗು ಭಾಷೆಯಿಂದ ಸಂಗ್ರಹವಾಗಿದ್ದರೆ 2 ಕೋಟಿ ರೂ. ಹಿಂದಿಯಿಂದ ಹರಿದು ಬಂದಿತ್ತು.