Site icon Vistara News

Siri Super Mom: ಸಿರಿಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿದೆ ಅದ್ಧೂರಿ ರಿಯಾಲಿಟಿ ಶೋ `ಸಿರಿ ಸೂಪರ್‌ MOM’!

A big reality show Siri Super MOM is starting on Sirikannada channel

ಬೆಂಗಳೂರು: ಅಮ್ಮ-ಮಕ್ಕಳ ಅನುಬಂಧ ಸಾರುವ ಅತಿದೊಡ್ಡ ರಿಯಾಲಿಟಿ ಶೋ “ಸಿರಿ ಸೂಪರ್‌ MOM” (Siri Super Mom ) ಮೊಟ್ಟ ಮೊದಲ ಬಾರಿಗೆ ಸಿರಿಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದೆ. ಈ ಸೂಪರ್‌ ಶೋ
ತೀರ್ಪುಗಾರರಾಗಿ ಕಿರುತೆರೆ, ಹಿರಿತೆರೆಯ ವರ್ಸಟೈಲ್‌ ನಟ “ಸಿಹಿ-ಕಹಿ ಚ೦ದ್ರು” ನಡೆಸಿಕೊಡುತ್ತಿದ್ದಾರೆ.

“ಸಿಹಿ-ಕಹಿ ಚ೦ದ್ರು ಅವರ ಪ್ರಕಾರ “ಸಿರಿ ಸೂಪರ್‌ MOM’ ಸ್ಮಾಲ್‌ ಸ್ಕ್ರೀನ್‌ನಲ್ಲಿ ಬರುತ್ತಿರುವ ಬಿಗ್ಗೆಸ್ಟ್‌ ರಿಯಾಲಿಟಿ
ಶೋಗಳಲ್ಲಿ ಒಂದಾಗಿದೆ. ಅಮ್ಮ-ಮಕ್ಕಳ ಬಾ೦ಡಿಂಗ್ಸ್‌ವನ್ನು ಮತ್ತಷ್ಟು ಸ್ಟ್ರಾಂಗ್‌ ಮಾಡುವ ಶೋ ಆಗಿದೆ. ಇದಲ್ಲದೇ ವೀಕ್ಷಕರು ಈ ಶೋನಲ್ಲಿ ಇನ್ಸ್‌ಫೈರಿಂಗ್‌ ಸ್ಟೋರೀಸ್‌ ನೋಡಬಹುದು. ಅಮ್ಮ ಮಕ್ಕಳ ಆಟಗಳನ್ನು ಸೆಲಬ್ರೇಟ್‌ ಮಾಡಬಹುದು. ಈಗಿನ ಮಕ್ಕಳು ತುಂಬಾನೇ ಎನರ್ಜೆಟಿಕ್‌,. ಚಾಲೆಂಜಿಂಗ್‌ ಹಾಗೂ ಟ್ಯಾಲೆಂಟೆಡ್‌. ಒಟ್ಟಾರೆ ಈ ಕಾರ್ಯಕ್ರಮ ಪವರ್‌ ಪ್ಯಾಕ್ಡ್‌ ಎನ್ನಬಹುದುʼʼ ಎಂದರು.

ಮತ್ತೊಬ್ಬ ತೀರ್ಪುಗಾರರಾಗಿ ಸ್ಯಾಂಡಲ್‌ವುಡ್‌ ಸಿಂಪಲ್‌ಕ್ವೀನ್‌ “ಶ್ಹೇತಾ ಶ್ರೀ ವಾತ್ಸವ್‌” ಇರಲಿದ್ದಾರೆ.
ʻʻಈ ಶೋ ಥೀಮ್‌ ನನಗೆ ತುಂಬಾ ಇಷ್ಟ ಆಯ್ತು. ಆ ಕಾರಣಕ್ಕೆ 8 ವರ್ಷಗಳಲ್ಲಿ ಯಾವುದೇ ಆಫರ್‌
ಒಪ್ಪಿಕೊಳ್ಳದೆ ಈ ಆಫರ್‌ನ ಒಪ್ಪಿಕೊ೦ಡಿದ್ದು, ಮುಖ್ಯವಾಗಿ ಅಮ್ಮನ ಜತೆ ಮಗು ಬಂಧ ಹೇಗಿದೆ
ಎಂಬುದನ್ನು ಈ ಶೋ ಮೂಲಕ ಕಂಡ್ಕೋಬಹುದು. ಆ ಕಾರಣಕ್ಕೆ ಈ ಶೋ ಸ್ಪೆಶಲ್‌ ಅನಿಸುತ್ತೆʼʼ ಎಂದರು.

“ಸಿರಿ ಸೂಪರ್‌ MOM’ ಶೋನಲ್ಲಿ ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್ಸ್‌ಗಳು ಸೆಲೆಬ್ರೆಟಿ ಜಡ್ಜ್‌ ಆಗಿ
ಭಾಗವಹಿಸುತ್ತಿದ್ದು, ಪ್ರತಿ ಸಂಚಿಕೆಯಲ್ಲಿ ಅವರ ರಿಯಲ್‌ ಲೈಫ್‌ ಅನುಭವಗಳನ್ನು ಹ೦ಚಿಕೊಂಡು ವೀಕ್ಷಕರನ್ನು ಮನರಂಜಿಸಿಲಿದ್ದಾರೆ.

ಇದನ್ನೂ ಓದಿ: BBK Season 10: ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ʻಸಿರಿʼ ಯಾಕೆ ಇನ್ನೂ ಮದುವೆಯಾಗಿಲ್ಲ?

ನಿರೂಪಕರಾಗಿ ಕಿರುತೆರೆಯ ಖ್ಯಾತ ನಟಿ “ರಶ್ಮಿತಾ ಚ೦ಗಪ್ಪ’ ಮತ್ತು ಕಾಮಿಡಿ ಕಿಲಾಡಿಯ ಖ್ಯಾತ ಹಾಸ್ಯ
ನಟ “ಸೂರಜ್‌’ ಶೋ ನಡೆಸಿಕೊಡತ್ತಿದ್ದಾರೆ. “ಸಿರಿ ಸೂಪರ್‌ MOM’ನ ನಿರ್ದೇಶಕರಾದ “ಮಂಜೇಶ್‌’ ಪ್ರಕಾರ ಇಂತಹ ಒಂದು ಬಿಗ್‌ ರಿಯಾಲಿಟಿ ಶೋ ಸಿರಿಕನ್ನಡದಲ್ಲಿ ಮೊದಲಾಗಿದ್ದು. ಪ್ರತಿ ಸಂಚಿಕೆಯಲ್ಲೂ ಹತ್ತು ಅಮ್ಮ-ಮಕ್ಕಳ ಜೋಡಿ ವಿಭಿನ್ನ ಗೇಮ್‌ನೊಂದಿಗೆ ಸಖತ್‌ ಎಂಟರ್ಟೈನ್ಮೆಂಟ್‌ ನೀಡಲಿದೆ. ಪ್ರತಿ ವಾರ ಒ೦ದು ಸ್ಪೆಷಲ್‌ ಥೀಮ್‌ನೊಂದಿಗೆ
ಈ ಶೋ ಮೂಡಿಬರಲಿದೆʼʼಎಂದರು.

“ಸಿರಿ ಸೂಪರ್‌ MOM’ ಶೋನಲ್ಲಿ ಎಲಿಮೇಶನ್‌ ಸಹ ಇರಲಿದ್ದು, ಗೆದ್ದ ʻʻಸೂಪರ್‌ MOM “ಗೆ 5 ಲಕ್ಷ
ಕ್ಯಾಶ್‌ ಪ್ರೈಜ್‌’ ಸಿಗಲಿದೆ. ಈ ಕಾರ್ಯಕ್ರಮವು ಇದೇ ಡಿಸೆಂಬರ್‌ 4 ರಿಂದ ಸೋಮವಾರದಿಂದ
ಶುಕ್ರವಾರ ಪ್ರಸಾರವಾಗಲಿದೆ ಎ೦ದು ವಾಹಿನಿ ಮುಖ್ಯಸ್ಥರಾದ ರಾಜೇಶ್‌ ರಾಜಘಟ್ಟ ಅವರು ತಿಳಿಸಿದ್ದಾರೆ.

Exit mobile version