ಬೆಂಗಳೂರು: ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ (Anirudh Jatkar ) ಮೇಲೆ ತಗೆದುಕೊಂಡು ಕ್ರಮದ ಕುರಿತಾಗಿ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅನಿರುದ್ಧ, ನಿರ್ದೇಶಕ ಎಸ್.ನಾರಾಯಣ್ ಹೊರತುಪಡಿಸಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹಾಗೂ ಪದಾಧಿಕಾರಿಗಳು ಗೈರಾಗಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ ಮಾತನಾಡಿ ʻʻಒಬ್ಬ ನಟನಿಗೆ ಅನ್ಯಾಯ ಆಗಬಾರದು. ಕಿರುತೆರೆ ನಿರ್ಮಾಪಕರ ಸಂಘಕ್ಕೆ ವಾರ್ನಿಂಗ್ ಕೊಡುತ್ತಿಲ್ಲ. ಇಡಿ ವಾಣಿಜ್ಯ ಮಂಡಳಿ ಸದಸ್ಯರು ಅನಿರುದ್ಧ ಜತೆ ಇರುತ್ತದೆ. ಬ್ಯಾನ್ ಮಾಡುವ ಅಧಿಕಾರ ಸರ್ಕಾರಕ್ಕೂ ಇಲ್ಲ. ಆ ರೀತಿ ಪದ ಬಳಕೆ ಮಾಡಬಾರದು. ನಿರ್ಮಾಪಕರ ಸಂಘದಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳು ಶುರುವಾಗಿದೆ. ಉದಯ ಟಿವಿ ಸೂರ್ಯವಂಶ ಧಾರಾವಾಹಿಗೆ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಅನಿರುದ್ಧ ಅವರನ್ನು ಬೇಕಂತ ಟಾರ್ಗೆಟ್ ಮಾಡುತ್ತಿರುವುದು ನಮಗೆ ಗೊತ್ತಾಗಿದೆ. ನಾನು ಕಿರುತೆರೆ ನಿರ್ಮಾಪಕ ಅಧ್ಯಕ ಭಾಸ್ಕರ್ ಅವರಿಗೆ ಕರೆ ಮಾಡಿದ್ದೆ. ಅವರ ಪ್ರತಿಕ್ರಿಯೆ ಸರಿ ಇಲ್ಲʼʼಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Anirudh Jatkar | ನಿರ್ಮಾಪಕರ ಸಂಘದ ಸದಸ್ಯರು ಗೈರು: ʻಬ್ಯಾನ್ ಮಾಡುವಂತಹ ಕೆಲಸ ಏನು ಮಾಡಿದ್ದೇನೆ ನಾನು: ಅನಿರುದ್ಧ
ನಟ ಅನಿರುದ್ಧ ಮಾತನಾಡಿ ʻʻಆರೂರು ಜಗದೀಶ್ ಅವರು ನನ್ನ ಮಾನಹಾನಿ ಮಾಡಿದ್ದಾರೆ. ನಾನು ಇಂದಿಗೂ ಕೋರ್ಟ್‌ಗೆ ಹೋಗಬಹುದು. ನನಗೂ ಅನಿರುದ್ಧಗೂ ಸಂಬಂಧ ಇಲ್ಲ ಅಂದವರು ಈಗ ಯಾಕೆ ಅಡ್ಡಿ ಮಾಡುತ್ತಿದ್ದಾರೆ. ನಾನು ಆ ವಾಹಿನಿ ಆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿಲ್ಲ. ನಾನು ಈಗ ಕೆಲಸ ಮಾಡುತ್ತಿರುವುದು ಬೇರೆ ವಾಹಿನಿ ಯಲ್ಲಿʼʼಎಂದು ಹೇಳಿಕೆ ನೀಡಿದ್ದಾರೆ.
ಅನಿರುದ್ಧ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದು ʻʻಫಿಲ್ಮ್ ಚೇಂಬರ್‌ಗೆ ಹೋಗದಿರಲು ಕಿರುತೆರೆ ನಿರ್ಮಾಪಕರ ಸಂಘದ ನಿರ್ಧಾರ ಕಾರಣ. ಇದು ಕಿರುತೆರೆ ಸಮಸ್ಯೆ ಹೀಗಾಗಿ ಇಲ್ಲೇ ಬಗೆಹರಿಯಬೇಕು. ಫಿಲ್ಮ್ ಚೇಂಬರ್‌ಗೆ ಬರುತ್ತೇವೆ ಎಂದು ಹೇಳಿದ್ದೆವು. ಆದರೆ ಫಿಲ್ಮ್ ಚೇಂಬರ್‌ಗೆ ಹೋಗದಿರಲು ನಿರ್ಮಾಪಕರ ಸಂಘ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಅಸೋಸಿಯೇಶನ್ ಅವರು ಸೇರಿ ಮೊದಲು ಚರ್ಚೆ ನಡೆಸುತ್ತೇವೆ. ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ. ನಾವು ಎಸ್.ನಾರಾಯಣ್ ಅವರಿಗೆ ಆಗಿರುವ ಸಮಸ್ಯೆಯ ಬಗ್ಗೆ ಹೇಳಿದ್ದೇವೆ. ಅನಿರುದ್ಧ ಅವರನ್ನ ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲ. ಬೇಕಾ ಅಥವಾ ಬೇಡವಾ ಎಂಬುದು ಎಸ್. ನಾರಾಯಣ್ ಅವರೇ ನಿರ್ಧರಿಸುತ್ತಾರೆʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Anirudh Jatkar | ನಟ ಅನಿರುದ್ಧ ಧಾರಾವಾಹಿ ವಿವಾದ: ʻಈ ಹಿಂದೆ ನಟ ಹೇಗೆ ಇದ್ದಿದ್ದರು ನಮಗೆ ಗೊತ್ತಿಲ್ಲʼ ಎಂದ ಎಸ್ ನಾರಾಯಣ್!