ಬೆಂಗಳೂರು : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ (Actor Chandan ) ತಮ್ಮ ಹೋಟೆಲ್ ಒಂದನ್ನು ಶುರು ಮಾಡಿದ್ದಾರೆ. ʻಮೈಸೂರು ರೋಡ್ ಮಂಡಿಪೇಟೆ ಪಲಾವ್ʼ ಎಂಬ ಹೆಸರನ್ನು ಇಟ್ಟಿದ್ದು ಹೋಟೆಲ್ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು.
ಇದನ್ನೂ ಓದಿ | Chandan Kumar | ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ಗೆ ಕಪಾಳಮೋಕ್ಷ ಮಾಡಿದ ಟೆಕ್ನಿಶಿಯನ್ಸ್: ವಿಡಿಯೊ ವೈರಲ್
ಒಬ್ಬರನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಈ ಹಿಂದೆ ಅಷ್ಟೇ ಜೋಡಿ ಮನೆಯ ಗೃಹ ಪ್ರವೇಶದ ಫೋಟೊಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ, ನಂತರ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದರೂ ಕೂಡ ಚಂದನ್ ಹಾಗೂ ಕವಿತಾ ಗೌಡ ನಡುವೆ ಇದ್ದ ಸ್ನೇಹ ದೂರ ಆಗದೆ ಅದು ಇನ್ನಷ್ಟು ಹತ್ತಿರ ಆಗಿ ಪ್ರೀತಿಯಾಗಿ ಬೆಳೆಯಿತು. ಕುಟುಂಬದವರನ್ನು ಒಪ್ಪಿಸಿ ಚಂದನ್ ಹಾಗೂ ಕವಿತಾ ಮದುವೆಯಾಗಿದ್ದಾರೆ.
ಅತ್ತ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಈಚೆಗೆ ಕವಿತಾ ಗೌಡ ನಟಿಸಿದ್ದ ‘ಹುಟ್ಟುಹಬ್ಬದ ಶುಭಾಶಯಗಳು’, ‘ಗೋವಿಂದ ಗೋವಿಂದ’ ಸಿನಿಮಾಗಳು ತೆರೆಕಂಡಿದ್ದವು.
ಇದನ್ನೂ ಓದಿ | Chandan & Kavitha | ಸಿಹಿ ಸುದ್ದಿ ನೀಡಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮತ್ತು ಕವಿತಾ