Site icon Vistara News

Actress Abhinaya | `ಹಿಟ್ಲರ್‌ ಕಲ್ಯಾಣ’ ಧಾರಾವಾಹಿಯ ಅಭಿನಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

Actress Abhinaya

ಬೆಂಗಳೂರು : ‘ಅನುಭವʼ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಾಗೆ (Actress Abhinaya ) ಎರಡು ವರ್ಷದ ಜೈಲು ಶಿಕ್ಷೆ ಪ್ರಕಟವಾಗಿದೆ. ವರದಕ್ಷಿಣೆ ನೀಡುವಂತೆ ಪೋಷಕರ ಜತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ. ಇದೀಗ ಅವರು ನಟಿಸುತ್ತಿರುವ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ಈ ಘಟನೆ ಆದ ಬಳಿಕ ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂದು ನೋಡುಗರಿಗೆ ಕುತೂಹಲವಿತ್ತು. ಇದೀಗ ಅಭಿನಯಾ ನಟಿಸುತ್ತಿದ್ದ ಪಾತ್ರಕ್ಕೆ ನಟಿ ವಾಣಿಶ್ರೀ ಎಂಟ್ರಿ ಕೊಟ್ಟಿದ್ದಾರೆ.

ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ, ಕಿರುಕುಳ ನೀಡಿದ ಆರೋಪದಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿದ ಶಿಕ್ಷೆ ಪ್ರಕಟಿಸಿದೆ. ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ. ಇದರ ಬೆನ್ನಲ್ಲೇ ಅಭಿನಯಾ ನಟಿಸುತ್ತಿದ್ದ ಪಾತ್ರಕ್ಕೆ ನಟಿ ವಾಣಿಶ್ರೀ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾರಂಗದಲ್ಲಿ 25 ವರ್ಷಗಳನ್ನ ಪೂರೈಸಿರುವ ವಾಣಿಶ್ರೀ 300ಕ್ಕೂ ಅಧಿಕ ಸೀರಿಯಲ್, 90ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ | Tunisha Sharma Death Case | ತುನಿಶಾ ಆತ್ಮಹತ್ಯೆಗೆ ಶರಣಾಗಿದ್ದ ಸ್ಥಳದಲ್ಲಿ ಪೂಜೆ ಮಾಡಿ, ಚಿತ್ರೀಕರಣ ಆರಂಭಿಸಿದ ಧಾರಾವಾಹಿ ತಂಡ

ಅಭಿನಯಾ ಕೇಸಿಗೆ ಸಂಬಂಧಪಟ್ಟಂತೆ ಎ1- ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ, ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ. ಸರ್ಕಾರದ ಪರ ವಕೀಲ ಹೆಚ್.ವಿ. ವಿನಾಯಕ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ | Dowry harassment | ʻಅನುಭವʼ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು, 20 ವರ್ಷ ಹಿಂದಿನ ವರದಕ್ಷಿಣೆ ಪ್ರಕರಣ

Exit mobile version